BELTHANGADI
ಬೀದಿ ಬೀದಿ ಅಲೆಯುತ್ತಿದ್ದ ಬಿಕ್ಷುಕನ ಅಂತ್ಯಸಂಸ್ಕಾರ ನೆರವೇರಿಸಿದ ಮಾನವೀಯತೆ ಮರೆದ ಜನತೆ.

ನೆಲ್ಯಾಡಿ, ಅಕ್ಟೋಬರ್ 27: ಜನಪ್ರತಿನಿಧಿಯೋ, ಸೆಲೆಬ್ರಿಟಿಯೋ ನಿಧನ ಹೊಂದಿದರೆ ಯಾವ ರೀತಿ ಮೆರವಣಿಗೆಯ ಮೂಲಕ ಅಂತ್ಯಸಂಸ್ಕಾರ ನೆರವೇರುತ್ತೋ, ಅದೇ ರೀತಿಯ ಗೌರವ ಬಿಕ್ಷುಕನಿಗೆ ದೊರೆತಲ್ಲಿ, ಅದು ಆತನಿಗೆ ಸಮಾಜ ನೀಡುವ ನಿಜವಾದ ಗೌರವ. ಹೌದು ಇದೇ ರೀತಿಯ ಗೌರವ ದಕ್ಷಿಣಕನ್ನಡ ಜಿಲ್ಲೆಯ ನೆಲ್ಯಾಡಿ ,ಕೊಕ್ಕಡ ಪರಿಸರದಲ್ಲಿ ಬಿಕ್ಷೆ ಬೇಡಿ ಅಲೆಮಾರಿಯಂತೆ ತಿರುಗುತ್ತಿದ್ದ ಬಿಕ್ಷುಕನೋರ್ವನಿಗೆ ಸಂದಿದೆ.
ಇಪ್ಪತೈದು ವರ್ಷಗಳ ಹಿಂದೆ ನೆಲ್ಯಾಡಿ ಹಾಗೂ ಕೊಕ್ಕಡ ಪರಿಸರದಲ್ಲಿ ದಿಢೀರನೆ ಪ್ರತ್ಯಕ್ಷನಾಗಿದ್ದ, ಆ ಬಿಕ್ಷುಕನ ಹಾವ-ಭಾವ ಕಂಡು ಆ ಭಾಗದ ಜನ ಆತನನ್ನು ಬಿಕ್ಷುಕ ಎಂದು ಗುರುತಿಸಲೇ ಇರಲಿಲ್ಲ. ಅಜಾನುಭಾಹುವಾಗಿದ್ದ ಆ ಬಿಕ್ಷುಕನನ್ನು ಮೊದ ಮೊದಲು ಯಾವುದೋ ಪ್ರಕರಣ ಛೇಧಿಸಲು ಬಂದಿರುವ ಸಿ.ಐ.ಡಿ ಯೇ ಇರಬೇಕೆಂದು ಊಹಿಸಿದ್ದರು. ಹೌ್ಉ ಯಾರಲ್ಲೂ ಮಾತನಾಡದೆ, ತನ್ನ ಪಾಡಿಗೆ ತಾನು ಇರುತ್ತಿದ್ದ ಈತನನ್ನು ನೆಲ್ಯಾಡಿ ಭಾಗದ ಜನ ಸಿ.ಐ.ಡಿ ಶಂಕರ್ ಎಂದೇ ಸಂಭೋಧಿಸುತ್ತಿದ್ದರು.

ಪರಿಸರದ ಹೋಟೆಲ್ ಮಂದಿ ನೀಡುವ ಊಟೋಪಚಾರವನ್ನು ಸ್ವೀಕರಿಸಿ, ಗ್ರಾಮಪಂಚಾಯತ್ ಅಥವಾ ಇನ್ಯಾವುದೋ ಕಟ್ಟಡದ ಮುಂದೆ ರಾತ್ರಿ ಕಳಿಯುತ್ತಿದ್ದ ಶಂಕರ್ ಆ ಭಾಗದ ಜನರ ಅತ್ಯಂತ ಪ್ರೀತಿಗೂ ಪಾತ್ರನಾಗಿದ್ದ. ಅಂಗಡಿ ಅಂಗಡಿ ಬಿಕ್ಷೆ ಬೇಡಲು ಹೋಗುವ ಸಂದರ್ಭದಲ್ಲಿ ತನಗೆ ಬೇಕಾದ ನಾಣ್ಯ ಸಿಗದೇ ಹೋದಲ್ಲಿ, ಆ ಅಂಗಡಿಯಿಂದ ಒಂದಿಂಚೂ ಕದಡದೆ ತಾನು ಬಯಸಿದ ನಾಣ್ಯಕ್ಕಾಗಿ ಅಲ್ಲೇ ನಿಲ್ಲುತ್ತಿದ್ದ ಶಂಕರ್ ಗುಣ ಎಲ್ಲರ ಮೆಚ್ಚುಗೆಗೂ ಪಾತ್ರವಾಗಿತ್ತು. ತಾನು ಭಿಕ್ಷೆ ಮೂಲಕ ಸಂಗ್ರಹಿದ ಹಣವನ್ನು ತನಗೆ ಅನ್ನ ನೀಡಿದ ಹೋಟೆಲ್ ಹಾಗೂ ಇತರ ಅಂಗಡಿಯ ಟೇಬಲ್ ನಲ್ಲಿ ಹಾಕಿ ಹೋಗುತ್ತಿದ್ದ.
ಹೀಗೆ ಆ ಭಾಗದ ಜನರ ಒಡಬಾಡಿಯಾಗಿದ್ದ ಶಂಕರ್ ನಿನ್ನೆ ಅಸ್ವಸ್ಥಗೊಂಡು ನಿಧನರಾಗಿದ್ದಾರೆ. ರಸ್ತೆ ಬದಿಯಲ್ಲಿದ್ದ ಕೆಸರನ್ನೆಲ್ಲಾ ಮೈಗೊತ್ತಿಕೊಂಡು ಅಲೆದಾಡುತ್ತಿದ್ದ ಶಂಕರ್ ಗೆ ನೆಲ್ಯಾಡಿ ಹಾಗೂ ಕೊಕ್ಕಡ ಭಾಗದ ಜನ ಚಿಕಿತ್ರೆಯನ್ನೂ ನೀಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಂಕರ್ ನಿಧನರಾದ ಸುದ್ಧಿ ತಿಳಿದ ಪರಿಸರದ ಜನ ಜಾತಿ-ಧರ್ಮದ ಎಲ್ಲೆ ಮೀರಿ ಆತನ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ಸ್ಥಳೀಯ ಪೋಲೀಸರೂ ಶಂಕರ್ ನಿಧನಕ್ಕೆ ಗೌರವ ಸಲ್ಲಿಸಿದ್ದರು.
ಬೈಕ್, ಆಟೋ, ಕಾರು ಸೇರಿದಂತೆ ನೂರಕ್ಕೂ ಮಿಕ್ಕಿದ ವಾಹನಗಳಲ್ಲಿ ಆತನ ಮೃತದೇಹದ ಮೆರವಣಿಗೆ ನಡೆಸಲಾಗಿತ್ತು. ಊರು ಕೇರಿ , ಜಾತಿ,ಧರ್ಮ ಯಾವುದೆಂದು ತಿಳಿಯದೆ ಸಮಾಜದ ಎಲ್ಲಾ ಜನ ಶಂಕರ್ ಮೃತದೇಹಕ್ಕೆ ಅಶ್ರುತರ್ಪಣ ಸಲ್ಲಿಸಿದ್ದರು. ಬಿಕ್ಷುಕನಾಗಿದ್ದ ಶಂಕರಗ ನನ್ನು ಆ ಭಾಗದ ಜನ ಆತನ ನಿಧನದ ಬಳಿಕವೂ ಗೌರವಪೂರ್ವಕವಾಗಿ ಆಧರಿಸಿರುವುದು ಗ್ರಾಮೀಣ ಭಾಗದ ಜನರ ಮಾನವೀಯತೆಯ ಗುಣಕ್ಕೆ ಸಾಕ್ಷಿಯಂತಿತ್ತು. ಯಾವುದೋ ಜನಪ್ರತಿನಿಧಿಯೋ, ಸೆಲೆಬ್ರಿಟಿಗಳಿಗೋ ಸಲ್ಲಬೇಲಾದಂತಹ ಗೌರವ,ಸನ್ಮಾನ ಬಿಕ್ಷುಕನಿಗೆ ಸಲ್ಲಿಸಿದ ನೆಲ್ಯಾಡಿ,ಕೊಕ್ಕಡ ಪರಿಸರದ ಜನರ ಕರ್ತವ್ಯಪ್ರಜ್ಞೆಗೆ ಭಾರೀ ಪ್ರಶಂಸೆಗಳೂ ವ್ಯಕ್ತವಾಗಲಾರಂಭಿಸಿದೆ.