Connect with us

LATEST NEWS

ಮಟನ್‌ ಊಟ ಸರಿಯಾಗಿ ಬಡಿಸಿಲ್ಲವೆಂದು ರಣರಂಗವಾದ ಮದುವೆ ಮನೆ

ತೆಲಂಗಾಣ: ಸಂಭ್ರಮದಿಂದ ಕೂಡಿರುವ ಮದುವೆ ಮನೆಗಳಲ್ಲಿ ಕ್ಷುಲ್ಲಕ ಕಾರಣಗಳಿಗೆ ವಧು ಹಾಗೂ ವರರ ಕಡೆಯ ಸಂಬಂಧಿಕರ ನಡುವೆ ನಡೆಯುವ ವಾಗ್ವಾದ, ಜಗಳ, ರಂಪಾಟಗಳ ಸುದ್ದಿಗಳು ಆಗೊಮ್ಮೆ ಈಗೊಮ್ಮೆ ಕೇಳಿ ಬರುತ್ತಲೇ ಇರುತ್ತವೆ. ಹೆಚ್ಚಾಗಿ ಊಟದ ವಿಷಯದಲ್ಲಿಯೇ ಜಗಳಗಳು ನಡೆಯುತ್ತಿರುತ್ತವೆ.

ಇದೀಗ ಇಲ್ಲೊಂದು ಅಂತಹದ್ದೇ ಪ್ರಕರಣ ಬೆಳಕಿಗೆ ಬಂದಿದ್ದು, ಮಟನ್‌ ಊಟದಲ್ಲಿ ಸರಿಯಾಗಿ ಮಟನ್‌ ಪೀಸ್‌ ಬಡಿಸಿಲ್ಲ ಎಂದು ವರನ ಸ್ನೇಹಿತರು ತಗಾದೆ ತೆಗೆದಿದ್ದು, ಈ ವಿಷಯ ದೊಡ್ಡದಾಗಿ ವರ ಹಾಗೂ ವಧುವಿನ ಸಂಬಂಧಿಕರ ನಡುವೆ ಮಾರಾಮಾರಿ ನಡೆದಿದೆ. ಈ ಸುದ್ದಿ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಈ ಘಟನೆ ತೆಲಂಗಾಣದ ನಿಜಾಮಾಬಾದ್‌ ಜಿಲ್ಲೆಯ ನವಿಪೇಟ್‌ನಲ್ಲಿ ನಡೆದಿದ್ದು, ಮದುವೆ ಊಟದಲ್ಲಿ ಮಟನ್‌ ಪೀಸ್‌ ಸರಿಯಾಗಿ ಬಡಿಸಿಲ್ಲವೆಂಬ ಕಾರಣಕ್ಕೆ ಮದುವೆ ಮನೆಯೇ ರಣರಂಗವಾಗಿದೆ. ವರದಿಗಳ ಪ್ರಕಾರ ನವಿಪೇಟ್‌ನ ಎಸ್‌ಆರ್‌ ಫಂಕ್ಷನ್‌ ಹಾಲ್‌ನಲ್ಲಿ ಬುಧವಾರ (ಆಗಸ್ಟ್‌ 28) ಮದುವೆ ಔತಣಕೂಟವನ್ನು ಏರ್ಪಡಿಸಲಾಗಿತ್ತು. ಊಟದ ಸಮಯದಲ್ಲಿ ವಧುವಿನ ಕಡೆಯವರು ಮಟನ್‌ ಊಟದಲ್ಲಿ ಸರಿಯಾಗಿ ಮಟನ್‌ ಪೀಸ್‌ ಬಡಿಸಿಲ್ಲವೆಂದು ವರನ ಸ್ನೇಹಿತರು ಕಿರಿಕ್‌ ಮಾಡಿದ್ದಾರೆ. ಈ ವಾಗ್ವಾದ ಅತಿರೇಕಕ್ಕೆ ತಿರುಗಿ ವಧು ಹಾಗೂ ವರನ ಕಡೆಯವರು ಕಲ್ಲು, ದೊಣ್ಣೆಗಳಿಂದ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ತಕ್ಷಣ ಪೊಲೀಸರು ಸ್ಥಳಕ್ಕಾಗಮಿಸಿ ಎಲ್ಲರನ್ನು ಸಮಧಾನ ಪಡಿಸಿ, ಜಗಳ ನಡೆಯಲು ಕಾರಣರಾದ 19 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಕುರಿತ ಪೋಸ್ಟ್‌ ಒಂದನ್ನು TeluguScribe ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್‌ ವಿಡಿಯೋದಲ್ಲಿ ಮಟನ್‌ ಪೀಸ್‌ ವಿಚಾರದಲ್ಲಿ ವಧು ಹಾಗೂ ವರನ ಕಡೆಯವರು ಪರಸ್ಪರ ಹೊಡೆದಾಡಿಕೊಳ್ಳುತ್ತಿರುವ ದೃಶ್ಯವನ್ನು ಕಾಣಬಹುದು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *