Connect with us

    DAKSHINA KANNADA

    ಮಂಗಳೂರು ವಿಮಾನ ನಿಲ್ದಾಣದಲ್ಲಿ ಭಯೋತ್ಪಾದಕರ ಟ್ರಯಲ್ ರನ್

    ಮಂಗಳೂರು ವಿಮಾನ ನಿಲ್ದಾಣದಲ್ಲಿ ಭಯೋತ್ಪಾದಕರ ಟ್ರಯಲ್ ರನ್

    ಮಂಗಳೂರು ಸೆಪ್ಟೆಂಬರ್ 21: ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದ್ದ ಮೊಬೈಲ್ ಪವರ್ ಬ್ಯಾಂಕ್ ನಕಲಿ ಬಾಂಬ್ ಪ್ರಕರಣದ ಕುರಿತು ಅನುಮಾನ ದಟ್ಟವಾಗುತ್ತಿದೆ. ಇಂತಹುದೇ ಪವರ್ ಬ್ಯಾಂಕ್ ಪ್ರಕರಣಗಳು ದೇಶದ ಇತರ ವಿಮಾನ ನಿಲ್ದಾಣಗಳಲ್ಲಿ ಪತ್ತೆಯಾಗಿವೆ. ಕಳೆದ ಮೂರು ದಿನಗಳಲ್ಲಿ ಆರು ಇಂತಹ ಪ್ರಕರಣಗಳು ಬೆಳಕಿಗೆ ಬಂದಿದೆ. ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೊಬೈಲ್ ಪವರ್ ಬ್ಯಾಂಕ್ ನಕಲಿ ಬಾಂಬ್ ನಂತಹ ವಸ್ತು ಪತ್ತೆಯಾಗಿರುವುದು ಭಾರಿ ಆತಂಕ್ಕೆ ಕಾರಣವಾಗಿದೆ.

    ಇದೊಂದು ಭಯೋತ್ಪಾದಕರ ಟ್ರಯಲ್ ರನ್ ಇರಬಹುದೇ ಅನ್ನೋ ಅನುಮಾನ ದಟ್ಟವಾಗಿದೆ. ಏಕೆಂದರೆ ಮೊಬೈಲ್ ಪವರ್ ಬ್ಯಾಂಕ್ ನಲ್ಲಿ ಜೇಡಿ ಮಣ್ಣನ್ನು ಹುದುಗಿಸಿಟ್ಟು ಅದರಲ್ಲಿ ಬ್ಯಾಟರಿ ಅಳವಡಿಸಲಾಗಿದೆ. ಪವರ್ ಬ್ಯಾಂಕ್ ನಲ್ಲಿ ಜೇಡಿ ಮಣ್ಣನ್ನು ಹುದುಗಿಸಿಟ್ಟ ರೀತಿ, ಬ್ಯಾಟರಿಗೆ ಅಳವಡಿಸಿರುವ ಸರ್ಕಿಟ್ ಇದನ್ನೆಲ್ಲಾ ಗಮನಿಸಿದರೆ ಸುಧಾರಿತ ಸ್ಫೋಟಕ ಐಇಡಿ ಸ್ಪೋಟಕದ ಮಾದರಿಯಲ್ಲಿಯೇ ಇದೆ .

    ಜೇಡಿ ಮಣ್ಣಿಗೂ ಸ್ಪೋಟಕ ಐಇಡಿ ವ್ಯತ್ಯಾಸ

    ಜೇಡಿ ಮಣ್ಣಿಗೂ ಹಾಗೂ ಸುಧಾರಿತ ಸ್ಫೋಟಕ ಐಇಡಿ ಗೂ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ. ಐಇಡಿ ಹಾಗೂ ಜೇಡಿ ಮಣ್ಣು ಒಂದೇ ರೀತಿಯಾಗಿ ಗೋಚರಿಸುತ್ತದೆ. ಈ ಹಿನ್ನೆಲೆಯಲ್ಲಿ ಪವರ್ ಬ್ಯಾಂಕ್ ನಲ್ಲಿ ಜೇಡಿ ಮಣ್ಣನ್ನು ಹುದುಗಿಸಿ ಭಯೋತ್ಪಾದಕರು ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿ ಅಲರ್ಟ್ ನ್ನು ಚೆಕ್ ಮಾಡಿದ್ದಾರೆಯೇ ಎನ್ನುವ ಅನುಮಾನವಿದೆ.

    ಇದೊಂದು ಭಯೋತ್ಪಾದಕರ ಡ್ರೈ ರನ್ ಅನ್ನುವ ಅನುಮಾನ ಭದ್ರತಾ ಏಜೆನ್ಸಿಗಳದ್ದಾಗಿದೆ. ಇಂತಹ ಸರಣಿ ಪ್ರಕರಣಗಳು ಈ ಅನುಮಾನಕ್ಕೆ ಪುಷ್ಟಿ ನೀಡುತ್ತಿವೆ. ಈ ನಡುವೆ ನಾಗರಿಕ ವಿಮಾನಯಾನ ಇಲಾಖೆಯ ಭದ್ರತಾ ವಿಭಾಗ ( BCAS ) ಈ ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಬೇಕೆಂದು ಕೋರಿದೆ.

    ಮಂಗಳೂರು ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದ್ದ ಕಣ್ಣೂರು ನಿವಾಸಿ ಮನ್ಸೂರ್ ನನ್ನು ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply