Connect with us

    LATEST NEWS

    18 ಲಕ್ಷದ ಕಾರನ್ನು ಕತ್ತೆಯ ಮೂಲಕ ಶೋರೂಂಗೆ ಎಳೆದು ತಂದ ಮಾಲೀಕ…!

    ಉದಯಪುರ, ಎಪ್ರಿಲ್ 27 : ದುಬಾರಿ ಹಣಕೊಟ್ಟು ಖರೀದಿಸಿದ ಕಾರು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಆಕ್ರೋಶಗೊಂಡ ಮಾಲೀಕನೊಬ್ಬ ಕತ್ತೆ ಮೂಲಕ ಕಾರನ್ನು ಶೋ ರೂಂಗೆ ಎಳೆದು ತಂದು ಪ್ರತಿಭಟನೆ ಮಾಡಿದ ಘಟನೆ ರಾಜಸ್ಥಾನದ ಉದಯಪುರದಲ್ಲಿ ನಡೆದಿದೆ.

    18 ಲಕ್ಷದ ಕಾರನ್ನು ಎರಡು ಕತ್ತೆಗಳ ಕೊರಳಿಗೆ ಕಟ್ಟಿ, ಡೋಲು ಬಾರಿಸುತ್ತಾ ಶೋಂ ರೂಮ್‌ ಕಡೆ ಬರುತ್ತಿರುವ ದೃಶ್ಯದ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಕಾರು ಮಾಲೀಕ ರಾಜ್‌ಕುಮಾರ್‌ ಉದಯಪುರದ ಮದ್ರು ಕೈಗಾರಿಕಾ ಪ್ರದೇಶದ ಶೋರೂಂ ಒಂದರಲ್ಲಿ ಸುಮಾರು ₹18 ಲಕ್ಷ ಕೊಟ್ಟು ಹೊಸ ಕಾರು ಖರೀದಿಸಿದ್ದರು. ಖರೀಸಿದ ಪ್ರಾರಂಭದಿಂದಲೂ ಕಾರಿನಲ್ಲಿ ತಾಂತ್ರಿಕ ದೋಷಗಳು ಕಾಣಿಸಿಕೊಂಡಿದ್ದವು. ಸರ್ವೀಸ್ ಸೆಂಟರ್‌ ಮತ್ತು ಡೀಲರ್‌ಗೆ ಸಮಸ್ಯೆಯನ್ನು ಹೇಳಿಕೊಂಡಿದ್ದರು.

    ಆದರೂ ತಾಂತ್ರಿಕ ದೋಷವನ್ನು ಸಂಪೂರ್ಣವಾಗಿ ಸರಿಪಡಿಸಲು ವಿಫಲರಾಗಿದ್ದರು. ಇದರಿಂದ ಆಕ್ರೋಶಗೊಂಡ ಕಾರು ಮಾಲೀಕ ಕಾರನ್ನು ಕತ್ತೆ ಮೂಲಕ ಶೋಂರೂಂಗೆ ಎಳೆದು ತಂದಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply