Connect with us

    LATEST NEWS

    ಪಂಚರಾಜ್ಯ ಚುನಾವಣಾ ಎಫೆಕ್ಟ್ ..ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ತಾತ್ಕಾಲಿಕ ಸ್ಥಗಿತ

    ಹೊಸದಿಲ್ಲಿ ಮಾರ್ಚ್ 20: ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಕೇಂದ್ರ ಸರಕಾರದ ಕೈಯಲ್ಲಿ ಇಲ್ಲ ಎಂದು ಹೇಳಿದ್ದ ಕೇಂದ್ರ ಸರಕಾರ ಈಗ ಪಂಚರಾಜ್ಯ ಚುನಾವಣೆ ಘೋಷಣೆ ಬೆನ್ನಲ್ಲೆ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆಯನ್ನು ಹಠಾತ್ತಾಗಿ ನಿಲ್ಲಿಸಿದೆ.

    ಕಳೆದ 20 ದಿನಗಳಿಂದ ದೇಶದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಒಂದೊಮ್ಮೆ ಕಚ್ಚಾ ತೈಲ ದರಕ್ಕೆ ಅನುಗುಣವಾಗಿ ಪೆಟ್ರೋಲ್‌-ಡೀಸೆಲ್‌ ದರ ಏರಿಕೆಯಾಗಿದ್ದಲ್ಲಿ ಈಗ ಮುಂಬಯಿಯಲ್ಲಿ ಪೆಟ್ರೋಲ್‌ ದರ 103 ರೂ. ಹಾಗೂ ಉಳಿದ ಹಲವು ನಗರಗಳಲ್ಲಿ 100 ರೂ.ಗಿಂತ ಹೆಚ್ಚಿನ ದರವಿರಬೇಕಿತ್ತು.


    ಫೆಬ್ರವರಿ 26 ರಂದು ಪಂಚ ರಾಜ್ಯ ಚುನಾವಣಾ ದಿನಾಂಕವನ್ನು ಚುನಾವಣಾ ಆಯೋಗ ಘೋಷಣೆ ಮಾಡಿತ್ತು. ಇದಾದ ಮರುದಿನ ಅಂದರೆ ಫೆಬ್ರವರಿ 27ರಿಂದ ಪೆಟ್ರೋಲ್‌-ಡೀಸೆಲ್‌ ದರಗಳ ಬದಲಾವಣೆಯನ್ನು ಸ್ಥಗಿತಗೊಳಿಸಲಾಗಿದೆ. ಆದರೆ ಇದೇ ಅವಧಿಯಲ್ಲಿ ಕಚ್ಚಾ ತೈಲ ದರ ಏರಿಕೆಯಾಗಿರುವುದನ್ನು ಗಮನಿಸಬಹುದು. ಫೆಬ್ರವರಿ 26ರಂದು ಬ್ಯಾರಲ್‌ ಕಚ್ಚಾ ತೈಲ ದರ 64.68 ಡಾಲರ್‌ ಇತ್ತು. ಬುಧವಾರ ಇದೇ ದರ 66.82 ಡಾಲರ್‌ಗೆ ಏರಿಕೆಯಾಗಿದೆ. ಮಧ್ಯದಲ್ಲೊಮ್ಮೆ 68.42 ಡಾಲರ್‌ ಕೂಡ ಮುಟ್ಟಿತ್ತು. ಇದೇ ವೇಳೆ ಡಾಲರ್‌ ಎದುರು ರೂಪಾಯಿ ಕೂಡ ದುರ್ಬಲವಾಗಿದೆ. ಹೇಗೇ ನೋಡಿದರೂ ಪೆಟ್ರೋಲ್‌-ಡೀಸೆಲ್‌ ದರ ಏರಿಕೆಯಾಗಲೇಬೇಕಿತ್ತು. ಆದರೆ ಏರಿಕೆಯಾಗಿಲ್ಲ!

    ಆದರೆ ಸರಕಾರಿ ಸ್ವಾಮ್ಯದ ತೈಲ ಕಂಪನಿಗಳು ದರ ಏರಿಕೆ ಮಾಡಿಲ್ಲ. ಇದರಿಂದ ಪ್ರತಿ ಲೀಟರ್‌ ಪೆಟ್ರೋಲ್‌ನಲ್ಲಿ ಕಂಪನಿಗಳಿಗೆ 4 ರೂ. ಹಾಗೂ ಡೀಸೆಲ್‌ನಲ್ಲಿ 2 ರೂ. ನಷ್ಟವಾಗುತ್ತಿದೆ ಎಂದು ತೈಲ ಬೆಲೆ ತಜ್ಞರು ಅಂದಾಜಿಸಿದ್ದಾರೆ.

    ಈ ರೀತಿ ದರ ಏರಿಕೆಗೆ ಬ್ರೇಕ್‌ ಹಾಕುತ್ತಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆ ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆಯೂ 2018ರಲ್ಲಿ ಏಪ್ರಿಲ್‌ 24 ರಿಂದ ಮೇ 13ರವರೆಗೆ ತೈಲ ದರ ಏರಿಕೆ ಮಾಡದಂತೆ ಕಂಪನಿಗಳಿಗೆ ಕೇಂದ್ರ ಸರಕಾರ ಅನೌಪಚಾರಿಕ ಸೂಚನೆ ನೀಡಿತ್ತು ಎಂಬ ಮಾಹಿತಿ ಇದೆ. ಒಟ್ಟಿನಲ್ಲಿ ಚುನಾವಣೆ ಕಾರಣಕ್ಕೆ ಪೆಟ್ರೋಲ್‌-ಡೀಸೆಲ್‌ ದರ ಏರಿಕೆಯಾಗುತ್ತಿಲ್ಲ. ಆದರೆ ಮುಂದೇನು ಎಂಬುದು ಮಾತ್ರ ಗೊತ್ತಿಲ್ಲ.

    Share Information
    Advertisement
    Click to comment

    Leave a Reply

    Your email address will not be published. Required fields are marked *