Connect with us

KARNATAKA

ಭಾರತದಲ್ಲಿ Apple Iphone ಕ್ರೇಜ್ – ಆ್ಯಪಲ್ ಸ್ಟೋರ್ ನಲ್ಲಿ ಸರತಿ ಸಾಲು

ಮುಂಬೈ ಸೆಪ್ಟೆಂಬರ್ 20: ಐಪೋನ್ 16 ಲಾಂಚ್ ಆಗಿದ್ದು. ನಮ್ಮ ದೇಶದಲ್ಲಿ ಇಂದಿನಿಂದ ಐಪೋನ್ ಸಿಗಲಿದೆ. ನಮ್ಮ ದೇಶದಲ್ಲಿ ಐಪೋನ್ ಕ್ರೇಜ್ ಹೇಗಿದೆ ಅಂದರೆ ನೂತನ ಫೋನ್​ಗಳನ್ನು ನಾನೇ ಮೊದಲಿಗೆ ಖರೀದಿಸಬೇಕೆಂದು ಮುಗಿಬಿದ್ದಿರುವ ಗ್ರಾಹಕರು ಆ್ಯಪಲ್ ಸ್ಟೋರ್‌ನತ್ತ ನುಗ್ಗುತ್ತಿದ್ದು, ಭಾರಿ ಜನರು ಸೇರಿರುವ ವಿಡಿಯೋ ಹರಿದಾಡುತ್ತಿದೆ.


ಆ್ಯಪಲ್ ಪೋನ್ ನ ನೂತನ ಸೀರಿಸ್ ಐಪೋನ್ 16 ಬಿಡುಗಡೆಯಾಗಿದೆ. ಐಫೋನ್ 16 ಸರಣಿಯ ಬೆಲೆ ಮೂಲ ಮಾದರಿಯ ಬೆಲೆಗೆ 79,900 ರೂ. ಐಫೋನ್ 16 ಪ್ರೋ ಬೆಲೆ 1,19,900 ರೂಪಾಯಿಗಳಿಂದ ಪ್ರಾರಂಭವಾಗುತ್ತದೆ. ಇಷ್ಟು ಹಣ ಕೊಟ್ಟು ಮೊಬೈಲ್ ತೆಗೆದುಕೊಳ್ಳಲು ಜನರು ಕ್ಯೂ ನಲ್ಲಿ ನಿಂತಿದ್ದಾರೆ.

ಭಾರತದ ಮೊದಲ ಆಪಲ್ ಸ್ಟೋರ್ ಮುಂಬೈನ BKC ಯಲ್ಲಿನ ಆಪಲ್ ಸ್ಟೋರ್‌ನ ಹೊರಗೆ ಉದ್ದನೆಯ ಸರತಿ ಸಾಲುಗಳನ್ನು ತೋರಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಐಪೋನ್ ಎಲ್ಲಿಯವರೆಗೆ ಕ್ರೇಜ್ ಇದೆ ಎಂದರೆ ಮೊಬೈಲ್ ತೆಗೆದುಕೊಳ್ಳಲು ಬೆರೆ ಬೆರೆ ರಾಜ್ಯಗಳಿಂದ ಮುಂಬೈಗೆ ಜನ ಆಗಮಿಸಿದ್ದಾರೆ. ಇದೇ ರೀತಿಯ ದೃಶ್ಯಗಳು ದೆಹಲಿಯ ಸಾಕೇತ್ ಆ್ಯಪಲ್ ಸ್ಟೋರ್‌ನಿಂದ ವರದಿಯಾಗಿದೆ ಮತ್ತು ಅಲ್ಲಿ ಜನರು ಬಿಡುಗಡೆಯಾಗಿರುವ ಐಫೋನ್ ಹೊಸ ಸೀರಿಸ್​ಗಳನ್ನು ಖರೀದಿಸಲು ಅಂಗಡಿಯಲ್ಲಿ ನೆರೆದಿದ್ದರು. ಅಂಗಡಿ ತೆರೆಯುವ ಮೊದಲು ಜನರು ಉದ್ದನೆಯ ಸರತಿ ಸಾಲಿನಲ್ಲಿ ನಿಂತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ವೈರಲ್ ವಿಡಿಯೋಗಳಿಗೆ ಜನರು ಕಮೆಂಟ್ ಮಾಡುತ್ತಿದ್ದು, ಆಸ್ಪತ್ರೆಯಲ್ಲಿ ಕ್ಯೂ ನಲ್ಲಿ ನಿಲ್ಲಲು ಆಗದೆ ಗಲಾಟೆ ಮಾಡುತ್ತಾರೆ. ಆದರೆ ಸಾವಿರಾರು ರೂಪಾಯಿ ಬೆಲೆ ಬಾಳುವ ಐಪೋನ್ ಗಾಗಿ ಬೆಳಿಗ್ಗೆನೆ ಎದ್ದು ಕ್ಯೂ ನಿಲ್ಲುತ್ತಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *