LATEST NEWS
ಮೀನುಗಾರರ ಪತ್ತೆಗೆ ಸರಕಾರಗಳ ನಿರ್ಲಕ್ಷ್ಯ ಜನವರಿ 6 ರಂದು ಬಂದರುಗಳು ಬಂದ್!
ಮೀನುಗಾರರ ಪತ್ತೆಗೆ ಸರಕಾರಗಳ ನಿರ್ಲಕ್ಷ್ಯ ಜನವರಿ 6 ರಂದು ಬಂದರುಗಳು ಬಂದ್!
ಮಂಗಳೂರು ಜನವರಿ 4: ಮಲ್ಪೆಯಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಏಳು ಮೀನುಗಾರರು ನಾಪತ್ತೆಯಾಗಿ 20 ದಿನ ಕಳೆದಿದ್ದು, ರಾಜ್ಯ ಹಾಗೂ ಕೇಂದ್ರ ಸರಕಾರ ಮೀನುಗಾರರ ಪತ್ತೆಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿ ಮೀನುಗಾರರು ಬೃಹತ್ ಪ್ರತಿಭಟನೆಗೆ ನಿರ್ಧರಿಸಿದ್ದಾರೆ.
ಮಲ್ಪೆಯಿಂದ ಆಳಸಮುದ್ರಕ್ಕೆ ತೆರಳಿ ನಾಪತ್ತೆಯಾದ ಸುವರ್ಣ ತ್ರಿಭುಜ ಬೋಟ್ ಹಾಗೂ ಅದರಲ್ಲಿದ್ದ 7 ಮೀನುಗಾರರನ್ನು ಪತ್ತೆ ಹಚ್ಚುವಲ್ಲಿ ರಾಜ್ಯ- ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ, ಕರಾವಳಿಯ ಮೀನುಗಾರರು ಅನಾಥವಾಗಿದ್ದಾರೆ, ಈ ಹಿನ್ನಲೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಮೀನುಗಾರರು ನಿರ್ಧರಿದ್ದು, ಜನವರಿ 6 ರಂದು ಕಡಲ ಮಕ್ಕಳು ಬೀದಿಗಿಳಿದು ಹೋರಾಟ ಮಾಡಲಿದ್ದಾರೆ ಎಂದರು. ಮಲ್ಪೆಯಿಂದ ಉಡುಪಿಯವರೆಗೆ ಪಾದಯಾತ್ರೆ ನಡೆಸಲು ನಿರ್ಧರಿಸಿದ್ದಾರೆ. ಸುಮಾರು 50 ಸಾವಿರ ಮಂದಿ ರಾಷ್ಟ್ರೀಯ ಹೆದ್ದಾರಿ ತಡೆ ಮಾಡಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಬಿಸಿಮುಟ್ಟಿಸುವ ಕೆಲಸ ಮಾಡಲು ನಿರ್ಧರಿಸಿದ್ದಾರೆ.
ರಾಜ್ಯ ಸರಕಾರದಿಂದ ಸಿಎಂ, ಉಸ್ತುವಾರಿ ಸಚಿವರು ಇತ್ತ ತಲೆಯೇ ಹಾಕಿಲ್ಲ, ರೈತರಿಗೆ ಸಮಸ್ಯೆಯಾದಾಗಲೂ ಅಸಡ್ಡೆ ತೋರಿಸುತ್ತೀರಾ? ಎಂದು ದ.ಕ- ಉಡುಪಿ ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ ಪ್ರಶ್ನಿಸಿದ್ದಾರೆ.