LATEST NEWS
ಸುಳ್ಯದಲ್ಲಿ ಗಂಡು ಮರಿ ಆನೆಯ ಶವ ಪತ್ತೆ

ಸುಳ್ಯದಲ್ಲಿ ಗಂಡು ಮರಿ ಆನೆಯ ಶವ ಪತ್ತೆ
ಮಂಗಳೂರು ಫೆಬ್ರವರಿ 29: ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಲ್ಮಕಾರು ಎಂಬಲ್ಲಿ ಗಂಡು ಮರಿಯಾನೆಯ ಶವ ಪತ್ತೆಯಾಗಿದೆ. ಕೊಳೆತ ರೀತಿಯಲ್ಲಿ ಪತ್ತೆಯಾದ ಆನೆ ಸಾವಿಗೆ ಕಾರಣ ಏನು ಎನ್ನುವ ಬಗ್ಗೆ ಸಂಶಯಗಳು ಮೂಡಲಾರಂಭಿಸಿದೆ.
ಮರಿ ಆನೆಯ ಶವ ಕಲ್ಮಕಾರಿನ ಕೋಪಡ್ಕದ ಸತೀಶ್ ಗೌಡ ಎನ್ನುವವರ ತೋಟದಲ್ಲಿ ಪತ್ತೆಯಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಆನೆಯ ಶವದ ಮಹಜರನ್ನೂ ನಡೆಸಲಾಗಿದ್ದು, ಆನೆ ಸಾವನ್ನಪ್ಪಿ ನಾಲ್ಕು ದಿನಗಳಾಗಿರಬಹುದು ಎಂದು ಅಂದಾಜಿಸಲಾಗಿದೆ.

ಕೃಷಿ ತೋಟದಲ್ಲಿ ಆನೆಯ ಶವವಿದ್ದರೂ ಸ್ಥಳದ ಮಾಲಕನಿಗೆ ಈ ವಿಚಾರ ತಿಳಿಯದಿರುವುದು ಆನೆ ಸಾವಿನ ಬಗ್ಗೆ ಸಂಶಯಕ್ಕೂ ಎಡ ಮಾಡಿಕೊಟ್ಟಿದೆ