Connect with us

LATEST NEWS

ಪರೇಶ್ ಮೆಸ್ತಾ ಸಾವಿನ ತನಿಖೆ NIA ಗೆ ವಹಿಸುವಂತೆ ಸಂಸದರಿಂದ ಗೃಹ ಸಚಿವರಿಗೆ ಮನವಿ

ಪರೇಶ್ ಮೆಸ್ತಾ ಸಾವಿನ ತನಿಖೆ NIA ಗೆ ವಹಿಸುವಂತೆ ಸಂಸದರಿಂದ ಗೃಹ ಸಚಿವರಿಗೆ ಮನವಿ

ನವದೆಹಲಿ,ಡಿಸೆಂಬರ್ 19 : ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದ ಪರೇಶ್ ಮೆಸ್ತಾ ಅವನ ಸಾವಿನ ತನಿಖೆಯನ್ನು ಕೇಂದ್ರೀಯ ತನಿಖಾ ದಳ ಎನ್ ಐ ಎ ಗೆ ವಹಿಸಬೇಕೆಂದು ಆಗ್ರಹಿಸಿ ಇಂದು ಕರ್ನಾಟಕ ರಾಜ್ಯದ ಬಿಜೆಪಿ ಸಂಸದರ ನಿಯೋಗ ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್ ಅವರಿಗೆ ಮನವಿ ಸಲ್ಲಿಸಿತು.

ನವದೆಹಲಿಯಲ್ಲಿನ ಗೃಹ ಸಚಿವಾಲಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದ ನಿಯೋಗ ಗೃಹ ಸಚಿವ ರಾಜ್ ನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಲಿಖಿತ ಮನವಿ ಸಲ್ಲಿಸಿತು.

ಹಿಂದೂ ಕಾರ್ಯಕರ್ತನಾದ ಪರೇಶ್ ಮೆಸ್ತಾ ಅವನನ್ನು ಜಿಹಾದಿ ದುಷ್ಕರ್ಮಿಗಳು ಅಪಹರಣ ಮಾಡಿ ಬರ್ಬರವಾಗಿ ಹಿಂಸೆ ನೀಡಿದ್ದಾರೆ.

ಮತ್ತು ಭೀಕರವಾಗಿ ಕೊಲೆ ಮಾಡಿದ್ದಾರೆ. ಕೊಲೆಗಡುಕರನ್ನು ಕಂಡು ಹಿಡಿಯಲು ರಾಜ್ಯ ಸರ್ಕಾರ ವಿಫಲವಾಗಿದೆ.

ಆದ್ದರಿಂದ ಈ ಪ್ರಕರಣವನ್ನು ಕೇಂದ್ರೀಯ ತನಿಕಾ ದಳ ವಹಿಸಿ ಅವರಿಂದ ತನಿಖೆ  ಮಾಡಿ ನೈಜ ಕೊಲೆಗಡುಕರನ್ನು ಹಿಡಿಯಬೇಕೆಂದು ಮನವಿ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಕರಾವಳಿ ಭಾಗದಲ್ಲಿನ ಭಯೋತ್ಪದನೆಯನ್ನು ಮಟ್ಟ ಹಾಕಲು ಮಂಗಳೂರಿನಲ್ಲಿ ಕೇಂದ್ರೀಯ ತನಿಖಾ ದಳದ ಕಚೇರಿಯನ್ನು ಪ್ರಾರಂಭಿಸಬೇಕೆಂದು ಮನವಿ ಮಾಡಿದರು.

ಘಟನೆಯ ಹಿನ್ನೆಲೆ :

ಕಳೆದ ಡಿಸೆಂಬರ್ 8ರಂದು ಪರೇಶ್ ನ ಮೃತದೇಹ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕೆರೆಯಲ್ಲಿ ಕಂಡುಬಂದಿತ್ತು.

ಮೇಸ್ತಾ ಅನುಮಾನಾಸ್ಪದ ಸಾವು ಖಂಡಿಸಿ ಶಿರಸಿಯಲ್ಲಿ ಬಿಜೆಪಿ ನೇತೃತ್ವದಲ್ಲಿ ಹಿಂದು ಸಂಘಟನೆಗಳು ನಡೆಸಿದ ಪ್ರತಿಭಟನೆ ವೇಳೆ ಕಲ್ಲು ತೂರಾಟವಾಗಿ ವಾತಾವರಣ ಪ್ರಕ್ಷುಬ್ಧವಾಗಿತ್ತು.

ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಚ್ ಮಾಡಿ ಅಶ್ರುವಾಯು ಸಿಡಿಸಿದ್ದರು. ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಅದಕ್ಕೂ ಮುನ್ನ ಐಜಿಪಿ ಹೇಮಂತ್​ ನಿಂಬಾಳ್ಕರ್ ಅವರ ಕಾರಿಗೆ ಉದ್ರಿಕ್ತರು ಬೆಂಕಿ ಹಚ್ಚಿದ್ದರು.

ಇದಕ್ಕೂ ಮೊದಲು ಸಿಬಿಐ ತನಿಖೆಗೆ ಒತ್ತಾಯಿಸುವಂತೆ ಹೋರಾಡಲು ಬಿಜೆಪಿ ಸಜ್ಜಾಗಿತ್ತು. ಪರೇಶ್​ ಮೇಸ್ತಾ ತಂದೆ ಕಮಲಾಕರ್ ಕೂಡ ಮಗನ ಕೊಲೆಯಾಗಿದ್ದು, ರಾಜ್ಯದ ಪೋಲಿಸರ ಮೇಲೆ ನಂಬಿಕೆಯಿಲ್ಲ.

ಪ್ರಕರಣವನ್ನು ಸಿಬಿಐ ಅಥವಾ ಎನ್ಐಎ ಗೆ ವಹಿಸಬೇಕೆಂದು ಆಗ್ರಹಿಸಿದ್ದರು. ಈ  ಹಿನ್ನೆಲೆಯಲ್ಲಿ  ಪರೇಶ್​ ಮೇಸ್ತಾ ಅನುಮಾನಾಸ್ಪದ ಸಾವು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ರಾಜ್ಯ ಸರ್ಕಾರ ತೀರ್ಮಾನಿಸಿತ್ತು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *