Connect with us

    KARNATAKA

    ನೀತಿ ಸಂಹಿತೆ ಜಾರಿಯಾದ ಬಳಿಕ ₹ 147.46 ಕೋಟಿ ನಗದು ವಶ‍ಪಡಿಸಿಕೊಂಡ ಚುನಾವಣಾ ಆಯೋಗ

    ಬೆಂಗಳೂರು, ಮೇ 09: ಮಾರ್ಚ್‌ 29 ರಂದು ಜಾರಿಯಾದ ಚುನಾವಣೆ ನೀತಿ ಸಂಹಿತೆ ಆರಂಭವಾದ ಬಳಿಕ ₹ 147.46 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ. 2018ರ ಚುನಾವಣೆಗೆ ಹೋಲಿಕೆ ಮಾಡಿದರೆ ಇದು ಶೇ 100 ರಷ್ಟು ಹೆಚ್ಚು.

    ಸುಮಾರು ₹ 100 ಕೋಟಿ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ವಶಪಡಿಸಿಕೊಳ್ಳಲಾಗಿದ್ದು, ₹ 24.22 ಕೋಟಿ ಮೌಲ್ಯದಷ್ಟು ಮತದಾರರಿಗೆ ವಿತರಿಸಲು ಸೀರೆ, ಕುಕ್ಕರ್‌ ಹಾಗೂ ಇನ್ನಿತರ ವಸ್ತುಗಳನ್ನು ಜ‍ಪ್ತಿಮಾಡಲಾಗಿದೆ.

    ಮದ್ಯ ಜಪ್ತಿ ಪ್ರಮಾಣ ಶೇ 230 ಏರಿಕೆ
    2018ಕ್ಕೆ ಹೋಲಿಕೆ ಮಾಡಿದರೆ ಮದ್ಯ ಜಪ್ತಿ ಪ್ರಮಾಣ ಶೇ 230ರಷ್ಟು ಏರಿಕೆಯಾಗಿದ್ದು, ₹ 83.66 ಕೋಟಿ ಮೌಲ್ಯದ  22.7 ಲಕ್ಷ ಲೀಟರ್‌ ಮದ್ಯ ವಶಪಡಿಸಿಕೊಳ್ಳಲಾಗಿದೆ. 2018ರಲ್ಲಿ 5.42 ಲಕ್ಷ ಲೀಟರ್‌ನಷ್ಟು ಮದ್ಯ ಪಶಪಡಿಸಿಕೊಳ್ಳಲಾಗಿತ್ತು.
    1,954 ಕೆಜಿ ಡ್ರಗ್ಸ್‌ ವಶ
    ಈ ಬಾರಿ ಡ್ರಗ್ಸ್‌ ಹಾಗೂ ಮಾದಕವಸ್ತು ಜಪ್ತಿ ಕೂಡ ಗಣನೀಯ ಏರಿಕೆ ಕಂಡಿದೆ. ಸುಮಾರು ₹ 23.67 ಕೋಟಿ ಮೌಲ್ಯದ 1,954 ಕೆಜಿ ಡ್ರಗ್ಸ್‌ ಹಾಗೂ ಮಾದಕವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. 2018ರಲ್ಲಿ  ₹ 40 ಲಕ್ಷ ಮೌಲ್ಯದ 127 ಕೆ.ಜಿ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು.
    Share Information
    Advertisement
    Click to comment

    You must be logged in to post a comment Login

    Leave a Reply