DAKSHINA KANNADA
ಕುಕ್ಕೆಯಲ್ಲಿ ದೇವರ ಆರತಿ ಸಂದರ್ಭ ಮಹಿಳೆಯ ಕರಿಮಣಿಗೆ ಕೈ ಹಾಕಿದ ಖದೀಮ..!
ಸುಬ್ರಹ್ಮಣ್ಯ : ಪ್ರಸಿದ್ದ ಯಾತ್ರಾ ಸ್ಥಳ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಳ್ಳರ ಹಾವಳಿ ದಿನೇ ದಿನೇ ಹೆಚ್ಚುತ್ತಿದ್ದು ಭಕ್ತರು ಆತಂಕ್ಕೀಡಾಗಿದ್ದಾರೆ, ಇದಕ್ಕೆ ಪೂರಕ ಎಂಬಂತೆ ದೇವರ ದರ್ಶನ ಪಡೆದು ಆರತಿ ತೆಗೆದುಕೊಳ್ಳುವ ಸಮಯ ಮಹಿಳೆಯೊಬ್ಬರ 1.4 ಲಕ್ಷ ಮೌಲ್ಯದ ಚಿನ್ನದ ಕರಿಮಣಿ ಸರ ಕಳ್ಳರು ಎಗರಿಸಿದ್ದಾರೆ.
ಕಡಬದ ಇಚ್ಲಂಪಾಡಿ ಬರೆಮೇಲು ಭಾರತಿ ಎಮ್ ಡಿ ರವರು ಅ.22ರಂದು ಮಧ್ಯಾಹ್ನ ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ದೇವರ ದರ್ಶನ ಪಡೆದು ಆರತಿ ತೆಗೆದುಕೊಳ್ಳುವ ಸಮಯ ಅವರ ಕುತ್ತಿಗೆಯಲ್ಲಿದ್ದ 4 ಪವನ್ ತೂಕದ ಕರಿಮಣಿ ಸರ ನಾಪತ್ತೆಯಾಗಿತ್ತು.
ದೇಗುಲದ ವಠಾರದಲ್ಲಿ ಹುಟುಕಾಟ ನಡೆಸಿದರೂ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿದ್ದು ಚಿನ್ನದ ಕರಿಮಣಿಯ ಅಂದಾಜು ಮೌಲ್ಯ 1.4 ಲಕ್ಷ ರೂ.ಎಂದು ಸುಬ್ರಹ್ಮಣ್ಯ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಅ.ಕ್ರ ನಂಬ್ರ : 75-2023 ಕಲಂ: 379 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.