LATEST NEWS
ಕಾಸರಗೋಡಿನಲ್ಲಿ ಕರೋನಾ ವೈರಸ್ ಪ್ರಕರಣ
ಕಾಸರಗೋಡಿನಲ್ಲಿ ಕರೋನಾ ವೈರಸ್ ಪ್ರಕರಣ
ಮಂಗಳೂರು : ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಮಾರಕ ಕರೋನಾ ವೈರಸ್ ಈಗ ದಕ್ಷಿಣಕನ್ನಡ ಜಿಲ್ಲೆಯ ಗಡಿಭಾಗದ ಕಾಸರಗೋಡಿಗೂ ಕಾಲಿಟ್ಟಿದೆ. ಕಾಸರಗೋಡಿನಲ್ಲಿ ಮೊದಲ ಕರೋನಾದ ಪ್ರಕರಣ ದಾಖಲಾಗಿದ್ದು, ಕೇರಳದಲ್ಲಿ ಇದುವರೆಗೆ ಮೂರು ಕರೋನಾ ಪ್ರಕರಣ ಪತ್ತೆಯಾಗಿವೆ.
ಚೀನಾದಲ್ಲಿ 360 ಕ್ಕೂ ಅಧಿಕ ಜನರನ್ನು ಬಲಿ ತೆಗೆದುಕೊಂಡಿರುವ ಕರೋನಾ ವೈರಸ್ ಈಗ ದಕ್ಷಿಣಕನ್ನಡ ಜಿಲ್ಲೆಯ ಗಡಿಭಾಗವಾದ ಕಾಸರಗೋಡು ಜಿಲ್ಲೆಯಲ್ಲಿ ಪತ್ತೆಯಾಗಿದ್ದು, ಚೀನಾದ ವುಹಾನ್ ನಲ್ಲಿದ್ದ ಕಾಸರಗೋಡಿನ ನಿವಾಸಿಯೊಬ್ಬರಿಗೆ ಕರೋನಾ ಸೋಂಕು ಪತ್ತೆಯಾಗಿದೆ. ರೋಗಿಯನ್ನು ಕಾಂಞಗಾಡ್ ನ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Kerala Health Minister KK Shailaja: Third case of #coronavirus tested positive in Kerala in Kasargod. pic.twitter.com/g39OgJ98JO
— ANI (@ANI) February 3, 2020
ಈ ಕುರಿತಂತೆ ಮಾಹಿತಿ ನೀಡಿದ ಕೇರಳ ಆರೋಗ್ಯ ಸಚಿವೆ ಕೆ.ಕೆ ಶೈಲಜಾ ಇದುವರೆಗೆ ಕೇರಳದಲ್ಲಿ ಮೂರು ಕರೋನಾ ವೈರಸ್ ಪ್ರಕರಣ ದಾಖಲಾಗಿದ್ದು, ಕಾಸರಗೋಡಿನದ್ದು ಮೂರನೇ ಪ್ರಕರಣ ಎಂದು ತಿಳಿಸಿದ್ದಾರೆ. ಕಾಸರಗೋಡಿನ ಕರೋನಾ ವೈರಸ್ ರೋಗಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದು ತಿಳಿಸಿದರು.
ಕೇರಳ ಕರ್ನಾಟಕದ ಗಡಿ ಭಾಗದ ಜಿಲ್ಲೆ ಕಾಸರಗೋಡಿನಲ್ಲಿ ಈ ಪ್ರಕರಣ ಪತ್ತೆಯಾದ ಹಿನ್ನಲೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆತಂಕ ಮನೆ ಮಾಡಿದೆ. ಜಿಲ್ಲಾಡಳಿತ ಈಗಾಗಲೇ ಕರೋನ ವೈರಸ್ ಸಂಬಂಧಿಸಿದಂತೆ ಸಿದ್ದತೆಗಳನ್ನು ಕೈಗೊಂಡಿದ್ದು, ಯಾವುದೇ ರೀತಿಯ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದೆ.