LATEST NEWS
ಚುನಾವಣಾ ಕರಪತ್ರದಲ್ಲಿ ಮಹಿಳಾ ಅಭ್ಯರ್ಥಿ ಪೋಟೋ ಬದಲು ಗಂಡನ ಪೋಟೋ
ಚುನಾವಣಾ ಕರಪತ್ರದಲ್ಲಿ ಮಹಿಳಾ ಅಭ್ಯರ್ಥಿ ಪೋಟೋ ಬದಲು ಗಂಡನ ಪೋಟೋ
ಮಂಗಳೂರು ಅಗಸ್ಟ್ 25: ರಾಜಕೀಯವಾಗಿಯೂ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಬೇಕು ಎಂಬ ನಿಟ್ಟಿನಲ್ಲಿ ಮಹಿಳೆಯರಿಗೆ ಕೆಲವು ಕ್ಷೇತ್ರಗಳ ಮೀಸಲಾತಿಯನ್ನು ಕಲ್ಪಿಸಲಾಗಿದೆ. ಈ ಹಿನ್ನಲೆಯಲ್ಲಿ ಮಹಿಳೆಯರೂ ಚುನಾವಣೆಯಲ್ಲಿ ನಿಂತು ಜಯಸಾಧಿಸಿ ಜನಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ.
ಆದರೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮಾತ್ರ ವಿಚಿತ್ರವಾದ ಘಟನೆಯೊಂದು ನಡೆದಿದ್ದು, ಈ ಬಾರಿಯ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಮಹಿಳಾ ಮೀಸಲಾತಿ ಕ್ಷೇತ್ರದಲ್ಲಿ ವಿತರಿಸಿದ ಚುನಾವಣಾ ಕರಪತ್ರದಲ್ಲಿ, ಸ್ಪರ್ಧೆ ನಡೆಸಿದ ಮಹಿಳೆಯರ ಭಾವಚಿತ್ರದ ಬದಲು ಅವರ ಪತಿ ಮಹಾಶಯರ ಪೊಟೋ ಹಾಕಿ ಮತ ಕೇಳಲು ಹೊರಟಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದಕ್ಷಿಣ ಕನ್ನಡ ಉಳ್ಳಾಲದಲ್ಲಿ ನಡೆಯುವ ನಗರಸಭೆ ಚುನಾವಣೆಯಲ್ಲಿ ಎಸ್‌ಡಿಪಿಐ ಯಿಂದ ವಾರ್ಡ್ ನಂ 1,2 ,11,12 ರಲ್ಲಿ ಕ್ರಮವಾಗಿ ರುಕೀಯಾ ಇಕ್ಬಲ್, ಸಹನಾಜ್ ಅಕ್ರಮ್ ಹಾಸನ್, ಕಮರುನ್ನಿಸಾ ನಜೀಮ್ ಹಾಗೂ ಜಾರೀನಾ ಬಾನು ರವೂಪ್ ಸ್ಪರ್ಧೆ ಮಾಡುತ್ತಿದ್ದಾರೆ.
ಆದ್ರೆ ಬಿಡುಗಡೆ ಮಾಡಿರುವ ಚುನಾವಣಾ ಕರಪತ್ರದಲ್ಲಿ ಇರವ ಹೆಸರು ಮಾತ್ರ ಇದ್ದು ಪೊಟೋ ಇರುವ ಜಾಗದಲ್ಲಿ ಖಾಲಿ ಬಿಟ್ಟು, ಪಕ್ಕದಲ್ಲಿ ತಮ್ಮ ಗಂಡಂದಿರ ಪೊಟೋ ಹಾಕಿದ್ದಾರೆ..ಸ್ಪರ್ಧೆ ಮಾಡಿದ ಈ ಕ್ಷೇತ್ರದ ಮಹಿಳೆಯರು ಮುಸ್ಲಿಂ ಧರ್ಮಕ್ಕೆ ಸೇರಿದವರಾಗಿದ್ದು ಹಾಗಾಗಿ ಅವರ ಪೊಟೋ ಹಾಕಲಿಲ್ಲ ಎಂದು ಹೇಳಲಾಗಿದೆ.
ಸದ್ಯ ಈ ಚುನಾವಣಾ ಕರಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಜನರಿಂದ ಬಾರಿ ವಿರೋಧ ವ್ಯಕ್ತವಾಗುತ್ತಿದೆ.