ಮಂಗಳೂರು ಅಗಸ್ಟ್ 26:

ಬಂಧಿತರು ಜೈಲಿನ ಹೊರಬದಿಯಿಂದ ಗಾಂಜಾ ಪೂರೈಕೆಗೆ ಯತ್ನಿಸುತ್ತಿದ್ದರು ಆರೋಪಿಸಲಾಗಿದೆ. ಜೈಲಿನ ಗೋಡೆಯ ಮೂಲಕ ಬಿಸಾಕಿ ಗಾಂಜಾ ಪೂರೈಕೆಗೆ‌ ಸ್ಕೆಚ್ ಹಾಕುತ್ತಿದ್ದರು ಎಂದು ಹೇಳಲಾಗಿದೆ. ಗಾಂಜಾ ಹಿಡಿದುಕೊಂಡು ಹೊರಗೆ ಎರುವ ಅಂಗಡಿಯೊಂದರ ಬಳಿ‌ ನಿಂತಿದ್ದ ಆರೋಪಿಗಳನ್ನು ಪೊಲೀಸರು ಮಾಲು ಸಮೇತ ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಕದ್ರಿ ಠಾಣಾ ಪೊಲೀಸರಿಂದ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ 3500 ರೂ. ಮೌಲ್ಯದ 250 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳು ವಿವಿಧ ಪ್ರಕರಣಗಳಲ್ಲಿ ಈ‌ ಹಿಂದೆ ಜೈಲುವಾಸಿಗಳಾಗಿದ್ದರು ಎಂದು ಹೇಳ ಲಾಗಿದೆ. ಈ ಕುರಿತು ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.