Connect with us

    KARNATAKA

    ಬಯಲು ಸೀಮೆ ಜನತೆಯ ನೀರ ದಾಹ ನೀಗಿಸುವ ‘ಎತ್ತಿನಹೊಳೆ’ ಯೋಜನೆ ನೀರು ಬಿಡುಗಡೆಗೆ ಮುಹೂರ್ತ ಫಿಕ್ಸ್..!

    ಬೆಂಗಳೂರು : ಕುಡಿಯಲು ನೀರಿಲ್ಲದೆ ತತ್ತರಿಸಿದ ಬಯಲು ಸೀಮೆಯ ಜನತೆಯ ದಶಕಗಳ ಕನಸನ್ನು ಸರ್ಕಾರ ಕೊನೆಗೂ ನನಸು ಮಾಡಿದೆ. ಬಹು ನಿರೀಕ್ಷೆಯ ಎತ್ತಿನ ಹೊಳೆ ಯೋಜನೆಯ (Ettinahole Project) ನೀರು ಬಿಡುಗಡೆಗೆ ಮೂಹೂರ್ತ ಫಿಕ್ಸ್ ಆಗಿದ್ದು  ಗೌರಿ ಹಬ್ಬದ ದಿನ ಸಿಎಂ ಗಂಗೆ ಪೂಜೆ ಮಾಡಿ ಎತ್ತಿನಹೊಳೆ ಯೋಜನೆ  ನೀರು ಬಿಡುಗಡೆ ಮಾಡಲಿದ್ದಾರೆ.

    ಬೆಂಗಳೂರಿನಲ್ಲಿ  ಜಲಸಂಪನ್ಮೂಲ ಸಚಿವ  ಡಿಸಿಎಂ ಡಿ.ಕೆ.ಶಿವಕುಮಾರ್  ಈ ವಿಷಯವನ್ನು ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು  7 ಕಡೆ ಎತ್ತಿನಹೊಳೆ ಯೋಜನೆ ಪ್ರಾರಂಭ ಮಾಡಲಾಗುತ್ತೆ. ಗೌರಿ ಹಬ್ಬದ ದಿನ ಗಂಗೆಗೆ 12 ಗಂಟೆ 5 ನಿಮಿಷಕ್ಕೆ ಸಿಎಂ (CM Siddaramaiah) ಪೂಜೆ ನೆರವೇರಿಸಲಿದ್ದಾರೆ. ಎಲ್ಲ ಸಚಿವರು, ಶಾಸಕರು ಭಾಗವಹಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು. ಯೋಜನೆಗೆ ಬಹಳ ಜನ ಅಡಚಣೆ ಮಾಡುತ್ತಿದ್ದರು. ಕೆಲವರು ನೀರು ಹೋಗುವುದೆ ಇಲ್ಲ ಅಂತಾರೆ. ಎಲ್ಲ ಕಡೆ ಮಾತನಾಡಿ ಸರಿ ಮಾಡಿದ್ದೇವೆ. ಎಲ್ಲರೂ ಸಹಕಾರ ಕೊಟ್ಟಿದ್ದಾರೆ. ಈಗಾಗಲೇ ಟ್ರಯಲ್ ರನ್ ಕೂಡ ಮಾಡಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply