KARNATAKA
ಪಿಯು ಪರೀಕ್ಷೆಗೆ ಯಾವುದೇ ಧಾರ್ಮಿಕ ವಸ್ತ್ರ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಇಲ್ಲ

ಬೆಂಗಳೂರು, ಎಪ್ರೀಲ್ 19: ಏ.22 ರಿಂದ ಮೇ 18 ರವರೆಗೆ ಪಿಯು ವಾರ್ಷಿಕ ಪರೀಕ್ಷೆ ನಡೆಯಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆಯಾ ಪಿಯು ಕಾಲೇಜುಗಳಲ್ಲಿ ಎಸ್ಡಿಎಂಸಿಗಳು ಸಮವಸ್ತ್ರ ನಿಗದಿಪಡಿಸಿದ್ದರೆ ಸಮವಸ್ತ್ರ ಧರಿಸಿಯೇ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವುದು ಕಡ್ಡಾಯ.
ಸಮವಸ್ತ್ರ ಇಲ್ಲದ ಕಡೆ ಯಾವುದೇ ಧರ್ಮವನ್ನು ಸಾಂಕೇತಿಸುವ ಉಡುಪು ಧರಿಸಿ ಬರುವಂತಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಗೇಶ್, ಈ ಬಾರಿ ಪಿಯುಸಿ ಪರೀಕ್ಷೆಗೆ ಒಟ್ಟು 6,84,255 ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ.

ಪ್ರಶ್ನೆ ಪತ್ರಿಕೆ ಸೋರಿಕೆ, ಕಾಪಿ ಅವ್ಯವಹಾರ ಆಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿ ಅಗತ್ಯ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾರ್ಥಿಗಳಿಗೆ ಏನಾದರೂ ಗೊಂದಲ ಉಂಟಾದರೆ ಅಥವಾ ಮಾಹಿತಿ ಬೇಕಿದ್ದರೆ ಪಿಯು ಪರೀಕ್ಷಾ ಸಹಾಯವಾಣಿ: 080 23080864ಗೆ ಕರೆ ಮಾಡಬಹುದು.