Connect with us

LATEST NEWS

ಲೆಬನಾನ್ ನಲ್ಲಿ ಏಕಾಏಕಿ ಸ್ಪೋಟಗೊಂಡ ಹಿಜ್ಬುಲ್ಲಾ ಪೇಜರ್ ಗಳು – 8 ಮಂದಿ ಸಾವು- ಎರಡು ಸಾವಿರಕ್ಕೂ ಅಧಿಕ ಮಂದಿಗೆ ಗಂಭೀರಗಾಯ

ಲೆಬನಾನ್ ಸೆಪ್ಟೆಂಬರ್ 17: ಲೆಬನಾನ್ ನಲ್ಲಿ ಏಕಾಏಕಿ ಪೇಜರ್ ಗಳು ಸ್ಪೋಟಗೊಂಡ ಪರಿಣಾಮ 8 ಮಂದಿ ಸಾವನಪ್ಪಿದ್ದು, ಎರಡು ಸಾವಿರಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದು ಇಸ್ರೇಲ್ ಕಾರ್ಯ ಎಂದು ಹಿಜ್ಬುಲ್ಲಾ ಆರೋಪಿಸಿದೆ.

ಹಿಜ್ಬುಲ್ಲಾ ಸಂಘಟನೆ ತನ್ನ ಕಾರ್ಯಕರ್ತರಿಗಾಗಿ ವಿಶೇಷವಾಗಿ ಭದ್ರತಾ ವ್ಯವಸ್ಥೆ ಇರುವ ಪೇಜರ್ ಸೌಲಭ್ಯಹೊಂದಿದೆ. ಇದೀಗ ಅದನ್ನೆ ಸ್ಪೋಟಗೊಳ್ಳುವಂತೆ ಮಾಡಲಾಗಿದೆ. ಈ ಘಟನೆಯಲ್ಲಿ 8 ಮಂದಿ ಸಾವನಪ್ಪಿದ್ದು, 2750 ಜನ ಗಾಯಗೊಂಡಿದ್ದಾರೆ. ಅದರಲ್ಲಿ 200ಕ್ಕೂ ಅಧಿಕ ಮಂದಿ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ಲೆಬನಾನ್‌ನಲ್ಲಿನ ತನ್ನ ರಾಯಭಾರಿ ಮೊಜ್ತಾಬಾ ಅಮಾನಿ ಕೂಡ ಗಾಯಗೊಂಡಿದ್ದಾರೆ ಎಂದು ಇರಾನ್‌ನ ರಾಜ್ಯ ಮಾಧ್ಯಮ ವರದಿ ಮಾಡಿದೆ. ಲೆಬನಾನ್‌ನಲ್ಲಿ ಸ್ಥಳೀಯ ಕಾಲಮಾನ ಮಧ್ಯಾಹ್ನ 3:30 ಕ್ಕೆ (ಸಂಜೆ 6 IST) ಸ್ಫೋಟಗಳು ಸಂಭವಿಸಿವೆ.

ಸಾಮಾಜಿಕ ಜಾಲತಾಣದಲ್ಲಿ ಈ ಘಟನೆಯ ವಿಡಿಯೋಗಳು ಹರಿದಾಡುತ್ತಿದ್ದು, ಮಾರ್ಕೆಟ್,ರಸ್ತೆ, ಶಾಪಿಂಗ್ ಮಾಲ್ ಗಳಲ್ಲೂ ಜನರ ಜೇಬಿನಲ್ಲಿದ್ದ ಪೇಜರ್ ಗಳು ಸ್ಪೋಟಗೊಂಡ ವಿಡಿಯೋ ವೈರಲ್ ಆಗಿದೆ.
ಈಗಾಗಲೇ ಹಿಜ್ಬುಲ್ಲಾ ಸಂಘಟನೆ ಇದೊಂದು ದೊಡ್ಡ ಭದ್ರತಾ ಲೋಪವಾಗಿದ್ದು, ಇದರ ಹಿಂದೆ ಇಸ್ರೇಲ್ ಇದೆ ಎಂದು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *