LATEST NEWS
ದತ್ತು ಪಡೆದ ಕುಟುಂಬದಿಂದಲೇ ಬಾಲಕಿ ಮೇಲೆ ಅತ್ಯಾಚಾರ!
ಮುಂಬೈ, ಆಗಸ್ಟ್ 13: ಅನಾಥಾಶ್ರಮದಿಂದ ದತ್ತು ಪಡೆದ ಅಪ್ರಾಪ್ತ ಬಾಲಕಿಯ ಮೇಲೆ ರಾತ್ರಿ ಮಲಗಿದ್ದಾಗ ಅತ್ಯಾಚಾರ ನಡೆಸಲಾಗಿದೆ.
ದತ್ತು ಪಡೆದ ಪೋಷಕರು ಆಕೆಯನ್ನು ಮತಾಂತರ ಮಾಡುವಂತೆ ಒತ್ತಡ ಹೇರಿದ್ದರು ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಪೊಲೀಸರು ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಓರ್ವನನ್ನು ಬಂಧಿಸಿದ್ದಾರೆ. ಸಂತ್ರಸ್ತ ಬಾಲಕಿಗೆ 17 ವರ್ಷವಾಗಿದ್ದು, ಮುಂಬೈನ ಪ್ರತಿಷ್ಠಿತ ಕಾಲೇಜಿನಲ್ಲಿ ಓದುತ್ತಿದ್ದಾಳೆ. ಆಕೆಯ ತಂದೆ ಕರೋನಾ ಅವಧಿಯಲ್ಲಿ ಸಾವನ್ನಪ್ಪಿದರೆ, ಆಕೆಯ ತಾಯಿ ಜನವರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಆ ನಂತರ ಸಂತ್ರಸ್ತ ಬಾಲಕಿ ಮತ್ತು ಆಕೆಯ ಇಬ್ಬರು ಸಹೋದರರು ಅನಾಥಾಶ್ರಮದಲ್ಲಿ ವಾಸಿಸುತ್ತಿದ್ದರು. ಏತನ್ಮಧ್ಯೆ, ಮೀರಾ ರಸ್ತೆಯಲ್ಲಿ ವಾಸಿಸುವ ಕುಟುಂಬವು ಸಂತ್ರಸ್ತೆ ಮತ್ತು ಆಕೆಯ ಇಬ್ಬರು ಕಿರಿಯ ಸಹೋದರರನ್ನು ದತ್ತು ತೆಗೆದುಕೊಂಡಿದೆ.
ದತ್ತು ಪಡೆದ ಕುಟುಂಬದ 19 ವರ್ಷದ ಆರೋಪಿ, ಆಗಸ್ಟ್ 8 ರಂದು ಸಂತ್ರಸ್ತೆ ರಾತ್ರಿ ಮನೆಯಲ್ಲಿ ಮಲಗಿದ್ದಾಗ ಲೈಂಗಿಕ ಕಿರುಕುಳ ನೀಡಿದ್ದಾನೆ. ಆಕೆ ವಿರೋಧಿಸಿದರೂ ಕೂಡ ಬಲವಂತವಾಗಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಮರುದಿನ ಸಂತ್ರಸ್ತ ಬಾಲಕಿ ಮೀರಾ ರೋಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.