National
ಅಂಬಾಲ ವಾಯುನೆಲೆಯಲ್ಲಿ ಇಂದು ಘರ್ಜಿಸಲಿದೆ ರಫೇಲ್

ಅಂಬಾಲ, ಜುಲೈ 29: ಭಾರತೀಯ ವಾಯುಸೇನೆಯ ಪ್ರಬಲ ಅಸ್ತ್ರ ಎಂದೇ ಬಿಂಬಿಸಲಾಗಿರುವ ರಫೇಲ್ ಯುದ್ಧ ವಿಮಾನಗಳು ಇಂದು ಭಾರತೀಯ ಸೇನೆಯನ್ನು ಸೇರ್ಪಡೆಗೊಳ್ಳಲಿದೆ. ಪ್ರಾನ್ಸ್ ಹಾಗೂ ಭಾರತ ಸರಕಾರದ ನಡುವೆ ಒಳಪಟ್ಟ ಒಪ್ಪಂದದ ಮೇರೆಗೆ ಇಂದು ಮೊದಲ ಹಂತದ ಐದು ರಫೇಲ್ ವಿಮಾನಗಳು ಭಾರತಕ್ಕೆ ಆಗಮಿಸಲಿದೆ.
ಹರಿಯಾಣದ ಅಂಬಾಲ ವಾಯುನೆಲೆಯಲ್ಲಿ ಭಾರತೀಯ ವಾಯುಪಡೆ ಅಧಿಕಾರಿಗಳು ರಫೇಲ್ ವಿಮಾನಗಳನ್ನು ಬರಮಾಡಿಕೊಳ್ಳಲಿದ್ದಾರೆ. ಪ್ರಾನ್ಸ್ ನಿಂದ ಸುಮಾರು 7000 ಸಾವಿರ ಕಿಲೋ ಮೀಟರ್ ದೂರವನ್ನು ಕ್ರಮಿಸಿಕೊಂಡು ಬರಲಿರುವ ರಫೇಲ್ ಯುದ್ಧ ವಿಮಾನಕ್ಕೆ ಪ್ರಯಾಣದ ಸಂದರ್ಭದಲ್ಲಿ ಎರಡು ಬಾರಿ ಆಕಾಶ ಮಾರ್ಗದಲ್ಲಿ ಇಂಧನ ತುಂಬಿಸಲಾಗುತ್ತದೆ. ಅಲ್ಲದೆ ಮಧ್ಯಪ್ರಾಜ್ಯ ವಾಯುನೆಲೆಯಲ್ಲೂ ಇಂಧನ ತುಂಬಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.

ಇಂದು ಭಾರತೀಯ ಸೇನೆಯನ್ನು ಸೇರ್ಪಡೆಗೊಳ್ಳಲಿರುವ ಐದು ರಫೇಲ್ ಯುದ್ಧ ವಿಮಾನಗಳು ಸಂಪೂರ್ಣ ಶಸ್ತಾಸ್ತ್ರ ಸಜ್ಜಿತವಾಗಿದ್ದರೂ, ಭಾರತೀಯ ಹವಾಮಾನಕ್ಕೆ ತಕ್ಕಂತೆ ಸಿದ್ಧಗೊಳಿಸುವ ಪ್ರಕ್ರಿಯೆ ಭಾರತದಲ್ಲೇ ನಡೆಯಲಿದೆ. ಅಂಬಾಲ ವಾಯನೆಲೆಗೆ ರಫೇಲ್ ಆಗಮಿಸುವ ಹಿನ್ನಲೆಯಲ್ಲಿ ಅಂಬಾಲ ವಾಯುನೆಲೆ ಪರಿಸರದಾದ್ಯಂತ 144 ಸೆಕ್ಷನ್ ಜಾರಿಗೊಳಿಸಲಾಗಿದೆ.
ರಫೇಲ್ ಯುದ್ಧ ವಿಮಾನ ಖರೀದಿ ಕುರಿತಂತೆ ಮೋದಿ ಸರಕಾರದ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಪ್ರತಿಪಕ್ಷಗಳು ಮಾಡುತ್ತಿದ್ದ ನಡುವೆಯೇ ಇದೀಗ ಮೊದಲ ಹಂತದ ಯುದ್ಧ ವಿಮಾನಗಳು ಭಾರತೀಯ ವಾಯುಪಡೆಯನ್ನು ಸೇರ್ಪಡೆಗೊಂಡಿದೆ. ರಫೇಲ್ ಯುದ್ಧ ವಿಮಾನಗಳು ಭಾರತೀಯ ಸೇನೆಯನ್ನು ಸೇರ್ಪಡೆಯಾಗುವುದಕ್ಕೆ ಮಾಜಿ ರಕ್ಷಣಾ ಸಚಿವ ಮನೋಹರ್ ಪರೀಕರ್ ಹೆಚ್ಚಿನ ಮುತುವರ್ಜಿಯನ್ನು ವಹಿಸಿದ್ದರು.
ಅನಾರೋಗ್ಯದ ನಡುವೆಯೂ ರಫೇಲ್ ಸಂಬಂಧಿತ ಚರ್ಚೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಯುದ್ಧ ವಿಮಾನಗಳು ಶೀಘ್ರವಾಗಿ ಭಾರತೀಯ ವಾಯುಪಡೆಯನ್ನು ಸೇರಿಸುವ ಪ್ರಯತ್ನವನ್ನು ನಡೆಸಿದ್ದರು. ಲಡಾಕ್ ಗಡಿಯಲ್ಲಿ ಭಾರತ ಮತ್ತು ಚೀನಾ ನಡುವೆ ಗಡಿ ವಿವಾದವು ತಾರಕಕ್ಕೇರುತ್ತಿರುವ ಸಂದರ್ಭದಲ್ಲಿ ಭಾರತೀಯ ವಾಯುಪಡೆಗೆ ರಫೇಲ್ ಸೇರ್ಪಡೆಗೊಂಡಿರುವುದು ಸೇನೆಗೆ ಆನೆ ಬಲ ಬಂದಂತಾಗಿದೆ ಎಂದು ವಿಶ್ಲೇಷಿಸಲಾಗಿದೆ.