LATEST NEWS
ದೇಶದಾದ್ಯಂತ ಮೂರನೇ ಹಂತದ ಲಾಕ್ ಡೌನ್ ಮೇ 4 ರಿಂದ ಎರಡು ವಾರ ಲಾಕ್ ಡೌನ್ ವಿಸ್ತರಣೆ
ದೇಶದಾದ್ಯಂತ ಮೂರನೇ ಹಂತದ ಲಾಕ್ ಡೌನ್ ಮೇ 4 ರಿಂದ ಎರಡು ವಾರ ಲಾಕ್ ಡೌನ್ ವಿಸ್ತರಣೆ
ಮಂಗಳೂರು ಮೇ.01: ದೇಶದಲ್ಲಿ ಮತ್ತೆ ಎರಡು ವಾರ ಲಾಕ್ ಡೌನ್ ವಿಸ್ತರಣೆ ಮಾಡಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ಮೇ 4 ರಿಂದ ಮೇ 17 ರ ತನಕ ದೇಶದಾದ್ಯಂತ ಮೂರನೆ ಹಂತದ ಲಾಕ್ ಡೌನ್ ವಿಸ್ತರಣೆ ಆಗಲಿದೆ.
ಮೂರನೇ ಹಂತದ ಲಾಕ್ ಡೌನ್ ವೇಳೆ ಗ್ರೀನ್ ಹಾಗೂ ಆರೆಂಜ್ ಝೋನ್ ಗಳಿಗೆ ಸ್ವಲ್ಪ ಸಡಿಲಿಕೆ ಇರಲಿದೆ. ಆದರೆ ರೆಡ್ ಝೋನ್ ನಲ್ಲಿ ಯಾವುದೇ ಸಡಿಲಿಕೆ ಇರುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಆರ್ಥಿಕತೆಗೆ ಉತ್ತೇಜನ ನೀಡುವ ದೃಷ್ಟಿಯಿಂದ ಆರೆಂಜ್ ಹಾಗೂ ಕಿತ್ತಳೆ ವಲಯಗಳಲ್ಲಿ ಕೆಲವೊಂದು ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡಲಾಗಿದೆ ಆದರೆ ಮೂರೂ ವಲಯಗಳಲ್ಲಿ ಸಾರ್ವಜನಿಕರ ಮುಕ್ತ ಸಂಚಾರಕ್ಕೆ ಇನ್ನೆರಡು ವಾರಗಳ ಕಾಲ ನಿರ್ಬಂಧ ಇರಲಿದೆ.
ದೇಶದ 130 ಜಿಲ್ಲೆಗಳು ರೆಡ್ ಝೋನ್ ನಲ್ಲಿವೆ. ಈ ಜಿಲ್ಲೆಗಳಲ್ಲಿ ಕಠಿಣ ಲಾಕ್ ಡೌನ್ ಪರಿಸ್ಥಿತಿ ಮೇ 17ರವರೆಗೆ ಮುಂದುವರಿಯಲಿದೆ. ದೇಶಾದ್ಯಂತ ಥಿಯೇಟರ್, ಮಾಲ್, ಜಿಮ್, ಬಾರ್ ಗಳು ಮುಚ್ಚಿಯೇ ಇರಲಿವೆ. ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೂ ಮೇ 17ರವರೆಗೆ ನಿರ್ಬಂಧ ಮುಂದುವರಿಯಲಿದೆ.
ವಿವಿಧ ಚಟುವಟಿಕೆಗಳನ್ನು ನಿಯಂತ್ರಿಸಲು ಎಂಹೆಚ್‌ಎ ಹೊಸ ಮಾರ್ಗಸೂಚಿಗಳನ್ನು ಸಹ ನೀಡಿದೆ. ಅದು ಈ ಕೆಳಗಿನಂತಿವೆ
* ಲಾಕ್ ಡೌನ್ ಅವಧಿಯಲ್ಲಿ ಅಗತ್ಯ ವಸ್ತುಗಳಾದ ಹಾಲು, ಹಣ್ಣು, ತರಕಾರಿ ಮೊದಲಾದವುಗಳ ಮಾರಾಟಕ್ಕೆ ಯಾವುದೇ ಅಡೆತಡೆ ಇರುವುದಿಲ್ಲ.
* ಶಾಲಾ-ಕಾಲೇಜುಗಳಿಗೆ ಎಂದಿನಂತೆ ಲಾಕ್ ಡೌನ್ ಮುಗಿಯುವವರೆಗೂ ರಜೆ ಘೋಷಿಸಲಾಗಿದೆ.
* ಮೇ 17ರ ವರೆಗೆ ಮದ್ಯ ಮಾರಾಟ ಬಂದ್* ಎಲ್ಲಾ ಆಸ್ಪತ್ರೆಯ OPD ತೆರೆಯಲು ಸೂಚನೆ
* ಸಾರಿಗೆ ಸಂಚಾರಕ್ಕೆ ನಿರ್ಬಂಧವಿದ್ದು, ವಿಮಾನ, ರೈಲುಗಳ ಸಂಚಾರವೂ ಇರುವುದಿಲ್ಲ. ಗ್ರೀನ್ ಝೋನ್ ವಲಯದಲ್ಲಿ ಈಗಾಗಲೇ ಘೋಷಿಸಲಾಗಿರುವ ವಿನಾಯಿತಿಗಳು ಮುಂದುವರಿಯುತ್ತವೆ.
* ಮೂರೂ ವಲಯಗಳಲ್ಲಿ ಹೋಟೆಲ್ ಗಳಲ್ಲಿ ಪಾರ್ಸೆಲ್ ನೀಡಲು ಮಾತ್ರ ಅವಕಾಶವಿದ್ದು, ಪಬ್, ಕ್ಲಬ್, ಚಿತ್ರಮಂದಿರ, ಮಾಲ್ ಗಳನ್ನು ತೆರೆಯುವುದಕ್ಕೆ ನಿರ್ಬಂಧ ಹೇರಲಾಗಿದೆ.
* ಕಾರಿನಲ್ಲಿ ಇಬ್ಬರು ಮಾತ್ರ ಪ್ರಯಾಣಿಸಲು ಅವಕಾಶವಿದ್ದು, ಬೈಕಿನಲ್ಲಿ ಒಬ್ಬರು ಮಾತ್ರ ಸಂಚಾರ ಮಾಡಬಹುದಾಗಿದೆ. ಆರೆಂಜ್ ಝೋನ್ ನಲ್ಲಿ ಕ್ಯಾಬ್ ಮತ್ತು ಟ್ಯಾಕ್ಸಿಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ.
* ಮಕ್ಕಳು ಮತ್ತು ವಯೋವೃದ್ಧರು ಮನೆಯಲ್ಲೇ ಇರುವಂತೆ ಸೂಚಿಸಲಾಗಿದ್ದು, ಉಳಿದವರು ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಹೊರ ಬರಬಹುದಾಗಿದೆ.
* ಗ್ರೀನ್ ಝೋನ್ ನಲ್ಲಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಡಲಿದೆ ಶೇಕಡಾ 50 ಸೀಟುಗಳನ್ನು ಮಾತ್ರ ಭರ್ತಿ ಮಾಡಬಹುದಾಗಿದೆ.