Connect with us

LATEST NEWS

ಟೆಕ್ಸಾಸ್ – ಪ್ರಾಥಮಿಕ ಶಾಲೆಯಲ್ಲಿ ಗುಂಡಿನ ದಾಳಿ 18 ಮಕ್ಕಳು ಸೇರಿದಂತೆ 21 ಮಂದಿ ಸಾವು…!!

ಟೆಕ್ಸಾಸ್ ಮೇ 25: ಅಮೇರಿಕಾದ ಟೆಕ್ಸಾಸ್ ನಲ್ಲಿ ನಡೆದ ಭೀಕರ ಗುಂಡಿನ ದಾಳಿಗೆ ಪ್ರಾಥಮಿಕ ಶಾಲೆಯಲ್ಲಿದ್ದ 18 ಮಕ್ಕಳು ಸೇರಿದಂತೆ 21 ಮಂದಿ ಸಾವನಪ್ಪಿದ್ದಾರೆ.


ಮೆರಿಕಾದ ಟೆಕ್ಸಾಸ್‌ ನಗರದಲ್ಲಿದ್ದ ಪ್ರಾಥಮಿಕ ಶಾಲೆಯೊಂದಕ್ಕೆ ನುಗ್ಗಿದ 18ರ ಹರೆಯದ ಯುವಕ ಸಾಲ್ವಡೋರ್ ರಾಮೊಸ್​ ಎಂಬಾತ ಮನಬಂದಂತೆ ಗುಂಡು ಹಾರಿಸಿ 21 ಮಂದಿಯನ್ನು ಹತ್ಯೆ ಮಾಡಿದ್ದಾನೆ. ಕೊನೆಗೆ ದಾಳಿ ನಡೆಸಿದ ಈತನನ್ನು ಪೊಲೀಸರು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.


ಅಮೇರಿಕಾದಲ್ಲಿ ಇತ್ತೀಚೆಗೆ, ನ್ಯೂಯಾರ್ಕ್​ನ ಬಫಲೊ ನಗರದ ಸೂಪರ್‌ ಮಾರ್ಕೆಟ್‌ನಲ್ಲಿ ಬಂದೂಕುಧಾರಿಯೊಬ್ಬ ಗುಂಡು ಹಾರಿಸಿದ ಪರಿಣಾಮ 10 ಮಂದಿ ಸಾವನ್ನಪ್ಪಿದ್ದರು. ಎರಡು ವಾರಗಳ ನಂತರ ಮತ್ತೆ ಈ ಘಟನೆ ನಡೆದಿದೆ. ಆ ಘಟನೆಯನ್ನು ‘ಜನಾಂಗೀಯ ಪ್ರೇರಿತ’ ಸಾಮೂಹಿಕ ಗುಂಡಿನ ದಾಳಿ ಎಂದು ಹೇಳಲಾಗಿತ್ತು.

Advertisement
Click to comment

You must be logged in to post a comment Login

Leave a Reply