Connect with us

LATEST NEWS

ಮುಂಬೈಯಿಗೂ ಕಾಡುತ್ತಿದೆ ಧೂಳು ಮಿಶ್ರಿತ ಮಂಜು :ಆತಂಕದಲ್ಲಿ ಮುಂಬಯಿ ಜನತೆ

ಮುಂಬೈಯಿಗೂ ಕಾಡುತ್ತಿದೆ ಧೂಳು ಮಿಶ್ರಿತ ಮಂಜು :ಆತಂಕದಲ್ಲಿ ಮುಂಬಯಿ ಜನತೆ

ಮುಂಬಯಿ, ಡಿಸೆಂಬರ್ 10: ರಾಷ್ಟ್ರ ರಾಜಧಾನಿ ದೆಹಲಿಯನ್ನು ಕಾಡುತ್ತಿದ್ದ ಧೂಳು ಮುಸುಕಿದ ಮಂಜಿನ ಸಮಸ್ಯೆ ಈಗ ಕರಾವಳಿ ನಗರಿ ಮುಂಬಯಿಗೂ ವ್ಯಾಪಿಸಿದೆ. ಕಳೆದ ಮೂರು ದಿನಗಳಿಂದ ಮಂಬೈ ನಗರದ ಬಹುತೇಕ ಭಾಗಗಳು ಈ ಸ್ಮಾಗಿನಿಂದ ಆವೃತವಾಗಿವೆ.

ಇಂದು ಕೂಡ ಮುಂಬಯಿ ವಾಸಿಗಳಿಗೆ ದಟ್ಟ ಮಾಲಿನ್ಯ ಪದರ ಕಾಣಿಸಿಕೊಂಡಿದೆ.

ವಿಪರೀತ ಹಾಗೂ ದಟ್ಟ ಮಂಜಿನ ವಾತವರಣದಿಂದ ನಗರದ ಉಪನಗರ ರೈಲುಗಳ ಪ್ರಯಾಣಕ್ಕೂ ತೊಂದರೆಗಳಾಗಿವೆ.

ವಾಯು ಗುಣಮಟ್ಟವೂ ಇಳಿಕೆಯಾಗಿದೆ. ಈ ಮಾದರಿಯ ವಾತವರಣದಿಂದ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳಿವೆ.

ವಾಯು ಗುಣ ಮಟ್ಟ ಸೂಚ್ಯಂಕವು ಕಳೆದ ಎರಡು ದಿನಗಳಿಂದ ಮಧ್ಯಮದಿಂದ ಕಳಪೆಗೆ ಇಳಿದಿದ್ದು, ಪಿಎಂ 10 ಮತ್ತು ಪಿಎಂ 2.5 ಸೂಚ್ಯಂಕ 150 ಹಾಗೂ 90ಕ್ಕೆ ಏರಿದೆ.

ಶನಿವಾರ ಬೆಳಗ್ಗೆ ಪಿಎಂ 2.5 ಸೂಚ್ಯಂಕ ಗಮನಾರ್ಹವಾಗಿ ಏರಿದ್ದು, ಅಂಧೇರಿ, ನವಿ ಮುಂಬಯಿ ಮತ್ತು ಬಾಂದ್ರಾದಲ್ಲಿ ಇದು 300ಕ್ಕೆ ಏರಿಕೆಯಾಗಿದೆ.

ತಾಪಮಾನದಲ್ಲೂ ಗಮನಾರ್ಹ ಬದಲಾವಣೆಗಳು ಬಂದಿವೆ. ಆದರೆ ಇದು ಧೂಳು ಹಾಗೂ ಮಂಜು ಮಿಶ್ರಿತ ಮಾಲಿನ್ಯವೇ ಎಂಬುದನ್ನು ಹವಾಮಾನ ಇಲಾಖೆ ಖಚಿತಪಡಿಸಿಲ್ಲ.

ಇತ್ತೀಚಿನ ವರ್ಷಗಳಲ್ಲಿ ಕಂಡು ಬರದ ಈ ಸನ್ನಿವೇಶವನ್ನು ಜನರು ಮಂಜು ಮತ್ತು ಧೂಳಿನ ಕಣಗಳು ಎಂದೇ ಪರಿಗಣಿಸಿದ್ದಾರೆ.

ಇದುವರೆಗೆ ದಹಲಿಯನ್ನು ಮಾತ್ರ ಕಾಡುತ್ತಿದ್ದ ಈ ಸಮಸ್ಯೆ ಇದೀಗ ಮುಂಬಯಿಗೂ ವ್ಯಾಪಿಸಿರುವುದು ಸ್ಥಳೀಯ ಜನರಿಗೆ ಆತಂಕ ತಂದಿರುವುದು ಮಾತ್ರ ಸುಳ್ಳಲ್ಲ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *