Connect with us

    LATEST NEWS

    ಅಕ್ರಮ ನಕಲಿ ಅಂಕಪಟ್ಟಿ ಜಾಲ ಪತ್ತೆ ಹಚ್ಚಿದ ಸಿಸಿಬಿ ಪೋಲಿಸರು

    ಅಕ್ರಮ ನಕಲಿ ಅಂಕಪಟ್ಟಿ ಜಾಲ ಪತ್ತೆ ಹಚ್ಚಿದ ಸಿಸಿಬಿ ಪೋಲಿಸರು

    ಓರ್ವ ಆರೋಪಿಯನ್ನು ಬಂಧಿಸಿದ ಸಿಸಿಬಿ

    ಮಂಗಳೂರು, ಮಾರ್ಚ್ 14 : ಮಂಗಳೂರು ನಗರ ತೊಕ್ಕೊಟ್ಟು ಟಿ ಸಿ ರಸ್ತೆಯಲ್ಲಿರುವ Mangalore Institute of Technological Science(MITS) ಎಂಬ ಹೆಸರಿನ ಸಂಸ್ಥೆಯಲ್ಲಿ ನಕಲಿ ಅಂಕಪಟ್ಟಿಯನ್ನು ತಯಾರಿಸಿ ಹಣಕ್ಕಾಗಿ ಮಾರಾಟ ಮಾಡುತ್ತಿದ್ದವನನ್ನು ಪೋಲಿಸರು ಬಂಧಿಸಿದ್ದಾರೆ.

    ಮಂಗಳೂರು ಸಿಸಿಬಿ ಪೊಲೀಸರು ಅರೋಪಿಯಾದ ಉಳ್ಳಾಲದ ಗೋಡ್ವಿನ್ ಡಿಸೋಜಾ ನನ್ನು ಬಂಧಿಸಿ ನಕಲಿ ಅಂಕಪಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ.

    ಈತ ಈ ಸಂಸ್ಥೆಯಲ್ಲಿ ನಕಲಿ ಅಂಕಪಟ್ಟಿಯನ್ನು ತಯಾರಿಸಿ ರೂ. 10,000/- ರಿಂದ 45,000/- ಹಣಕ್ಕೆ ಮಾರಾಟ ಮಾಡಿ ವಂಚಿಸುತ್ತಿದ್ದ .

    ಈತನು ಈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಈ ಸಂಸ್ಥೆಯ ಡೈರೆಕ್ಟರ್ ಅಸ್ಕಾನ್ ಶೇಖ್ ಎಂಬಾತನು ಈ ಸಂಸ್ಥೆಯನ್ನು ನಡೆಸುತ್ತಿದ್ದು,

    ಈತನು 2016 ನೇ ಇಸವಿಯಿಂದ ಸಂಸ್ಥೆಯನ್ನು ನಡೆಸುತ್ತಲೇ ಎಸ್ಎಸ್ಎಲ್ ಸಿ, ಪಿಯುಸಿ, ಡಿಗ್ರಿ, ಡಿಪ್ಲೋಮಾ ಹೀಗೆ ವಿವಿಧ ಪದವಿಯ ನಕಲಿ ಅಂಕಪಟ್ಟಿಗಳನ್ನು ತಯಾರಿಸುತ್ತಾ ರೂ. 10,000/- ರಿಂದ ರೂ. 45,000/- ಮೊತ್ತಕ್ಕೆ ಮಾರಾಟ ಮಾಡುತ್ತಿದ್ದನು.

    ಈ ಸಂಸ್ಥೆಯ ಪ್ರಿನ್ಸಿಪಾಲ್ ಅಸ್ಕಾರ್ ಶೇಖ್, ಡೈರೆಕ್ಟರ್ ಅಸ್ಕಾನ್ ಶೇಖ್ ಹಾಗೂ ಗೋಡ್ವಿನ್ ಡಿ ಸೋಜಾ ಜೊತೆಯಾಗಿ ಸೇರಿ ಈ ಸಂಸ್ಥೆಗೆ ನಕಲಿ ಅಂಕಪಟ್ಟಿಗಾಗಿ ಬರುತ್ತಿದ್ದ ವಿದ್ಯಾರ್ಥಿಗಳಿಗೆ ಹಾಗೂ ನಿರುದ್ಯೋಗಿಗಳಿಗೆ ಅವರ ಮಾಹಿತಿಯನ್ನು ಪಡೆದು ಒಂದು ವಾರದ ಒಳಗಡೆ ಅವರಿಗೆ ಬೇಕಾದ ಡಿಗ್ರಿಗಳ ಅಂಕಪಟ್ಟಿಗಳನ್ನು ತಯಾರಿಸಿ ನೀಡುತ್ತಿದ್ದನು.

    ಈ ಸಂಸ್ಥೆಯಲ್ಲಿ ಎಸ್ಎಸ್ಎಲ್ ಸಿ ಮತ್ತು ಪಿಯುಸಿ ನಕಲಿ ಸರ್ಟಿಫಿಕೇಟ್ ಗೆ ರೂ. 10,000/- ಮತ್ತು ಡಿಗ್ರಿ ಹಾಗೂ ಡಿಪ್ಲೋಮಾ ಸರ್ಟಿಫಿಕೇಟ್ ಗೆ ರೂ. 45,000/- ದರವನ್ನು ನಿಗದಿಪಡಿಸಿ ಹಣವನ್ನು ಪಡೆದುಕೊಳ್ಳುತ್ತಿದ್ದನು.

    ಆರೋಪಿಗಳು Mangalore Public School ಎಂಬ ಶಿಕ್ಷಣ ಸಂಸ್ಥೆ ಎಂಬ ನಕಲಿ ಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ SSLC ವ್ಯಾಸಂಗವನ್ನು Mangalore Public School ನಲ್ಲಿ ವ್ಯಾಸಂಗ ಮಾಡಿರುತ್ತಾರೆ ಎಂಬುದಾಗಿ ನಕಲಿ ದಾಖಲೆ ಪತ್ರಗಳನ್ನು ಸೃಷ್ಠಿಸಿ ಈ ಮೂಲಕ SSLC ಪರೀಕ್ಷೆಯ ಅಂಕ ಪಟ್ಟಿಗಳನ್ನು ತಯಾರಿಸಿ ನೀಡುತ್ತಿದ್ದರು.

    ಈ ಸಂಸ್ಥೆಯಿಂದ ಸುಮಾರು 150 ಕ್ಕೂ ಹೆಚ್ಚು ಮಂದಿ SSLC/PUC/DEGREE/DIPLOMA/B Tech ಪದವಿಗಳ ನಕಲಿ ಅಂಕಪಟ್ಟಿಗಳನ್ನು ಪಡೆದುಕೊಂಡಿರುವ ಬಗ್ಗೆ ಮಾಹಿತಿಯಿರುತ್ತದೆ.

    Mangalore Institute of Technological Science(MITS) ಎಂಬ ಸಂಸ್ಥೆಯನ್ನು 2016 ನೇ ಜೂನ್ ತಿಂಗಳಲ್ಲಿ ಪ್ರಾರಂಬಿಸಿದ್ದು,

    ಇದೇ ಸಂಸ್ಥೆಯಲ್ಲಿ 2013 ನೇ ಇಸವಿಯಲ್ಲಿ ವ್ಯಾಸಂಗ ಮಾಡಿರುತ್ತಾರೆ ಎಂಬುದಾಗಿ ನಕಲಿ ಸರ್ಟಿಫೀಕೇಟ್ ಗಳನ್ನು ತಯಾರಿಸಿ ಹಣವನ್ನು ಪಡೆದು ಹಲವಾರು ಅಭ್ಯರ್ಥಿಗಳಿಗೆ ನೀಡಿರುತ್ತಾರೆ.

    ಆರೋಪಿ ಗೋಡ್ವಿನ್ ಡಿ ಸೋಜಾ ವಶದಿಂದ Mangalore Institute of Technological Science(MITS) ಶಿಕ್ಷಣ ಸಂಸ್ಥೆಯಿಂದ ನೀಡಿದೆನ್ನಲಾದ ನಕಲಿ ಸರ್ಟಿಫಿಕೇಟ್ ಗಳು, ಲ್ಯಾಪ್ ಟಾಪ್, 3 ನಕಲಿ ಸೀಲುಗಳು, ನಕಲಿ ಅಂಕಪಟ್ಟಿಗಳನ್ನು ತಯಾರಿಸುವ ಪ್ರಿಂಟರ್, ನಕಲಿ ಅಂಕಪಟ್ಟಿಗಳನ್ನು ತಯಾರಿಸುವ ಪೇಪರ್, ಐಫೋನ್ ಮೊಬೈಲ್ ಫೋನ್ ನ್ನು ವಶಪಡಿಸಿಕೊಳ್ಳಲಾಗಿದೆ.

    ಈ ಶಿಕ್ಷಣ ಸಂಸ್ಥೆಯ ಡೈರೆಕ್ಟರ್ ಅಸ್ಕಾನ್ ಶೇಖ್ ಎಂಬಾತನು ಈ ಹಿಂದೆ 2016 ನೇ ಇಸವಿಯಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಪಂಪ್ ವೆಲ್ ಬಳಿ Mangalore Institute of Management Engineering ಎಂಬ ಸಂಸ್ಥೆಯಲ್ಲಿ Eduexcel Consultancy ಎಂಬ ಸಂಸ್ಥೆಯನ್ನು ತೆರೆದು ಇದೇ ರೀತಿ ನಕಲಿ ಅಂಕಪಟ್ಟಿಗಳನ್ನು ತಯಾರಿಸುವ ಕೃತ್ಯವನ್ನು ನಡೆಸುತ್ತಿದ್ದ ಸಮಯ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ನಕಲಿ ಅಂಕಪಟ್ಟಿಗಳನ್ನು ವಶಪಡಿಸಿಕೊಂಡು ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿತ್ತು.

    Share Information
    Advertisement
    Click to comment

    You must be logged in to post a comment Login

    Leave a Reply