Connect with us

    LATEST NEWS

    ದಲಿತರೆಂಬ ಕಾರಣಕ್ಕೆ ಮದುವೆ ಛತ್ರದ ಬುಕ್ಕಿಂಗ್​ ಕ್ಯಾನ್ಸಲ್​ ಮಾಡಿದ ಮಾಲೀಕ; ಪ್ರಕರಣ ದಾಖಲು

    ಮೀರತ್​, ಎಪ್ರಿಲ್ 07: ವಧು ದಲಿತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಕಲ್ಯಾಣ ಮಂಟಪದ ಬುಕ್ಕಿಂಗ್​ ರದ್ದು ಮಾಡಿರುವ ಅಮಾನುಷ ಘಟನೆ ಉತ್ತರಪ್ರದೇಶದ ಮೀರತ್​ನಲ್ಲಿ ನಡೆದಿದೆ.

    ಘಟನೆ ಸಂಬಂಧ ಕಲ್ಯಾಣ ಮಂಟಪದ ಮಾಲೀಕ ರಾಯಿಸ್​ ಅಬ್ಬಾಸಿಯನ್ನು ಪೊಲೀಸರು ಬಂಧಿಸಿದ್ದು. ಬುಕ್​ ಮಾಡಿರುವ ಛತ್ರದಲ್ಲೇ ಮದುವೆ ಮಾಡಿಸಿಕೊಡುವುದಾಗಿ ಕುಟುಂಬಸ್ಥರಿಗೆ ಭರವಸೆ ನೀಡಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ಖಾರ್​ ಖೌಧ ಠಾಣಾಧಿಕಾರಿ ರುಚಿತಾ ಚೌಧರಿ ಸ್ಥಳೀಯ ನಿವಾಸಿ ಜೈದೀಪ್​ ತಮ್ಮ ಸಹೋದರಿ ಮದುವೆಯನ್ನು ಏಪ್ರಿಲ್​ 9ರಂದು ನಿಶ್ಚಯಿಸಿದ್ದರು. ಇದರ ಸಂಬಂಧ ರಾಯಿಸ್​ ಅಬ್ಬಾಸಿ ಒಡೆತನದ ಕಲ್ಯಾಣ ಮಂಟಪವನ್ನು ಬುಕ್​ ಮಾಡಿದ್ದರು.

    ವಧು ದಲಿತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ನಿಮ್ಮ ಕಲ್ಯಾಣ ಮಂಟಪದ ಬುಕ್ಕಿಂಗ್​ ಅನ್ನು ಕ್ಯಾನ್ಸಲ್​ ಮಾಡಲಾಗಿದೆ. ನೀವು ಬೇರೆ ಛತ್ರವನ್ನು ನೋಡಿಕೊಳ್ಳಿ ಎಂದು ಮಾಲೀಕರು ದೂರುದಾರರಿಗೆ ಕರೆ ಮಾಡಿ ಹೇಳಿದ್ದರು. ಈ ಸಂಬಂಧ ಛತ್ರದ ಮಾಲೀಕನ ವಿರುದ್ಧ FIR ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಮಾಲೀಕ ರಾಯಿಸ್​ ಅಬ್ಬಾಸಿ ತಮ್ಮ ಮೇಲೆ ಮಾಡಿರುವ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ನಾವು ಬುಕ್ಕಿಂಗ್​ ಕ್ಯಾನ್ಸಲ್​ ಮಾಡಿಲ್ಲ ಮಾಂಸಹಾರವನ್ನು ಮಾಡಬೇಡಿ ಎಂದು ಹೇಳಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *