Connect with us

    LATEST NEWS

    ಸಾವಿಗೆ ಟೈಮಿಲ್ಲ, ಕ್ಲಾಸಿನಲ್ಲಿ ಸ್ನೇಹಿತರ ಮುಂದೆಯೇ ಕುಸಿದು ಬಿದ್ದು ಪ್ರಾಣ ಕಳಕೊಂಡ ಯುವ ವಿದ್ಯಾರ್ಥಿ..!

    ಇಂದೋರ್ :   ಕುಳಿತಿದ್ದ ವಿದ್ಯಾರ್ಥಿಯೊಬ್ಬ ನೋಡ ನೋಡುತ್ತಲೇ ತನ್ನ ಸ್ನೇಹಿತರ ಮುಂದೆಯೇ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದ ಇಂದೋರ್​ನ ಖಾಸಗಿ ಕೋಚಿಂಗ್ ಕ್ಲಾಸ್‌ನಲ್ಲಿ ಸಂಭವಿಸಿದೆ. ಈ ಆಘಾತಕಾರಿ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಜನರಲ್ಲಿ ನಡುಕ ಹುಟ್ಟಿಸಿದೆ.

     

    ನಗರದ ಭನ್ವಾರ್ಕುವಾನ್ ನಿವಾಸಿ ಮಾಧವ್ (18), ಮಧ್ಯಪ್ರದೇಶ ಲೋಕಸೇವಾ ಆಯೋಗದ (ಎಂಪಿಪಿಎಸ್‌ಸಿ) ಪ್ರವೇಶ ಪರೀಕ್ಷೆಗೆ ಖಾಸಗಿ ಕೋಚಿಂಗ್ ಕ್ಲಾಸ್‌ನಲ್ಲಿ ತಯಾರಿ ನಡೆಸುತ್ತಿದ್ದ. ತನ್ನ ಸ್ನೇಹಿತರೊಂದಿಗೆ ತರಗತಿಯಲ್ಲಿ ಪಾಠ ಕೇಳುತ್ತಿರುವ ವೇಳೆಯಲ್ಲೇ ಹೃದಯಾಘಾತದಿಂದ ಕುಸಿದುಬಿದ್ದು ಸಾವನ್ನಪ್ಪಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
    32 ಸೆಕೆಂಡುಗಳ ವೀಡಿಯೊದಲ್ಲಿ, ಮಾಧವ್ ಆರಂಭದಲ್ಲಿ MPPSC ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಇತರ ಎಲ್ಲ ವಿದ್ಯಾರ್ಥಿಗಳ ನಡುವೆ ಕುಳಿತುಕೊಂಡು ತನ್ನ ಅಧ್ಯಯನದಲ್ಲಿ ತೊಡಗಿಸಿಕೊಂಡಿರುವುದನ್ನು ಕಾಣಬಹುದು. ಕೆಲಹೊತ್ತಿನಲ್ಲೇ ಮೇಜಿನ ಮೇಲೆ ಬಿದ್ದರೂ ಕೂಡ ಯಾರಿಗೂ ತಿಳಿದಿಲ್ಲ. ಕೆಲ ಸೆಕೆಂಡುಗಳಲ್ಲಿ ಪಕ್ಕದಲ್ಲಿ ಕುಳಿತಿದ್ದ ವಿದ್ಯಾರ್ಥಿಗೆ ತಿಳಿಸಿದೆ. ಮಾಧವ್​ ನೆಲಕ್ಕೆ ಕುಸಿದು ಬಿದ್ದಾಗ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಸುತ್ತುವರಿದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

     

    Share Information
    Advertisement
    Click to comment

    You must be logged in to post a comment Login

    Leave a Reply