Connect with us

    LATEST NEWS

    ಅಂಬಾಲ ವಾಯುನೆಲೆ ತಲುಪಿದ ಲೋಹದ ಹಕ್ಕಿಗಳು….

    ಅಂಬಾಲ, ಜುಲೈ 29: ಭಾರತೀಯ ವಾಯುಸೇನೆಗೆ ಆನೆ ಬಲವನ್ನು ತರುವ ರಫೇಲ್ ಯುದ್ಧ ವಿಮಾನಗಳು ಹರಿಯಾಣದ ಅಂಬಾಲ ವಾಯುನೆಲೆಯನ್ನು ತಲುಪಿದೆ. 7000 ಕಿಲೋ ಮೀಟರ್ ದೂರದ ಪ್ರಾನ್ಸ್ ನಿಂದ ಆಗಮಿಸಿದ ಮೊದಲ ಹಂತದ 5 ರಫೇಲ್ ಯುದ್ಧ ವಿಮಾನಗಳನ್ನು ಸ್ವೀಕರಿಸಲು ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಆರ್.ಕೆ. ಬುಧೋರಿಯಾ ಸೇರಿದಂತೆ ವಾಯಸೇನೆಯ ಹಿರಿಯ ಅಧಿಕಾರಿಗಳು ಅಂಬಾಲ ವಾಯುನೆಲೆಯಲ್ಲಿ ಉಪಸ್ಥಿತರಿದ್ದರು.

    ಭಾರತೀಯ ವಾಯುನೆಲೆಯನ್ನು ಸಮೀಪಿಸುತ್ತಿದ್ದಂತೆ ವಾಯಸೇನೆಯ ಎರಡು ಸುಖೋಯ್- 30 ಯುದ್ಧ ವಿಮಾನಗಳು ರಫೇಲ್ ವಿಮಾನಗಳನ್ನು ವಾಯು ಮಾರ್ಗದಲ್ಲೇ ಬರಮಾಡಿಕೊಂಡಿತ್ತು. ಸುಖೋಯ್-30 ವಿಮಾನಗಳ ರಕ್ಷಣೆಯಲ್ಲಿ ರಫೇಲ್ ಯುದ್ಧ ವಿಮಾನಗಳು ಹರಿಯಾಣದ ಅಂಬಾಲ ವಾಯುನೆಲೆಯನ್ನು ತಲುಪಿದೆ. ಈ ಯುದ್ಧ ವಿಮಾನಗಳನ್ನು ವಾಯುಸೇನೆಗೆ ಅಧಿಕೃತವಾಗಿ ಸೇರ್ಪಡೆಗೊಳಿಸುವ ಪ್ರಕ್ರಿಯೆ ಇನ್ನಷ್ಟೇ ನಡೆಯಬೇಕಿದೆ.

    Share Information
    Advertisement
    Click to comment

    You must be logged in to post a comment Login

    Leave a Reply