Connect with us

    LATEST NEWS

    ದ ಸೀರಿಯಲ್​ ಡೇಟರ್: 335 ಮಹಿಳೆಯರ ಜೊತೆ ಡೇಟ್ ಮಾಡಿರುವ ಇವನ ಟಾರ್ಗೆಟ್ ಎಷ್ಟು ಗೊತ್ತಾ?

    ನವದೆಹಲಿ, ಅಗಸ್ಟ್ 16: ದ ಡೇಟಿಂಗ್ ಕಿಂಗ್, ದ 365-ಡೇಟ್ಸ್​ಮ್ಯಾನ್​, ಸೀರಿಯಲ್​ ಡೇಟರ್ ಎಂದೆಲ್ಲ ಕರೆಸಿಕೊಳ್ಳುವ ಈತ ಇದುವರೆಗೆ ಬರೋಬ್ಬರಿ 335 ಮಹಿಳೆಯರ ಜತೆ ಡೇಟಿಂಗ್ ಮಾಡಿದ್ದಾನೆ. ಮಾತ್ರವಲ್ಲ, ಇಂತಿಷ್ಟೇ ಮಹಿಳೆಯರ ಜತೆ ಡೇಟಿಂಗ್ ಮಾಡಬೇಕು ಎಂಬ ಟಾರ್ಗೆಟ್ ಕೂಡ ಇಟ್ಟುಕೊಂಡಿದ್ದಾನೆ.

    ವೃತ್ತಿಯಿಂದ ಡ್ಯಾನ್ಸರ್, ನಟ ಎರಡೂ ಆಗಿರುವ ಈತ ಸದ್ಯ ಫುಲ್​ಟೈಮ್​ ಆಗಿ ಡೇಟಿಂಗ್​ನಲ್ಲಿದ್ದಾನೆ. ಅಂದಹಾಗೆ ಈತ ಚೆನ್ನೈಯವನು, ಹೆಸರು ಸುಂದರ್ ರಾಮು. ಈತನ ಈ ಡೇಟಿಂಗ್ ಶುರುವಾಗಿದ್ದು 2015ರಲ್ಲಿ, ಅಂದಿನಿಂದ ಇಲ್ಲಿಯವರೆಗೂ ಹಲವಾರು ಮಹಿಳೆಯರೊಂದಿಗೆ ಡೇಟಿಂಗ್ ನಡೆಸಿದ್ದಾನೆ. ಒಟ್ಟಿನಲ್ಲಿ 365 ಮಂದಿ ಮಹಿಳೆಯರ ಜತೆ ಡೇಟಿಂಗ್ ಮಾಡಬೇಕು ಎಂಬುದು ಈತನ ಗುರಿ.

    ಮಹಿಳೆಯರ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವುದು, ಲಿಂಗತಾರತಮ್ಯ ತೊಲಗಿಸುವುದು ನನ್ನ ಈ ಡೇಟಿಂಗ್​ ಉದ್ದೇಶ ಎಂಬ ಸಮಜಾಯಿಷಿ ಈತನದು. ಮನೆಯಲ್ಲಿ, ಶಾಲೆಯಲ್ಲಿ ನನಗೆ ಗಂಡು-ಹೆಣ್ಣು ಎಂಬ ಭೇದವೇ ಗೊತ್ತಿರಲಿಲ್ಲ, ಚೆನ್ನಾಗಿ ಬೆರೆತು ಬೆಳೆದಿದ್ದೆ. ಆದರೆ ಒಮ್ಮೆ ಹೊರಜಗತ್ತಿಗೆ ಪ್ರವೇಶಿಸಿದ ಮೇಲೆ ಲಿಂಗತಾರತಮ್ಯದ ತೀವ್ರತೆ ಅರಿವಾಯಿತು, ಅದೇ ನನ್ನನ್ನು ಇದಕ್ಕೆ ಪ್ರೇರೇಪಿಸಿತು ಎಂಬುದು ಡೇಟಿಂಗ್​ಗೆ ರಾಮು ಕೊಡುವ ಸಬೂಬು.

    2015ರ ಜನವರಿ 1ರಂದು ಡೇಟಿಂಗ್​ಗೆ ಆಹ್ವಾನಿಸಿ ಫೇಸ್​ಬುಕ್​ನಲ್ಲಿ ಸ್ಟೇಟಸ್ ಹಾಕುವ ಮೂಲಕ ಇದಕ್ಕೆ ಚಾಲನೆ ಕೊಟ್ಟೆ. ಡೇಟಿಂಗ್ ಬರುವವರು ಒಂದು ಸ್ಥಳ ನಿಗದಿ ಮಾಡಿ ಆಹಾರಕ್ಕೆ ಪೇ ಮಾಡಬೇಕು ಅಥವಾ ಸ್ವತಃ ತಯಾರಿಸಿ ಕೊಡಬೇಕು. ಹೀಗೆ ಉಳಿಸಿದ ಹಣವನ್ನು ನಾನು ಟ್ರಸ್ಟ್​ಗಳಿಗೆ ನೀಡುತ್ತಿದ್ದೇನೆ. ಆರಂಭದಲ್ಲಿ ಗೊತ್ತಿರುವ ವಲಯದಲ್ಲೇ ಡೇಟಿಂಗ್ ನಡೆಯುತ್ತಿತ್ತು. ಒಮ್ಮೆ ಡೇಟಿಂಗ್ ಕಿಂಗ್, ಸೀರಿಯಲ್ ಡೇಟರ್ ಎಂದೆಲ್ಲ ಪ್ರಚಾರ ಸಿಗುತ್ತಿದ್ದಂತೆ ಡೇಟಿಂಗ್ ಅವಕಾಶ ಹೆಚ್ಚಾಯಿತು.

    ಕಳೆದ ಐದೂವರೆ ವರ್ಷಗಳಿಂದ ಡೇಟಿಂಗ್​ನಲ್ಲಿ ತೊಡಗಿರುವ ಸುಂದರ್, ಇದುವರೆಗೆ ಅಮೆರಿಕ, ಶ್ರೀಲಂಕಾ, ಸ್ಪೇನ್​, ಫ್ರಾನ್ಸ್​, ಥಾಯ್ಲೆಂಡ್, ವಿಯೆಟ್ನಾಂ ಮುಂತಾದ ದೇಶಗಳ ಮಹಿಳೆಯರೊಂದಿಗೆ ಡೇಟಿಂಗ್ ನಡೆಸಿದ್ದಾನೆ. ನಾನು ಹಲವಾರು ಮಹಿಳೆಯರ ಜೊತೆ ಉಚಿತವಾಗಿ ಊಟ ಮಾಡಿದ್ದೇನೆ. ಈಗ ಅದು ಜೀವನದುದ್ದಕ್ಕೂ ನಡೆಯುವಂತೆ ಕಾಣುತ್ತಿದೆ ಎಂದಿದ್ದಾನೆ ಈ ಭೂಪ.

    Share Information
    Advertisement
    Click to comment

    Leave a Reply

    Your email address will not be published. Required fields are marked *