DAKSHINA KANNADA
ಕರಾವಳಿಯಲ್ಲಿ ಹರಡುತ್ತಿರುವ ಕಟ್ಟರ್ ಸಲಾಫಿ ದಮ್ಮಾಜ್ ಸಿದ್ದಾಂತ

ಕರಾವಳಿಯಲ್ಲಿ ಹರಡುತ್ತಿರುವ ಕಟ್ಟರ್ ಸಲಾಫಿ ದಮ್ಮಾಜ್ ಸಿದ್ದಾಂತ
ಮಂಗಳೂರು ಅಕ್ಟೋಬರ್ 7: ಕರಾವಳಿಗೆ ತೀವ್ರವಾದಿ ಕಟ್ಟರ್ ಇಸ್ಲಾಮಿಕ್ ಸಿದ್ದಾಂತ ಕಾಲಿರಿಸಿದೆ. ಇಸ್ಲಾಂನ ಕಟ್ಟರ್ ಸಿದ್ದಾಂತವಾದ ಸಲಾಫಿ ದಮ್ಮಾಜ್ ಎಂಬ ತೀವ್ರವಾದಿ ಸಿದ್ದಾಂತವನ್ನು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪ್ರಚಾರ ಪಡಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾದಿ ಸಿದ್ದಾಂತವನ್ನು ಹರಿಬಿಡಲಾಗುತ್ತಿದೆ. ಯುವ ಮನಸ್ಸುಗಳನ್ನು ಧಾರ್ಮಿಕವಾಗಿ ಬ್ರೈನ್ ವಾಷ್ ಮಾಡುವ ಪ್ರಯತ್ನ ಆರಂಭಗೊಂಡಿದೆ.
ಈ ತೀವ್ರವಾದಿ ಸಿದ್ದಾಂತದ ವಿರುದ್ದ ಇತ್ತೀಚೆಗೆ ಸಲಾಫಿ ಮುಖಂಡ ಇಸ್ಮಾಯಿಲ್ ಶಾಫಿ ಧ್ವನಿ ಎತ್ತಿದ್ದರು, ಧ್ವನಿ ಆಧಾರಿತ ಸಂದೇಶ ರವಾನಿಸಿ ಇಂತಹ ಕಟ್ಟರ್ ಸಿದ್ದಾಂತ ಹರಡುವ ಯುವಕರ ತಂಡದಿಂದ ದೂರ ಇರುವಂತೆ ಯುವಕರಿಗೆ ಕರೆ ನೀಡಿದ್ದರು. ಆದರೆ ಅವರ ಧ್ವನಿ ಮುದ್ರಿತ ಸಂದೇಶ ಎಡವಟ್ಟಿನಿಂದ ಐಸಿಸಿ ರಾದ್ದಾಂತ ಸೃಷ್ಠಿಯಾಗಿತ್ತು.

ಸೋಷಿಯಲ್ ಮೀಡಿಯಾದಲ್ಲಿ ತೀವ್ರವಾದಿ ಇಸ್ಲಾಮಿಕ್ ಸಿದ್ದಾಂತ ಪ್ರಚಾರ
ಆದರೆ ಇಸ್ಮಾಯಿಲ್ ಶಾಫಿ ಅವರ ವಾದಕ್ಕೆ ಪುಷ್ಠಿ ಸಿಕ್ಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡಲಾಗುತ್ತಿರುವ ತೀವ್ರವಾದಿ ಇಸ್ಲಾಮಿಕ್ ದಮ್ಮಾಜ್ ಸಿದ್ದಾಂತದ ಸಂದೇಶಗಳು ಮೊಬೈಲ್ ಗಳಲ್ಲಿ ಹರಿದಾಡುತ್ತಿದೆ. ಈ ಸಂದೇಶಗಳ ಪ್ರಕಾರ
” ಇಸ್ಲಾಂ ಧರ್ಮಿಯರು ಸಿನಿಮಾ ನೋಡುವುದು ಹಾಗೂ ಸಂಗೀತ ಕೇಳುವುದು ಎರಡು ಹರಾಮ್ , ಸಿನಿಮಾ ನೋಡುತ್ತಿರುವಾಗ, ಕಾರಿನಲ್ಲಿ ಸಂಗೀತ ಕೇಳುತ್ತಾ ಅಪಘಾತಕ್ಕೀಡಾಗಿ ಸಾವನಪ್ಪಿದ್ದರೆ ಅಂತಹವರಿಗೆ ಅಲ್ಲಾಹ ನ ನೆನಪಾಗಬಹುದೇ , ಸಿನೆಮಾ ಹಾಗೂ ಮ್ಯೂಜಿಕ್ ಕೇಳುತ್ತಾ ಮರಣಹೊಂದುವ ವ್ಯಕ್ತಿ ಶಹದತ್ ಹೇಳಿ ಮರಣ ಹೊಂದಲು ಸಾದ್ಯವೇ ” ಎಂಬ ಪ್ರಶ್ನೆ ಇಟ್ಟು ಯುವಕರನ್ನು ಬೆದರಿಸಲಾಗುತ್ತಿದೆ.
ಈ ದಮ್ಮಾಜ್ ಸಿದ್ದಾಂತದ ಪ್ರಕಾರ ಸಿನೆಮಾ ಸಂಗೀತ ಕೇಳುವುದು ಇಸ್ಲಾಮಿಗೆ ವಿರುದ್ದವಾದುದು, ಅಲ್ಲಾಹ ನ ಕೋಪಕ್ಕೆ ಗುರಿಯಾಗಿ ಶಿಕ್ಷೆಗೆ ಒಳಪಡಬಕಾಗುತ್ತದೆ ಎಂದು ಯುವಕರನ್ನು ವ್ಯವಸ್ಥಿತವಾಗಿ ಬ್ರೈನ್ ವಾಶ್ ಮಾಡಲಾಗುತ್ತಿದೆ. ಮುಸ್ಲಿಮರಾಗಿ ಹುಟ್ಟಿದ್ದು ನಾವೆಲ್ಲ ಭಾಗ್ಯಶಾಲಿಗಳು, ಅಮುಸ್ಲಿಮರಾಗಿ ಹುಟ್ಟಿದವರು ಕಾಫಿರ್ ಗಳು ಅವರಿಗೆ ನರಕ ಪ್ರಾಪ್ತಿಯಾಗುತ್ತದೆ ಎಂದು ಭೋದಿಸಲಾಗುತ್ತಿದೆ. ಮಹಿಳೆಯರು ಇಡೀ ದೇಹವನ್ನು ಸಂಪೂರ್ಣ ಮುಚ್ಚುವಂತೆ ವಸ್ತ್ರ ಧರಿಸಬೇಕು, ಮಹಿಳೆಯರು ಮನೆಯಲ್ಲಿ ಗಂಡನ ಹೊರತು ಯಾರ ಜೊತೆಗೂ ಮಾತನಾಡದಂತೆ ಗೃಹ ಬಧನದಲ್ಲಿಡಬೇಕು , ಮುಸ್ಲಿಂ ಪುರುಷರು ಇತರ ಧರ್ಮದವರ ಜೊತೆಗೆ ಮಾತನಾಡುವುದು ತಪ್ಪು, ಹಿಂದೂಗಳು ಕಾಫಿರ್ ಗಳು ಅವರೊಂದಿಗೆ ನಗುವುದು ಹರಾಮ್ ಎಂದು ಹಳಿ ಯುವಕರನ್ನು ಕಟ್ಟರ್ ಇಸ್ಲಾಮಿಕ್ ಸಿದ್ದಾಂತ ದತ್ತ ಸೆಳೆಯಲಾಗುತ್ತಿದೆ.
ಸಿದ್ದಾಂತಕ್ಕೆ ಬಲಿಯಾಗಿ ದಮ್ಮಾಜ್ ಗೆ ತೆರಳಿದ ಸುರತ್ಕಲ್ ಯುವಕ
ಈಗಾಗಲೇ ಹಲವಾರು ಯುವಕರ ತಂಡ ಈ ಸಿದ್ದಾಂತವನ್ನು ಪ್ರಚಾರ ಪಡಿಸುತಿದ್ದು, ಈ ಸಿದ್ದಾಂತದ ಪ್ರಚಾರಕ್ಕೆ ನೂರಾರು ಯುವಕರು ಬಲಿಯಾಗುತ್ತಿದ್ದಾರೆ. ಒಂದು ಮಾಹಿತಿಯ ಪ್ರಕಾರ ಸುರತ್ಕಲ್ ನ ಯುವಕನೊಬ್ಬ ಈ ಸಿದ್ದಾಂತಕ್ಕೆ ಬಲಿಯಾಗಿ ಕೊಲ್ಲಿ ರಾಷ್ಟ್ರದಲ್ಲಿರುವ ದಮ್ಮಾಜ್ ಗೆ ಹೊರಟು ಹೋಗಿದ್ದಾನೆ. ತಂದ ನಂತರ ಆತನ ಸುಳಿವಿಲ್ಲ.
ಈ ಸಿದ್ದಾಂತ ಇತ್ತೀಚೆಗೆ ಹುಟ್ಟುಕೊಂಡಿದ್ದಲ್ಲ, ಆದರೆ ಇತ್ತೀಚಿನ ದಿನಗಳಲ್ಲಿ ಭಾರಿ ಪ್ರಮಾಣಧಲ್ಲಿ ಪ್ರಚಾರ ಮಾಡಲಾಗುತ್ತಿದೆ. ಕೆಲವು ತಿಂಗಳುಗಳ ಹಿಂದೆ ಕೇರಳದ 21 ಮಂದಿ ಐಸಿಸ್ ಗೆ ಸೇರಿದ್ದರು ಎಂಬ ಸ್ಪೋಟಕ ಮಾಹಿತಿ ಬಹಿರಂಗಗೊಂಡು ದೇಶದಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಆದರೆ ಈ 21 ಮಂದಿ ಈ ದಮ್ಮಾಜ್ ಸಿದ್ದಾಂತದ ಪ್ರಭಾವಕ್ಕೆ ಗುರಿಯಾಗಿದ್ದರು ಎನ್ನುವುದು ರಹಸ್ಯವಾಗಿಯೇ ಉಳಿದಿತ್ತು.
ಈ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಡಿಸಲಾಗುತ್ತಿರುವ ಈ ಕಟ್ಟರ್ ಇಸ್ಲಾಮಿಕ್ ಸಿದ್ದಾಂತದ ಕುರಿತು ಎಚ್ಚರವಹಿಸಬೇಕಾಗಿದೆ. ಈ ಸಿದ್ದಾಂತಗಳನ್ನು ಪ್ರಚಾರಪಡಿಸುತ್ತಿರುವ ಗುಂಪುಗಳಿಗೆ ಕಡಿವಾಣ ಹಾಕುವ ಅವಶ್ಯಕತೆ ಇದೆ.