Connect with us

LATEST NEWS

ಕುಖ್ಯಾತ ಪಾತಕಿ ಬನ್ನಂಜೆ ರಾಜ ಅಭಿಮಾನಿ ಬಳಗ ಅಸ್ತಿತ್ವಕ್ಕೆ

ಕುಖ್ಯಾತ ಪಾತಕಿ ಬನ್ನಂಜೆ ರಾಜ ಅಭಿಮಾನಿ ಬಳಗ ಅಸ್ತಿತ್ವಕ್ಕೆ

ಉಡುಪಿ, ಡಿಸೆಂಬರ್ 15 : ಕುಖ್ಯಾತ ಪಾತಕಿ ಬನ್ನಂಜೆ ರಾಜನ ಹುಟ್ಟುಹಬ್ಬಕ್ಕೆ ಶುಭಕೋರಿ ಹಾಕಿದ ಫ್ಲೆಕ್ಸ್ ಇದೀಗ ಉಡುಪಿಯಲ್ಲಿ ಭಾರಿ ಸದ್ದು ಮಾಡುತ್ತಿದೆ.

ಉಡುಪಿಯ ಪ್ರಮುಖ ರಸ್ತೆಯಲ್ಲಿ ಕುಖ್ಯಾತ ಪಾತಕಿ ಬನ್ನಂಜೆ ರಾಜನ ಫ್ಲೆಕ್ಸ್ ರಾರಾಜಿಸುತ್ತಿದೆ. ಸದ್ಯ ಬನ್ನಂಜೆ ರಾಜ ಜೈಲಿನಲ್ಲಿದ್ದಾನೆ.

ಸರಣಿ ಅಪರಾಧಗಳಲ್ಲಿ ತೊಡಗಿಸಿಕೊಂಡು ಕುಖ್ಯಾತಿಗೆ ಒಳಗಾದ ಒರ್ವ ಪಾತಕಿಯ ಹುಟ್ಟು ಹಬ್ಬದ ಫ್ಲೆಕ್ಸ್ ಹಾಕಿದವರು ಯಾರು ?

ಬನ್ನಂಜೆ ರಾಜ ಅಭಿಮಾನಿ ಬಳಗ ಎಂಬ ಸಂಘಟನೆಯ ಹೆಸರಿನಲ್ಲಿರುವ ಇದಕ್ಕೆ ಉಡುಪಿ ನಗರ ಸಭೆ ಹೇಗೆ ಅನುಮತಿ ನೀಡಿತು ಎಂಬುದು ನಾಗರಿಕರ ಪ್ರಶ್ನೆಯಾಗಿದೆ.

ಬನ್ನಂಜೆ ರಾಜ ಅಭಿಮಾನಿ ಬಳಗ ಸಂಘಟನೆ ರಿಜಿಸ್ಟರ್ ಎಂದು ಬ್ಯಾನರಿನಲ್ಲಿ ತೋರಿಸಲಾಗಿದೆ.

ಅದರೆ ಓರ್ವ ಅರೋಪಿ, ಜೈಲಿನಲ್ಲಿರುವ ಕುಖ್ಯಾತ ಕ್ರಿಮಿನಲ್ ಪಾತಕಿಯ ಹೆಸರಿನಲ್ಲಿ ಸಂಘಟನೆಯ ಹೆಸರನ್ನು ನೋಂದಾವಣೆ ಅಥವಾ ರಿಜಿಸ್ಟರ್ ಮಾಡಿದವರು ಯಾರು ?

ಮುಂದಿನ ದಿನಗಳಲ್ಲಿ ಕಸಬ್, ಛೋಟಾ ರಾಜನ್, ದಾವೂದ್ ಇಬ್ರಾಹಿಂ, ಅಬುಸಲೇಂ,ರವಿ ಪೂಜಾರಿ, ಕಲಿ ಯೋಗಿಶ್ ಹೀಗೆ ಅನೇಕರ ಹೆಸರಿನಲ್ಲಿ ಅಭಿಮಾನಿ ಸಂಘಟನೆಗಳು ಹುಟ್ಟಿ ಬಂದರೂ ಅಶ್ಚರ್ಯವಿಲ್ಲ.

ಅವುಗಳನ್ನು ಅಧಿಕೃತ ಎಂದು ನೊಂದಾಯಿಸಬಹುದು.

ಮುಂದೊಂದು ದಿನ ಬನ್ನಂಜೆ ರಾಜ ಇತರರಂತೆ ಸಮಾಜ ಸೇವೆಯ ಹೆಸರಿನಲ್ಲಿ ಸಂಘಟನೆಗಳನ್ನು ಕಟ್ಟಿಕೊಂಡು ಸಮಾಜದ ಮುಖ್ಯವಾಹಿನಿಗೆ, ಅಥವಾ ಸಕ್ರೀಯ ರಾಜಕರಣಕ್ಕೆ ಬಂದರೂ ಅಚ್ಚರಿ ಇಲ್ಲ.

ಆದರೆ ಆತನ ಅಭಿಮಾನಿಗಳು ಹುಟ್ಟುಹಬ್ಬದ ಫ್ಲೆಕ್ಸ್ ಹಾಕಿರುವುದು ಸಾರ್ವಜನಿಕರಲ್ಲಿ ಭಾರಿ ಅಸಮಾಧಾನ ಮೂಡಿಸಿದೆ.

 

ಯಾರು ಈ ಬನ್ನಂಜೆ ರಾಜ ?

ಭೂಗತ ಪಾತಕಿ ಬನ್ನಂಜೆ ರಾಜನನ್ನು 2015 ಫೆಬ್ರವರಿಯಲ್ಲಿ  ಉತ್ತರ ಆಫ್ರಿಕಾದ ಮೊರೊಕೋ ಕಾಸಾಬ್ಲಾಂಕಾ ನಗರದಲ್ಲಿ ಬಂಧಿಸಲಾಗಿತ್ತು.

ಮೂಲತಃ ಉಡುಪಿ ಜಿಲ್ಲೆಯ ಬನ್ನಂಜೆಯ ರಾಜ, 1998ರಲ್ಲಿ ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ.

ಮುತ್ತಪ್ಪ ರೈ ಗ್ಯಾಂಗ್ ಜೊತೆ ಗುರುತಿಸಿಕೊಂಡಿದ್ದ ಈತ ನಂತರ ತಲೆಮರೆಸಿಕೊಂಡು ದುಬೈಗೆ ಪರಾರಿಯಾಗಿದ್ದ.

ದುಬೈನಲ್ಲಿ ಇದ್ದುಕೊಂಡು ತನ್ನ ಸಹಚರರ ಮೂಲಕ ಭೂಗತ ಚಟುವಟಿಕೆ ಮುಂದುವರಿಸಿದ್ದ.

ಈತನ ಮೇಲೆ ರಾಜ್ಯದ ಪೊಲೀಸರು ಸುಮಾರು 18 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದರು.

ಬನ್ನಂಜೆ ವಿರುದ್ಧ ಬೆಂಗಳೂರು, ಉಡುಪಿ ಸೇರಿ ಹಲವಾರು ಕಡೆ ಪ್ರಕರಣ ದಾಖಲಾಗಿದೆ.

2009ರಲ್ಲಿ ಬನ್ನಂಜೆಯನ್ನು ದುಬೈ ಪೊಲೀಸರು ಬಂಧಿಸಿದ್ದು, ನಂತರ ಆತ ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲಿ ದುಬೈ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದ.

ಕೊಲೆ, ಸುಲಿಗೆ, ಹಫ್ತಾ ವಸೂಲಿ ಸೇರಿದಂತೆ ಹಲವು ದುಷ್ಕೃತ್ಯಗಳಲ್ಲಿ ಭಾಗಿಯಾಗಿದ್ದ ಪಾತಕಿ ಬನ್ನಂಜೆ ರಾಜ ಆಲಿಯಾಸ್ ರಾಜೇಂದ್ರ ಕುಮಾರ್ ಆಲಿಯಾಸ್ ಆರ್ ಕೆ ಬೆಂಗಳೂರು ಸೇರಿದಂತೆ ಹಲವು ಪೊಲೀಸರಿಗೆ ಬೇಕಾಗಿದ್ದ.

ಆ ನಿಟ್ಟಿನಲ್ಲಿ ಬನ್ನಂಜೆ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಲಾಗಿತ್ತು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *