LATEST NEWS
ತೌಕ್ತೆ ಚಂಡಮಾರುತದ ರುದ್ರ ನರ್ತನ, ಜಿಲ್ಲೆಯಲ್ಲಿಂದು ಆರೆಂಜ್ ಅಲರ್ಟ್
ಉಡುಪಿ , ಮೇ 16: ತೌಕ್ತೆ ಚಂಡಮಾರುದಿಂದಾಗಿ ಜಿಲ್ಲೆಯಾಧ್ಯಂತ ಜಿಟಿ ಜಿಟಿ ಮಳೆ ಬರುತ್ತಿದ್ದು, ಜಿಲ್ಲೆಯಲ್ಲಿಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಮಧ್ಯಾಹ್ನದ ವೇಳೆ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ.
ಕಡಲು ಪ್ರಕ್ಷ್ಯುಬ್ದವಾಗಿದ್ದು ಮರವಂತೆ, ಮಲ್ಪೆ ಸಮುದ್ರತೀರದಲ್ಲಿ ಸಮುದ್ರದಲೆಗಳ ಅಬ್ಬರ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದು, ಮೀನುಗಾರರಿಗೆ ಕಡಲಿಗಿಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಮನೆ ಮುಳುಗಡೆ ಯಾಗುವ ಆತಂಕ ವಿದ್ದರೆ ತಿಳಿಸುವಂತೆ ಜಿಲ್ಲಾಧಿಕಾರಿ ಜಗದೀಶ್ ಮನವಿ ಮಾಡಿದ್ದಾರೆ.
ಈಗಾಗಲೇ ತೌಕ್ತೆ ಚಂಡಮಾರುತಕ್ಕೆ 40ಮನೆಗಳು, 5ಮೀನುಗಾರಿಕಾ ಶೆಡ್ ಹಾನಿಯಾಗಿದ್ದು, ಸಾವಿರಾರು ತೆಂಗಿನ ಮರಗಳು ಸಮುದ್ರಪಾಲಾಗಿದೆ. ಈಗಾಗಲೇ 75 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗದೆ. ಸುಸಜ್ಜಿತ ಪುನರ್ವಸತಿ ಕೇಂದ್ರ ಸಿದ್ದವಾಗಿದ್ದು, ಇಂದು ಇನ್ನಷ್ಟು ಹಾನಿ ವರದಿ ಕೈಸೇರಲಿದೆ ಎಂದು ಜಿಲ್ಲಾಧಿಕಾರಿ ಜಗದೀಶ್ ಮಾಹಿತಿ ನೀಡಿದ್ದಾರೆ.