LATEST NEWS
ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಗೆ ದಾಳಿ ಭೀತಿ ಹಿನ್ನೆಲೆ ‘Z’ ಶ್ರೇಣಿಯ ಭದ್ರತೆ..!

ಹೊಸದಿಲ್ಲಿ: ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರಿಗೆ ಕೇಂದ್ರ ಸರಕಾರವು ‘ಝೆಡ್’ ಶ್ರೇಣಿಯ ಭದ್ರತೆ ಒದಗಿಸಿದೆ. ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿಯಿರುವಾಗ ರಾಜೀವ್ ಕುಮಾರ್ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಗುಪ್ತಚರ ವರದಿಯ ಆಧಾರದ ಮೇಲೆ ಮುಖ್ಯ ಚುನಾವಣಾ ಆಯುಕ್ತರಿಗೆ ‘ಝೆಡ್’ ಶ್ರೇಣಿಯ ಭದ್ರತೆಯನ್ನು ಗೃಹ ಸಚಿವಾಲಯ ಒದಗಿಸಿದೆ . ಮುಖ್ಯ ಚುನಾವಣಾ ಆಯುಕ್ತರ ಮೇಲೆ ಸಂಭಾವ್ಯ ದಾಳಿ ಭೀತಿ ಇರುವ ಹಿನ್ನೆಲೆಯಲ್ಲಿ ಶಸ್ತ್ರ ಸಜ್ಜಿತ ಕಮಾಂಡೋಗಳು ರಾಜೀವ್ ಕುಮಾರ್ ಅವರಿಗೆ ದಿನದ 24 ಗಂಟೆಯೂ ಭದ್ರತೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ಕೇಂದ್ರ ಗೃಹ ಸಚಿವಾಲಯವು ಈ ಸಂಬಂಧ ಕೇಂದ್ರೀಯ ಮೀಸಲು ಪೊಲೀಸ್ ಪಡೆಗೆ ಸೂಚನೆ ನೀಡಿದ್ದು, 40 ರಿಂದ 45 ಸಿಬ್ಬಂದಿ ಇರುವ ತುಕಡಿಯನ್ನು ಮುಖ್ಯ ಚುನಾವಣಾ ಆಯುಕ್ತರಾದ ರಾಜೀವ್ ಕುಮಾರ್ ಅವರ ಭದ್ರತೆಗೆ ನಿಯೋಜಿಸುವಂತೆ ಆದೇಶ ನೀಡಿದೆ.
