Connect with us

    LATEST NEWS

    ಕನ್ನಡದ ಶುದ್ಧ ಭಾಷೆಯನ್ನು ಯಕ್ಷಗಾನದಲ್ಲಿ ಕಾಣಬಹುದು: ಶಾಸಕ ಗುರುರಾಜ ಗಂಟಿಹೊಳೆ

    ಮಂಗಳೂರು ನವೆಂಬರ್ 4: ಕನ್ನಡದ ಶುದ್ದ ಭಾಷೆಯನ್ನು ನಾವು ಯಕ್ಷಗಾನದಲ್ಲಿ ಕಾಣಬಹುದು. ಶಿಸ್ತು, ಸಂಸ್ಕಾರ, ಶ್ರದ್ದಾ ಭಕ್ತಿಯನ್ನು ಯಕ್ಷಗಾನದಲ್ಲಿ ಕಾಣಲು ಸಾಧ್ಯವಿದೆ. ಕರಾವಳಿಯ ಗಂಡುಕಲೆಯಲ್ಲಿ ಸಂಘಟನೆಯ ಜೊತೆಗೆ ಭಾಷಾ ಶುದ್ದತೆಯೂ ಇದೆ ಎಂದು ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ತಿಳಿಸಿದರು.


    ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ 39 ನೇ ಗೋವಾ ಘಟಕವನ್ನು ಪಣಜಿ ಇನ್ಸಿಟ್ಯೂಟ್ ಮೆನೆಜಸ್ ಬ್ರಗಾನ್ಸಾ ಸಭಾಗೃಹದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ಇಂದು ಯುವ ಸಮುದಾಯ ಯಕ್ಷಗಾನದ ಆಕರ್ಷಣೆಗೆ ಒಳಗಾಗಿದ್ದಾರೆ. ಪುರಾಣದ ಕತೆಗಳನ್ನು ತಿಳಿದುಕೊಳ್ಳುವ ಆಸಕ್ತಿಯೂ ಯುವ ಸಮುದಾಯಕ್ಕೆ ಇದೆ. ಯಕ್ಷಗಾನ ಮೇಲ್ಪಂಕ್ತಿಯಲ್ಲಿ ಇನ್ನೂ ಎತ್ತರಕ್ಕೆ ಬೆಳೆಯಲಿ. ಯಕ್ಷಗಾನವನ್ನು ಆರಾಧಿಸೋಣ, ಪ್ರೀತಿಸೋಣ ಎಂದರು. 40 ನೇ ಘಟಕವನ್ನು ಬೈಂದೂರಿನಲ್ಲಿ ಸ್ಥಾಪಿಸುವುದಾಗಿ ಗಂಟಿಹೊಳೆ ತಿಳಿಸಿದರು.


    ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ ಗೋವಾದಲ್ಲಿ ಘಟಕ ಸ್ಥಾಪಿಸುವುದು ಬಹು ದಿನಗಳ ಕನಸಾಗಿತ್ತು. ಗೋವಾ ಘಟಕದ ಅಧ್ಯಕ್ಷರಾದ ಗಣೇಶ್ ಶೆಟ್ಟಿ ಇರ್ವತ್ತೂರು ಜವಾಬ್ದಾರಿ ಹೊತ್ತು ಘಟಕ ರಚಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಗೋವಾ ಘಟಕದಡಿ ಅನೇಕ ಯಕ್ಷಗಾನಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ನಡೆಯಲಿ ಎಂದರು. ಕೇಂದ್ರೀಯ ಘಟಕದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್ ಪ್ರಸ್ತಾವಿಕವಾಗಿ ಮಾತನಾಡಿದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *