ಹೃದಯಾಘಾತದಿಂದ ಮೃತಪಟ್ಟ ಜೋಡುಪಾಲ ಸಂತ್ರಸ್ತ

ಮಂಗಳೂರು ಅಗಸ್ಟ್ 25: ಬಾರಿ ಮಳೆಯಿಂದಾಗಿ ಉಂಟಾದ ಜೋಡುಪಾಲ ಭೂಕುಸಿತದ ಸಂತ್ರಸ್ತರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂತೋಡುವಿನ ತೆಕ್ಕಿಲ್ ಸಮುದಾಯ ಭವನದಲ್ಲಿ ನಡೆದಿದೆ.

ಮೃತರನ್ನು ಅಂಗಾರ(60) ಎಂದು ಗುರುತಿಸಲಾಗಿದ್ದು . ಇವರು ಕೊಡಗು ಜಿಲ್ಲೆಯ ಮೊಣ್ಣಂಗೇರಿ ಗ್ರಾಮದ ನಿವಾಸಿಯಾಗಿದ್ದಾರೆ. ಇವರಿಗೆ ರಾತ್ರಿ 1 ಗಂಟೆ ಸುಮಾರಿಗೆ ತೀವ್ರವಾಗಿ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಅಂಗಾರ ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆಯೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಅಂಗಾರ ಅವರಿಗೆ ಹೃದಯ ಸಂಬಂಧಿತ ಕಾಯಿಲೆ ಇತ್ತು. ಕೊಡಗಿನಲ್ಲಿ ಆದ ಘಟನೆಯಿಂದ ಅವರು ಸಾಕಷ್ಟು ನೊಂದಿದ್ದರು. ಕೊಡಗಿನಲ್ಲಿ ಪ್ರವಾಹದಿಂದಾಗಿ ಸಂಪೂರ್ಣ ಕಳೆದುಕೊಂಡ ಸಾಕಷ್ಟು ಸಂತ್ರಸ್ಥರಿಗೆ ಈ ರೀತಿಯ ಸಮಸ್ಯೆಗಳಾಗುತ್ತಿದ್ದು ತಕ್ಷಣಕ್ಕೆ ಸೂಕ್ತ ಚಿಕಿತ್ಸೆ ಹಾಗೂ ಹೆಚ್ಚಿನ ಚಿಕಿತ್ಸೆ ಸಿಗುತ್ತಿರಲಿಲ್ಲ. ಈ ಕಾರಣಕ್ಕಾಗಿ ಅಂಗಾರ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

3 Shares

Facebook Comments

comments