KARNATAKA
ತೀರ್ಥ ಸೇವಿಸುವಾಗ ಗಂಟಲು ಸೇರಿದ ಶ್ರೀಕೃಷ್ಣನ ಮೂರ್ತಿ!

ಬೆಳಗಾವಿ, ಜೂನ್ 25: ಗಂಟಲಲ್ಲಿ ಲೋಹದ ಶ್ರೀ ಕೃಷ್ಣನ ಮೂರ್ತಿ ಸಿಕ್ಕಿಕೊಂಡು ಪ್ರಾಣಾಪಾಯಕ್ಕೆ ಸಿಲುಕಿದ್ದ ವ್ಯಕ್ತಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಮೂರ್ತಿ ಹೊರತೆಗೆದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ತೀರ್ಥ ಸೇವಿಸುವ ವೇಳೆ ತೀರ್ಥದ ಬಟ್ಟಲಿನಲ್ಲಿದ್ದ ದೇವರ ಮೂರ್ತಿ ಆಕಸ್ಮಿಕವಾಗಿ ವ್ಯಕ್ತಿಯ ಗಂಟಲು ಸೇರಿದೆ. ಆದರೆ 5 ಸೆಂ.ಮೀ ಉದ್ದದ ಮೂರ್ತಿ, ಗಂಟಲೊಳಗೆ ಸೇರಿರುವುದು 45 ವರ್ಷದ ವ್ಯಕ್ತಿಗೆ ಆ ಕ್ಷಣ ಅರಿವಿಗೆ ಬಂದಿರಲಿಲ್ಲ.

ಕೆಲ ನಿಮಿಷಗಳ ನಂತರ ಗಂಟಲುನೋವು ಮತ್ತು ಊತ ಕಾಣಿಸಿಕೊಂಡಿತ್ತು. ಬಳಿಕ ಅವರನ್ನು ಚಿಕಿತ್ಸೆಗಾಗಿ ನಗರದ ಕೆಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಎಂಡೋಸ್ಕೋಪಿ ಮೂಲಕ ಪರಿಶೀಲಿಸಿದಾಗ ಮೂರ್ತಿಯ ಎಡಗಾಲು ವ್ಯಕ್ತಿಯ ಅನ್ನನಾಳದಲ್ಲಿ ಸಿಲುಕಿದ್ದು ದೃಢವಾಗಿದೆ. ಬಳಿಕ ಅವರನ್ನು ಚಿಕಿತ್ಸೆಗಾಗಿ ನಗರದ ಕೆಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆಗೆ ದಾಖಲಿಸಲಾಯಿತು.
ವೈದ್ಯರು ಎಂಡೋಸ್ಕೋಪಿ ಮೂಲಕ ಪರಿಶೀಲಿಸಿದಾಗ ಮೂರ್ತಿಯ ಎಡಗಾಲು ವ್ಯಕ್ತಿಯ ಅನ್ನನಾಳದಲ್ಲಿ ಸಿಲುಕಿದ್ದು ದೃಢವಾಗಿದೆ. ಶಸ್ತ್ರಚಿಕಿತ್ಸೆ ನಡೆಸಿ ವೈದ್ಯರು ಮೂರ್ತಿಯನ್ನು ದೇಹದಿಂದ ಹೊರ ತೆಗೆಯುವಲ್ಲಿ ಸಫಲರಾಗಿದ್ದಾರೆ. ವ್ಯಕ್ತಿ ಅಪಾಯದಿಂದ ಪಾರಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ.