Connect with us

    LATEST NEWS

    ಸೀರೆಯಲ್ಲಿ 2 ಕಿಲೋ ಮೀಟರ್ ವಾಕಿಂಗ್

    ಸೀರೆಯಲ್ಲಿ 2 ಕಿಲೋ ಮೀಟರ್ ವಾಕಿಂಗ್

    ಮಂಗಳೂರು ಅಗಸ್ಟ್ 12: ಮಹಿಳೆಯರೂ ಕೂಡ ಸೀರೆಯನ್ನು ಉಟ್ಟು ಆರಾಮವಾಗಿ ವಾಕಿಂಗ್ ಮಾಡಬಹುದು ಎಂದು ತೋರಿಸಲು ಇಂದು ಮಂಗಳೂರಿನಲ್ಲಿ ಸೀರೆಯಲ್ಲಿ ವಾಕಿಂಗ್ ಎಂಬ ವಿಭಿನ್ನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

    ಮಂಗಳೂರಿನ ಮೆಡಿಮೈಡ್ ಸೊಲ್ಯುಷನ್ ಅಸೋಸಿಯೇಷನ್ ಕ್ಲಬ್ ನ ಸೀರೆಯಲ್ಲಿ ವಾಕಿಂಗ್ ಎಂಬ ಕಾರ್ಯಕ್ರಮವನ್ನು ಇಂದು ಆಯೋಜಿಸಿತ್ತು. ನೂರಾರು ಮಹಿಳೆಯರು ಬೆಳ್ಳಂಬೆಳಿಗ್ಗೆ ಸೀರೆಯಟ್ಟು ನಗರದ ಗಾಂಧಿ ಪಾರ್ಕ್ ಮುಂಭಾಗ ಹಾಜರಿದ್ದು, ಅಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

    ನಗರದ ಮಣ್ಣಗುಡ್ಡೆಯಿಂದ ಸೀರೆ ವಾಕಿಂಗ್ ಆರಂಭಿಸಿದ ಸುಮಾರು 600ಕ್ಕಿಂತ ಹೆಚ್ಚು ಮಹಿಳೆಯರು ಮಂಗಳಾ ಕ್ರೀಡಾಂಗಣ ಮೂಲಕ ಮತ್ತೆ ಮಣ್ಣಗುಡ್ಡ ತಲುಪಿ 2 ಕಿಲೋ ಮೀಟರ್ ವಾಕಿಂಗ್ ಪೂರ್ತಿಗೊಳಿಸಿದರು. ಸರಿ ಸುಮಾರು 600 ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷ ವಾಗಿತ್ತು.

    ನಗರದಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯ ನಡುವೆಯೂ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶೂ, ಟ್ರಾಕ್ ಸೂಟ್ ಇಲ್ಲದೆಯೂ ಸೀರೆಯಲ್ಲೂ ವಾಕಿಂಗ್ ಮಾಡಲು ಸಾಧ್ಯ ಎಂಬುದರ ಸಂದೇಶ ನೀಡಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *