Connect with us

LATEST NEWS

ಏಲಿಯನ್‌ ಥರ ಕಾಣಿಸಲು ಮೂಗು, ತುಟಿ, ಕಿವಿ, ನಾಲಿಗೆ ಕತ್ತರಿಸಿಕೊಂಡ ಈ ಆಸಾಮಿ

ವಾಷಿಂಗ್ಟನ್, ಮಾರ್ಚ್ 16:  ಜಗತ್ತಿನಲ್ಲಿ ಎಂತೆಂಥ ವಿಚಿತ್ರ ಜನರು ಇರುತ್ತಾರೆ ಎಂದು ಹೇಳುವುದೇ ಕಷ್ಟ. ಆದರೆ ಇಲ್ಲೊಬ್ಬ ಆಸಾಮಿ ಕಥೆ ವಿಚಿತ್ರ ಮಾತ್ರವಲ್ಲದೆ, ಭಯಾನಕವೂ ಆಗಿದೆ.

ಏಲಿಯನ್‌ ಶಬ್ದವನ್ನು ಬಹುತೇಕ ಎಲ್ಲರೂ ಕೇಳಿಯೇ ಇದ್ದೇವೆ. ಏಲಿಯನ್‌ ಎನ್ನುವುದು ಇದೆ ಎಂದು ಇದಾಗಲೇ ಹಲವಾರು ಸಂಶೋಕರು ಹೇಳಿದ್ದರೂ ಇವುಗಳ ಕುರಿತಂತೆ ಇನ್ನೂ ಸಂಶೋಧನೆಗಳು ನಡೆಯುತ್ತಲೇ ಇವೆ. ಆದರೆ ಏಲಿಯನ್‌ ಎಂದರೆ ಇದೇ ರೀತಿ ಇರುತ್ತದೆ ಎಂಬ ಚಿತ್ರದ ಪರಿಕಲ್ಪನೆಯಂತೂ ಬಂದಾಗಿದೆ. ಇಂಥದ್ದೇ ಏಲಿಯನ್‌ ಥರ ಕಾಣುವ ಇಚ್ಛೆ ವ್ಯಕ್ತಪಡಿಸಿರುವ 32 ವರ್ಷದ ಯುವಕನೊಬ್ಬ ತನ್ನ ಮೂಗು, ಉಬ್ಬು, ಕಿವಿ, ತುಟಿ ಹಾಗೂ ನಾಲಿಗೆಯನ್ನು ಕತ್ತರಿಸಿಕೊಂಡಿದ್ದಾನೆ!

ಇಂಥದ್ದೊಂದು ವಿಪರೀತ ಎನಿಸುವ ಹುಚ್ಚು ಸಾಹಸಕ್ಕೆ ಕೈಹಾಕಿರುವವರು ಅಂಥೋನಿ ಲಫ್ರೆಡೊ ಎಂಬಾತ. ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಈ ಅಂಥೋನಿ, ಮೈತುಂಬಾ ಏಲಿಯನ್‌ ರೀತಿ ಟ್ಯಾಟೂ ಹಾಕಿಸಿಕೊಂಡು ದೇಹದ ಪೂರ್ತಿ ಚುಚ್ಚಿಸಿಕೊಂಡಿರುವುದು ಸಾಲದು ಎಂಬಂತೆ ತನ್ನ ಅಂಗಾಂಗಗನ್ನೆಲ್ಲಾ ಕತ್ತರಿಸಿಕೊಂಡಿದ್ದಾನೆ!

ತನ್ನ ತಾಯಿಯ ಹುಟ್ಟುಹಬ್ಬದಂದು ಏನಾದರೊಂದು ಡಿಫರೆಂಟ್‌ ಆಗಿ ಕಾಣಬೇಕು ಎಂದು ಹೀಗೆ ಮಾಡಿದ್ದಾನಂತೆ ಈತ. ಇನ್ನೂ ವಿಚಿತ್ರ ಎಂದರೆ ಇದಕ್ಕೆ ತಾಯಿ ಕೂಡ ಸಂಪೂರ್ಣ ಬೆಂಬಲ ನೀಡಿದ್ದಾರಂತೆ. ಏಲಿಯನ್ ಮಾದರಿ ಕಾಣಲು ಆಂಥೋನಿ ಲೋಫ್ರೆಡೋ ತನ್ನ ದೇಹದ ಮೇಲಿನ ಚರ್ಮವನ್ನು ತೆಗೆದು ಮೆಟಲ್ ಅಂಟಿಸಿಕೊಂಡಿದ್ದು, ತನ್ನ ತೋಳು, ಕೈ ಕಾಲು, ಬೆರಳು ಹಾಗೂ ತಲೆಯ ಹಿಂಭಾಗ ಕೂಡ ಬದಲಾವಣೆ ಮಾಡಿಕೊಳ್ಳಲು ಬಯಸುತ್ತೇನೆ ಎಂದು ಹೇಳಿಕೊಂಡಿದ್ದಾನೆ. ತನ್ನ ದೇಹದಲ್ಲಿ ಮಾಡಿಕೊಂಡ ಬದಲಾವಣೆಗಳ ಕುರಿತಂತೆ ಯಾವುದೇ ಬೇಸರವಾಗಿಲ್ಲ ಎಂದು ತಿಳಿಸಿದ್ದಾನೆ.

ನನ್ನನ್ನು ನೋಡಿದಾಗ ನಿಮಗೆ ಕನಸಿನಂತೆ ಕಾಣಿಸಬಹುದು. ಆದರೆ ನಾನು ನಿಮ್ಮ ಮುಖದಲ್ಲಿ ನಗೆಬೀರಿಸಲು ಪ್ರಯತ್ನಿಸುತ್ತೇನೆ. ನೀವು ನನ್ನ ಮೊದಲ ಗೆಲುವು ಎಂದು ಕ್ಯಾಪ್ಷನ್ ಹಾಕಿಕೊಂಡಿರುವ ಈತ ತಾಯಿಯ ಜತೆಗಿನ ತನ್ನ ವಿಚಿತ್ರ ವೇಷವನ್ನು ಶೇರ್‌ ಮಾಡಿಕೊಂಡಿದ್ದಾನೆ.

ಮೂಗು, ನಾಲಿಗೆ ಸೇರಿಂದ ತನ್ನ ಅಂಗಗಳನ್ನು ಕತ್ತರಿಸಿಕೊಂಡಿದ್ದ ವೇಳೆ ಈತ ಮಾತನಾಡಲು ಬಹಳ ಕಷ್ಟಪಟ್ಟಿದ್ದರೂ ತಾನು ಏಲಿಯನ್‍ನಂತೆ ಕಾಣಿಸುತ್ತಿರುವ ಬಗ್ಗೆ ಹೆಮ್ಮೆ ಇದೆ ಎಂದಿದ್ದಾನೆ, ಬ್ಲ್ಯಾಕ್‌ ಏಲಿಯನ್ ಪ್ರಾಜೆಕ್ಟ್ ಎಂಬ ಹೆಸರಿನಲ್ಲಿ ಈತ ತನ್ನ ದೇಹದಲ್ಲಿ ಮಾರ್ಪಾಡುಗಳನ್ನು ಮಾಡಿಕೊಂಡಿದ್ದಾನೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *