Connect with us

  KARNATAKA

  ಭಾರತದ ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಿದ ವಿ-ಸ್ಟ್ರೋಮ್ 800 ಡಿಇ ಸೂಪರ್ ಬೈಕ್..!

  ನವದೆಹಲಿ : ದ್ವಿಚಕ್ರ ವಾಹನ ತಯಾರಿಕೆಯ ರಾಜ ಸುಜುಕಿಯ ಬಹುನಿರೀಕ್ಷಿತ ಸೂಪರ್ ಬೈಕ್ ಭಾರತದ ವಾಹನ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು ಬಿರುಗಾಳಿ ಎಬ್ಬಿಸಿದೆ. ಇದೀಗ ಬಹುನಿರೀಕ್ಷಿತ ವಿ-ಸ್ಟ್ರೋಮ್ 800 ಡಿಇ ಸೂಪರ್ ಬೈಕ್ ಭಾರತದ ವಾಹನ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ.

   

  ಈ ಸೂಪರ್‌ ಬೈಕ್‌ನ ಆರಂಭಿಕ ಎಕ್ಸ್‌ಶೋರೂಮ್ ಬೆಲೆ 10.30 ಲಕ್ಷ ರೂಪಾಯಿ. ಈ ಬೈಕ್ ಚಾಂಪಿಯನ್ ಯಲ್ಲೋ ನಂಬರ್ 2, ಗ್ಲಾಸ್ ಮ್ಯಾಟ್ ಮೆಕ್ಯಾನಿಕಲ್ ಗ್ರೇ ಮತ್ತು ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್ ಎಂಬ ಮೂರು ಬಣ್ಣದ ಆಯ್ಕೆಯಲ್ಲಿ ಲಭ್ಯವಿದೆ. ಈ ಬೈಕ್‌ಗಾಗಿ ಬುಕ್ಕಿಂಗ್‌ಗಳು ಈಗಾಗಲೇ ಪ್ರಾರಂಭಗೊಂಡಿದೆ. ಸುಜುಕಿ ವಿ-ಸ್ಟ್ರೋಮ್ 800 ಡಿಇ ಸೂಪರ್ ಬೈಕ್‌ಗೆ ಶಕ್ತಿ ನೀಡುವುದು ಹೊಸ ಲಿಕ್ವಿಡ್ ಕೂಲ್ಡ್‌ 776 ಸಿಸಿ ಪ್ಯಾರಲಲ್ ಟ್ವಿನ್ ಎಂಜಿನ್. ಈ ಎಂಜಿನ್ 84.3 ಎಚ್‌ಪಿ ಶಕ್ತಿ ಹಾಗೂ 78 ಎನ್‌ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

   

  ಈ ಎಂಜಿನ್ 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲ್ಪಟ್ಟಿದೆ ಹಾಗೂ ಕ್ಲಚ್‌ಲೆಸ್ ಗೇರ್ ಬದಲಾವಣೆಗಳಿಗೆ ಸ್ಟ್ಯಾಂಡರ್ಡ್‌ ಆಗಿ ಬೈ-ಡೈರೆಕ್ಷನಲ್ ಕ್ವಿಕ್‌ಶಿಫ್ಟರ್ ಅನ್ನು ಹೊಂದಿದೆ.ಗೋಲ್ಡನ್ ಕ್ವಾಡ್ರಿಲ್ಯಾಟರಲ್ ಎಂಡ್ಯೂರೆನ್ಸ್‌ ರನ್‌ನಲ್ಲಿ ಅನೇಕ ಸಾಧನೆ ಮಾಡಿದ ಟಾಟಾದ ಹೊಸ ಟರ್ಬೊಟ್ರಾನ್ 2.0 ಎಂಜಿನ್‌ ಒರಟಾದ ಪ್ರದೇಶಗಳಲ್ಲೂ ಸೈ ಎಂದು ಸರಾಗವಾಗಿ ಸಾಗುವಂತಹ ರೀತಿಯಲ್ಲಿ ನಿರ್ಮಿಸಲಾದ ವಿ-ಸ್ಟ್ರೋಮ್ 800 ಡಿಇ ಸ್ಟೀಲ್ ಚೌಕಟ್ಟನ್ನು ಹೊಂದಿದೆ. ಜೊತೆಗೆ ಇದು ಸ್ಪೋಕ್ ರಿಮ್‌ ಒಳಗೊಂಡಿರುವ ಮುಂಭಾಗದ 21-ಇಂಚಿನ ಚಕ್ರ ಮತ್ತು ಹಿಂಭಾಗದ 17 ಇಂಚಿನ ಚಕ್ರವನ್ನು ಹೊಂದಿದ್ದು ಕಚ್ಚಾ ರಸ್ತೆಗೂ ಹೇಳಿ ಮಾಡಿಸಿದಂತಹ ಬೈಕ್ ಇದಾಗಿದೆ.

  Share Information
  Advertisement
  Click to comment

  You must be logged in to post a comment Login

  Leave a Reply