LATEST NEWS
ಮಾಜಿ ರಾಷ್ಟ್ರಪತಿ ಪ್ರಣಬ್ ಕೊಲ್ಲೂರು ಭೇಟಿ ಎಫೆಕ್ಟ್ ದೇವಸ್ಥಾನದ ಹುಂಡಿಯಲ್ಲಿ ದಾಖಲೆ ಹಣ ಸಂಗ್ರಹ

ಮಾಜಿ ರಾಷ್ಟ್ರಪತಿ ಪ್ರಣಬ್ ಕೊಲ್ಲೂರು ಭೇಟಿ ಎಫೆಕ್ಟ್ ದೇವಸ್ಥಾನದ ಹುಂಡಿಯಲ್ಲಿ ದಾಖಲೆ ಹಣ ಸಂಗ್ರಹ
ಕುಂದಾಪುರ ಅಕ್ಟೋಬರ್ 26: ರಾಜ್ಯದ ಮಜರಾಯಿ ಇಲಾಖೆ ಸೇರಿದ ಶ್ರೀಮಂತ ದೇವಸ್ಥಾನಗಳಲ್ಲೊಂದಾದ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಹುಂಡಿಯಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ದಾಖಲೆ ಪ್ರಮಾಣದ ಕಾಣಿಕೆ ಸಂಗ್ರಹವಾಗಿದೆ.
ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದಲ್ಲಿ ತಿಂಗಳಿಗೊಮ್ಮೆ ದೇವರ ಹುಂಡಿ ಹಣ ಏಣೆಕೆ ಮಾಡಲಾಗುತ್ತಿದ್ದು. ಈ ಬಾರಿ ಏಣಿಕೆ ಸಂದರ್ಭದಲ್ಲಿ ದಾಖಲೆ ಪ್ರಮಾಣದ ಕಾಣಿಕೆ ಸಂಗ್ರಹಣವಾಗಿರುವುದು ಕಂಡು ಬಂದಿದೆ. ಈ ಬಾರಿ ಸುಮಾರು 1.10 ಕೋಟಿ ರೂಪಾಯಿ ಹಣ ಸಂಗ್ರಹವಾಗಿ ದಾಖಲೆ ನಿರ್ಮಿಸಿದೆ. ಅಲ್ಲದೆ ಇದರೊಂದಿಗೆ ಇಗ್ಲೆಂಡ್, ಆಸ್ಚ್ರೇಲಿಯಾ, ಅಮೇರಿಕ, ಅರಬ್ ದೇಶಗಳ ವಿದೇಶಿ ಹಣ ಕೂಡ ಹುಂಡಿಯಲ್ಲಿ ಕಾಣಿಕೆ ರೂಪದಲ್ಲಿ ದೊರೆತಿದ್ದು, 1 ಲಕ್ಷ ಕ್ಕೂ ಮಿಕ್ಕಿ ವಿದೇಶಿ ಹಣ ಸಂಗ್ರಹವಾಗಿದೆ.

ಮಾಜಿ ರಾಷ್ಟ್ರಪತಿ ಪ್ರಣಬ್ ಕೊಲ್ಲೂರು ಭೇಟಿ ಎಫೆಕ್ಟ್
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕೊಲ್ಲೂರು ದೇವಸ್ಥಾನಕ್ಕೆ ಕಳೆದ ಜೂನ್ 18 ರಂದು ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಇದರ ನಂತರ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಗಣನೀಯವಾಗಿ ಏರಿದೆ. ಅದರಲ್ಲೂ ಉತ್ತರ ಭಾರತದಿಂದ ದೇವಸ್ಥಾನಕ್ಕೆ ಬರುವ ಭಕ್ತರು ಸಂಖ್ಯೆ ಏರಿಕೆ ಕಂಡಿದೆ. ಈ ಹಿನ್ನಲೆಯಲ್ಲಿ ದೇವಸ್ಥಾನದ ಆದಾಯದಲ್ಲಿ ಗಣನೀಯ ಪ್ರಮಾಣ ಏರಿಕೆ ಕಂಡಿದ್ದು, ಈ ಸಲ ತಿಂಗಳ ಏಣಿಕೆ ಸಂದರ್ಭ ಅತೀ ಹೆಚ್ಚು ಕಾಣಿಕೆ ಸಂಗ್ರಹವಾದ ದಾಖಲೆ ನಿರ್ಮಿಸಿದೆ.
ಕೊಲ್ಲೂರು ದೇವಸ್ಥಾನಕ್ಕೆ ಪ್ರತಿವರ್ಷ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಅದರಲ್ಲೂ ವಿಜಯದಶಮಿ, ದೀಪಾವಳಿ, ಸರಕಾರಿ ರಜಾ ದಿನಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತರ ಭೇಟಿ ನೀಡುತ್ತಾರೆ. ವಿಶೇಷವಾಗಿ ಕೇರಳ ಹಾಗೂ ತಮಿಳುನಾಡಿನ ಭಕ್ತರು ಅತಿ ಹೆಚ್ಚು ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.