BANTWAL
ಕೇರಳದಿಂದ ಶೌಚಾಲಯದ ತ್ಯಾಜ್ಯ ತಂದು ವಿಟ್ಲದಲ್ಲಿ ಸುರಿದ ಚಾಲಕ- ವಾಹನ ಹಿಡಿದು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು

ಬಂಟ್ವಾಳ, ಆಗಸ್ಟ್ 17: ಕೇರಳದಿಂದ ಶೌಚಾಲಯದ ತ್ಯಾಜ್ಯ ತಂದು ಕರ್ನಾಟಕದಲ್ಲಿ ಸುರಿಯುವ ಷಡ್ಯಂತ್ರ ಕಲ್ಲಡ್ಕ- ಕಾಞಂಗಾಡ್ ಹೆದ್ದಾರಿಯ ಉಕ್ಕುಡದಲ್ಲಿ ಬೆಳಕಿಗೆ ಬಂದಿದೆ.
ಕೆಲ ದಿನಗಳ ಹಿಂದೆ ಶೌಚಾಲಯದ ತ್ಯಾಜ್ಯವನ್ನ ವಿಟ್ಲ ಪರಿಸರದಲ್ಲಿ ಸುರಿಯಲಾಗಿತ್ತು, ವಿಟ್ಲದ ಕೇಪು ಚೆಲ್ಲಡ್ಕದಲ್ಲಿ ಪರಿಸರದಲ್ಲಿ ಸುರಿದು ರಾದ್ಧಾಂತಕ್ಕೆ ಕಾರಣವಾಗಿತ್ತು. ಈ ವೇಳೆ ಸಾರ್ವಜನಿಕರು ವಾಹನವನ್ನ ಅಡ್ಡಗಟ್ಟಿ ಪೊಲೀಸರಿಗೆ ಒಪ್ಪಿಸಿದ್ದರು.

ಕೆಲವೇ ದಿನಗಳಲ್ಲಿ ವಾಹನವನ್ನು ಬಿಡಿಸಿಕೊಂಡು ಬಂದು ಇದೀಗ ಮತ್ತೆ ದುಷ್ಕೃತ್ಯ ಎಸೆಯಲಾಗಿತ್ತಿದೆ. ಇದೀಗ ಅದೇ ಟ್ಯಾಂಕರ್ ಚಾಲಕ ಉಕ್ಕುಡದಲ್ಲಿ ತ್ಯಾಜ್ಯವನ್ನು ಸುರಿಯಲು ಯತ್ನ ಮಾಡಿದ್ದಾನೆ. ಸಾರಡ್ಕ ಚೆಕ್ ಪೋಸ್ಟ್ ಬಳಿ ತಲುಪುವಾಗ ವಾಹನವನ್ನ ಬೆನ್ನಟ್ಟಿದ ಸಾರ್ವಜನಿಕರು, ವಾಹನವನ್ನ ತಡೆದ ಸಾರ್ವಜನಿಕರು ಚಾಲಕನನ್ನು ವಿಟ್ಲ ಪೊಲೀಸರಿಗೆ ಒಪ್ಪಿಸಿದ್ದಾರೆ.
ಶೌಚಾಲಯದ ತ್ಯಾಜ್ಯ ರಸ್ತೆಯುದ್ದಕ್ಕೂ ಸೋರಿಕೆಯಾಗಿ ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.