Connect with us

    LATEST NEWS

    ದೇಶದ ಪ್ರಧಾನಿಯ ಹೆಸರೇ ಗೊತ್ತಿಲ್ಲದ ವರ: ಕೋಪಗೊಂಡ ವಧು ಮಾಡಿದ್ದೇನು ಗೊತ್ತಾ…?

    ಉತ್ತರ ಪ್ರದೇಶ, ಜೂನ್ 21: ಇತ್ತೀಚಿನ ದಿನಗಳಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಮದುವೆ ಮುರಿಯುವ ಪ್ರಕರಣ ಹೆಚ್ಚಾಗಿ ಕೇಳಿ ಬರುತ್ತಿದೆ. ಅದರಂತೆ ಉತ್ತರ ಪ್ರದೇಶದ ಗಾಜಿಪುರದ ನಾಸಿರ್‌ಪುರ ಗ್ರಾಮದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ವರನಿಗೆ ದೇಶದ ಪ್ರಧಾನಿ ಯಾರೆಂದು ಗೊತ್ತಿಲ್ಲ ಎಂಬ ಕಾರಣಕ್ಕೆ ವಧು ತಾನು ಮದುವೆಯಾಗಬೇಕಿದ್ದ ಹುಡುಗ ತನಗೆ ಬೇಡವೆಂದು ಕೋಪದಿಂದ ಅಲ್ಲಿದ್ದ ವರನ ಕಿರಿಯ ಸಹೋದರನನ್ನೇ ವರಿಸಿಕೊಂಡಿದ್ದಾಳೆ.

    ಉತ್ತರ ಪ್ರದೇಶದ ನಸೀರಪುರ ಗ್ರಾಮದ ಶಿವಶಂಕರರಾಮ ಅವರು ಕರಂಡದ ಬಸಂತ್ ಪಟ್ಟಿಯಲ್ಲಿರುವ ಯುವತಿಯೊಂದಿಗೆ ವಿವಾಹವಾಗಬೇಕಿತ್ತು. ಅದರಂತೆ ಜೂನ್ 11ರಂದು ಹಿಂದೂ ಸಂಪ್ರದಾಯಗಳ ಪ್ರಕಾರ ಮದುವೆಗೆ ಮಂಗಳಕರ ದಿನವೆಂದು ನಿಗದಿಪಡಿಸಲಾಗಿದೆ. ಜೂನ್ 11 ರಂದು ಶಿವಶಂಕರ್ ಮದುವೆಯ ಮೆರವಣಿಗೆಯೊಂದಿಗೆ ವಧುವಿನ ಮನೆಗೆ ಬಂದಿದ್ದು. ಹಿಂದೂ ಸಂಪ್ರದಾಯದಂತೆ ಮದುವೆ ಕಾರ್ಯಗಳು ನಡೆದಿದೆ.

    ಮರುದಿನ ಬೆಳಗ್ಗೆ ನಡೆದ ಖಿಚಡಿ ಸಮಾರಂಭದಲ್ಲಿ ವರನು ತನ್ನ ಸೊಸೆ ಹಾಗೂ ಸೋದರ ಮಾವನ ಜೊತೆ ಮೋಜು ಮಸ್ತಿ ಮಾಡಿಕೊಂಡಿದ್ದ ಸಂದರ್ಭ. ಶಿವಶಂಕರ್ ಅವರಿಗೆ ವಧುವಿನ ಕಡೆಯಿಂದ ಪ್ರಶ್ನೆ ಎದುರಾಗಿದೆ. ನಮ್ಮ ದೇಶದ ಪ್ರಧಾನಿ ಯಾರು ಎಂದು ಕೇಳಿದ್ದಾಳೆ. ಆದರೆ ಶಿವಶಂಕರನಿಗೆ ಆ ಪ್ರಶ್ನೆಗೆ ಉತ್ತರಿಸಲಾಗಲಿಲ್ಲ. ಅಲ್ಲಿದ್ದವರೆಲ್ಲ ಶಿವಶಂಕರ್ ಅವರನ್ನು ಗೇಲಿ ಮಾಡಲು ಆರಂಭಿಸುತ್ತಾರೆ. ‘ಪ್ರಧಾನಿ ಹೆಸರು ಗೊತ್ತಿಲ್ಲದಿದ್ದರೆ ಹೇಗೆ?’ ಎಂದು ನಿಂದಿಸಿದ್ದಾರೆ, ಇದನ್ನೇ ದೊಡ್ಡ ಅವಮಾನ ಎಂದು ಪರಿಗಣಿಸಿದ ಪತ್ನಿ ಶಿವಶಂಕರ್ ಅವರನ್ನು ತೊರೆದು ಅವರ ಕಿರಿಯ ಸಹೋದರ ಅನಂತ್ ಅವರನ್ನು ಸ್ಥಳದಲ್ಲೇ ಮದುವೆಯಾಗಿದ್ದಾಳೆ.

    ಇತ್ತ ಘಟನೆ ಕುರಿತು ಪೊಲೀಸ್ ದೂರು ದಾಖಲಿಸುವುದಾಗಿ ವರನ ತಂದೆ ತಿಳಿಸಿದ್ದಾರೆ. ಯಾವುದೇ ಕಡೆಯಿಂದ ನಮಗೆ ದೂರು ಬಂದಿಲ್ಲ ಎಂದು ಪೊಲೀಸ್ ಅಧಿಕಾರಿ ಸೈದ್‌ಪುರ್ ಕೊತ್ವಾಲ್ ವಂದನಾ ಸಿಂಗ್ ಹೇಳಿದ್ದಾರೆ. ದೂರು ಬಂದ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಯುವಕನೊಬ್ಬ ಠಾಣೆಗೆ ಬಂದು ಪ್ರಧಾನಿ ಹೆಸರು ಬಹಿರಂಗಪಡಿಸದ ಕಾರಣ ತನ್ನ ಮದುವೆ ನಿಲ್ಲಿಸಲಾಗಿದೆ ಎಂದು ಹೇಳಿದ್ದಾನೆ. ಈ ಬಗ್ಗೆ ಲಿಖಿತ ದೂರು ಬಂದ ನಂತರ ಮಧ್ಯ ಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕೊತ್ವಾಲ್ ಸಿಂಗ್ ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply