Connect with us

    LATEST NEWS

    ಮನೆಯ ಒಡತಿಯನ್ನೇ ಕಚ್ಚಿ ಕೊಂದ ಸಾಕುನಾಯಿ..!

    ಲಕ್ನೋ, ಜುಲೈ 13: ಸಾಕಿದ ನಾಯಿಯೊಂದು 82 ವರ್ಷದ ವೃದ್ಧೆಯನ್ನು ಕಚ್ಚಿ ಕೊಂದು ಹಾಕಿರುವ ಘಟನೆ ಲಕ್ನೋದಲ್ಲಿ ಮಂಗಳವಾರದಂದು ನಡೆದಿದೆ. ಕೈಸರ್ ಭಾಗ್ ನಿವಾಸಿ ಸುಶೀಲಾ ತ್ರಿಪಾಠಿ ಮೃತಪಟ್ಟ ದುರ್ದೈವಿಯಾಗಿದ್ದಾರೆ.

    ಜಿಮ್ ಟ್ರೈನರ್ ಆಗಿರುವ ಇವರ ಮಗ ಅಮಿತ್ ಎರಡು ನಾಯಿಗಳನ್ನು ಸಾಕಿದ್ದು, ಈ ಪೈಕಿ ಬ್ರೌನಿ ಎಂಬ ಪಿಟ್ ಬುಲ್ ನಾಯಿಯನ್ನು ಮೂರು ವರ್ಷಗಳ ಹಿಂದೆ ತಂದಿದ್ದರು. ಮಂಗಳವಾರ ಬೆಳಿಗ್ಗೆ ಅಮಿತ್ ವಾಕ್ ಹೋಗಿದ್ದ ಸಂದರ್ಭದಲ್ಲಿ ಆರು ಗಂಟೆ ಸುಮಾರಿಗೆ ಸುಶೀಲ ಅವರನ್ನು ನಾಯಿ ಕಚ್ಚಲು ಆರಂಭಿಸಿದೆ. ಇದರಿಂದ ಭಯಭೀತರಾಗಿ ಅವರು ಕೂಗಿಕೊಂಡಾಗ ಅಕ್ಕಪಕ್ಕದವರು ಓಡಿ ಬಂದರಾದರೂ ಮನೆ ಲಾಕ್ ಆಗಿದ್ದ ಕಾರಣ ರಕ್ಷಿಸಲು ಸಾಧ್ಯವಾಗಲಿಲ್ಲ.

    ಕೂಡಲೇ ಅಮಿತ್ ಗೆ ಕರೆ ಮಾಡಿ ಕರೆಸಿಕೊಳ್ಳಲಾಯಿತಾದರೂ ಅವರು ಬಂದು ಬೀಗ ತೆಗೆಯುವಷ್ಟರಲ್ಲಿ ಸುಶೀಲ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಮನೆಯ ಸದಸ್ಯರೊಂದಿಗೆ ತುಂಬಾ ಹೊಂದಿಕೊಂಡಿದ್ದ ಈ ನಾಯಿ ಏಕಾಏಕಿ ಇಂತಹ ವರ್ತನೆ ತೋರಿಸಲು ಕಾರಣವೇನೆಂಬುದು ಈಗ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *