Connect with us

    LATEST NEWS

    ಗ್ರೀನ್ ಝೋನ್ ಗಳಲ್ಲಿ ಮದ್ಯಮಾರಾಟಕ್ಕೆ ಅನುಮತಿ..!!

    ಗ್ರೀನ್ ಝೋನ್ ಗಳಲ್ಲಿ ಮದ್ಯಮಾರಾಟಕ್ಕೆ ಅನುಮತಿ..!!

    ನವದೆಹಲಿ ಮೇ.1: ಕೊರೊನಾದ ಲಾಕ್ ಡೌನ್ ನಿಂದಾಗಿ ಕಂಗೆಟ್ಟಿದ್ದ ಮದ್ಯಪ್ರಿಯರಿಗೆ ಕೇಂದ್ರ ಸರಕಾರ ಒಂದು ಗುಡ್‌ ನ್ಯೂಸ್ ನೀಡಿದ್ದು, ಕೊರೊನಾ ಗ್ರೀನ್ ಝೋನ್ ನಲ್ಲಿರುವವರಿಗೆ ಮೇ 4 ರಿಂದ ಮದ್ಯ ಪೂರೈಕೆ ಆಗಲಿದೆ.

    ಕೇಂದ್ರ ಸರ್ಕಾರ ಇಂದು ಮತ್ತೆ ಮೂರು ವಾರಗಳ ಕಾಲ ಲಾಕ್‍ಡೌನ್ ವಿಸ್ತರಿಸಿದ್ದು, ಮೇ 17ರವರೆಗೆ ಲಾಕ್‍ಡೌನ್ ಮುಂದುವರಿಯಲಿದೆ. ಈ ಅವಧಿಯಲ್ಲಿ ಹಸಿರು ವಲಯದ ಜಿಲ್ಲೆಗಳಲ್ಲಿ ಮದ್ಯ ಮಾರಾಟದ ಜೊತೆ ಪಾನ್ ಅಂಗಡಿ ತೆರೆಯಲು ಅನುಮತಿ ನೀಡಿದೆ. ಆದರೆ ಮದ್ಯ ಮಾರಾಟಕ್ಕೆ ಅನುಮತಿ ನೀಡಿದರೂ ಕೆಲವು ಷರತ್ತುಗಳನ್ನು ವಿಧಿಸಿದೆ.

    ಮದ್ಯದಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಒಂದು ಬಾರಿ 5 ಜನ ಅಂಗಡಿಯ ಮುಂದೆ ನಿಲ್ಲಬಹುದು. ವ್ಯಕ್ತಿಗಳು ಕನಿಷ್ಟ 6 ಅಡಿ ಅಂತರದಲ್ಲಿ ನಿಲ್ಲಬೇಕು ಎಂದು ಷರತ್ತು ವಿಧಿಸಿದೆ. ಹಸಿರು ವಲಯಲ್ಲಿ ಮಾತ್ರ ಅನುಮತಿ ನೀಡಿದ್ದು, ಕೆಂಪು ವಲಯ ಮತ್ತು ಕಿತ್ತಾಳೆ ವಲಯದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಿಲ್ಲ.

    Share Information
    Advertisement
    Click to comment

    You must be logged in to post a comment Login

    Leave a Reply