LATEST NEWS
ಉಪ್ಪಿನಕಾಯಿ ಕದ್ದು ಸಿಸಿಟಿವಿಯಲ್ಲಿ ಸೆರೆಯಾದ ಖತರ್ನಾಕ್ ಕಳ್ಳ
ಉಪ್ಪಿನಕಾಯಿ ಕದ್ದು ಸಿಸಿಟಿವಿಯಲ್ಲಿ ಸೆರೆಯಾದ ಖತರ್ನಾಕ್ ಕಳ್ಳ
ಮಂಗಳೂರು ಸಪ್ಟೆಂಬರ್ 27: ಬೆಲೆ ಬಾಳುವ ವಸ್ತುಗಳನ್ನು ಕದ್ದು ಅಂಗಡಿಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿರುವವರು ಇದ್ದಾರೆ. ಆದರೆ ಇಲ್ಲೊಬ್ಬ ಕಳ್ಳ ಅಂಗಡಿ ಯಲ್ಲಿ ಇಟ್ಟ ಉಪ್ಪಿನಕಾಯಿ ಬಾಟಲ್ ನ್ನು ಕದಿಯುತ್ತಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಂಗಳೂರು ನಗರದ ಮಣ್ಣಗುಡ್ಡ ಪ್ರದೇಶದಲ್ಲಿರುವ ಹ್ಯಾಂಗ್ಯೋ ಶಾಫೀ ಬೇಕರಿಯೊಂದಕ್ಕೆ ಗ್ರಾಹಕನ ಸೋಗಿನಲ್ಲಿ ಬಂದಿದ್ದ ವ್ಯಕ್ತಿಯೊಬ್ಬ ಅಂಗಡಿಯಲ್ಲಿ ಮಾರಲು ಇಟ್ಟಿರುವ ತಿಂಡಿ ತಿನಿಸುಗಳ ರೇಟ್ ಕೇಳಿದ್ದಾನೆ. ಈ ನಡುವೆ ಅಂಗಡಿಯವರು ಬೇರೆ ಕಡೆ ತೆರಳಿದ ಸಂದರ್ಭ ನೋಡಿದ ಕಳ್ಳ ಅಂಗಡಿಯವರ ಕಣ್ತಪ್ಪಿಸಿ ಸಿಗಡಿ ಮೀನಿನ ಉಪ್ಪಿನಕಾಯಿಯ ಚಿಕ್ಕ ಬಾಟಲಿ ಹಾಗು ಒಂದು ಪ್ಯಾಕೆಟ್ ಕದ್ದಿದ್ದಾನೆ.
ಉಪ್ಪಿನ ಕಾಯಿ ಕದ್ದ ವಿಚಾರವನ್ನು ದೊಡ್ಡದು ಮಾಡದ ಅಂಗಡಿ ಮಾಲಿಕ ಪೊಲೀಸರಿಗೆ ದೂರು ನೀಡಿಲ್ಲ. ಆದರೆ ಸಾಮಾಜಿಕ ಜಾಲತಾಣ ದಲ್ಲಿ ಹರಿಬಿಟ್ಟ ಉಪ್ಪಿನಕಾಯಿ ಕಳ್ಳತನದ ದೃಶ್ಯ ಸಖತ್ ವೈರಲ್ ಆಗಿದೆ. ಉಪ್ಪಿನ ಕಾಯಿಯನ್ನು.. ಕಳ್ಳರು ಬೀಡುವುದಿಲ್ಲ ಎಂದು ಕಮೆಂಟ್ ಗಳು ಬರಲಾರಂಭಿಸಿದೆ.
ಆದರೆ ಕದಿಯುವ ಬರದಲ್ಲಿ ಆ ಕದ್ದ ಉಪ್ಪಿನಕಾಯಿ ವೆಜ್ ಅಥವಾ ನಾನ್ ವೆಜ್ ಅನ್ನೋದನ್ನ ಕಳ್ಳ ನೋಡಿದ್ದಾನೋ ಇಲ್ಲವೋ ಗೊತ್ತಿಲ್ಲ.