Connect with us

    LATEST NEWS

    ಡ್ಯೂಟಿ ಬಿಟ್ಟು ಸಮವಸ್ತ್ರದಲ್ಲೇ ಬ್ಯೂಟಿ ಪಾರ್ಲರ್ ಗೆ ಹೋಗಿ ಕೆಲಸ ಕಳೆದುಕೊಂಡ ಇನ್ಸ್‌ಪೆಕ್ಟರ್!

    ಲಕ್ನೋ, ಆಗಸ್ಟ್ 28: ಪೊಲೀಸರು ಸಮವಸ್ತ್ರ ಧರಿಸಿದ ತಕ್ಷಣ ಅವರ ಮೇಲಿನ ಘನತೆ ಗೌರವ ಹೆಚ್ಚುತ್ತದೆ. ಆದರೆ ಕೆಲವೊಮ್ಮೆ ಸಮವಸ್ತ್ರ ಧರಿಸಿದ ಪೋಲೀಸರು ಇಂತಹ ಕೃತ್ಯ ಎಸಗುವುದು ಇಡೀ ಪೊಲೀಸ್ ಇಲಾಖೆಯನ್ನು ನಾಚಿಕೆಗೇಡು ಮಾಡುತ್ತದೆ. ಇದಕ್ಕೆ ಉತ್ತಮ ನಿದರ್ಶನ ಉತ್ತರಪ್ರದೇಶದ ಪ್ರಯಾಗ್ ರಾಜ್ ಜಿಲ್ಲೆಯಲ್ಲಿ ನಡೆದ ಘಟನೆ.

    ಪ್ರಯಾಗ್‍ರಾಜ್‍ನ ಸಿವಿಲ್ ಲೈನ್ ಔಟ್‍ಪೋಸ್ಟ್ ಇನ್‍ಚಾರ್ಜ್ ರಾಕೇಶ್ ಚಂದ್ ಶರ್ಮಾ ಅವರು ಸಮವಸ್ತ್ರ ಧರಿಸಿಯೇ ಮಸಾಜ್ ಸೆಂಟರ್‍ಗೆ ತೆರಳಿ ಮಸಾಜ್ ಮಾಡಿಕೊಂಡಿದ್ದಾರೆ. ರಾಕೇಶ್ ಮಸಾಜ್ ಮಾಡಿಕೊಳ್ಳುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಅವರನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.

    ಯುವತಿಯೊಬ್ಬಳು ಇನ್ಸ್ ಪೆಕ್ಟರ್ ಮುಖಕ್ಕೆ ಮಸಾಜ್ ಮಾಡುತ್ತಿದ್ದಳು. ಇದನ್ನು ಅಲ್ಲೆ ಇದ್ದವರು ತಮ್ಮ ಮೊಬೈಲ್‍ನಲ್ಲಿ ವೀಡಿಯೋ ಮಾಡಿ ಪೊಲೀಸ್ ಇಲಾಖೆಯ ಟ್ವಿಟ್ಟರ್‍ಗೆ ಕಳುಹಿಸಿದ್ದಾರೆ. ಅಲ್ಲದೆ ಇನ್ಸ್ ಪೆಕ್ಟರ್ ಅವರು ತನ್ನ ಪ್ರದೇಶದ ಸಿವಿಲ್ ಲೈನ್‍ನ ಸ್ಪಾದಲ್ಲಿ ಮಹಿಳೆಗೆ ಮಸಾಜ್ ಮಾಡುತ್ತಿದ್ದಾನೆ ಎಂದು ಬರೆದಿದ್ದಾರೆ.

    ರಾಕೇಶ್ ಅವರು ಸ್ಪಾ ಕೇಂದ್ರದಲ್ಲಿ ಚೇರ್ ಮೇಲೆ ಕುಳಿತುಕೊಂಡಿದ್ದಾರೆ. ಇತ್ತ ಯುವತಿ ಚೇರ್ ಹಿಂದೆ ನಿಂತು ಇನ್ಸ್‍ಪೆಕ್ಟರ್ ಮುಖಕ್ಕೆ ನಯವಾಗಿ ಮಸಾಜ್ ಮಾಡುತ್ತಿದ್ದಾರೆ. ಯುವತಿ ಮುಖ ಕ್ಷಣಾರ್ಧದಲ್ಲಿ ಕಣ್ಣಮುಂದೆ ಬರುತ್ತದೆ. ನಂತರ ಅವಳು ತನ್ನ ಮುಖವನ್ನು ತಿರುಗಿಸುತ್ತಾಳೆ. ಸದ್ಯ ಕೇವಲ 17 ಸೆಕೆಂಡ್‍ಗಳ ವೈರಲ್ ವೀಡಿಯೋ ಇನ್ಸ್ ಪೆಕ್ಟರ್ ಕಾರ್ಯವೈಖರಿಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೆ ಎಚ್ಚೆತ್ತ ಅಲ್ಲಿನ ಎಸ್‍ಎಸ್‍ಪಿ ಪ್ರಯಾಗರಾಜ್ ಶೈಲೇಂದ್ರ ಕುಮಾರ್ ಪಾಂಡೆ ಅವರು ರಾಕೇಶ್ ಅವರನ್ನು ಅಮಾನತುಗೊಳಿಸಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *