LATEST NEWS
ಎರ್ನಾಕುಲಂ – ಪೊಲೀಸರ ಮೇಲೆ ದಾಳಿ ಮಾಡಿದ ಚರ್ಚ್ ಪಾದ್ರಿಗಳ ವಿರುದ್ದ ಎಫ್ಐಆರ್
ಎರ್ನಾಕುಲಂ ಜನವರಿ 12: ಜನವರಿ 11 ರಂದು ಎರ್ನಾಕುಲಂ-ಅಂಗಮಾಲಿ ಆರ್ಚ್‌ಡಯಾಸಿಸ್‌ನ ಬಿಷಪ್ ಹೌಸ್‌ನಲ್ಲಿ ನಡೆದ ಪ್ರತಿಭಟನೆಯ ವೇಳೆ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಭಾನುವಾರ 20 ಪಾದ್ರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಎರ್ನಾಕುಲಂ ಸೆಂಟ್ರಲ್ ಪೊಲೀಸರು ಗುರುತಿಸಬಹುದಾದ ಪುರೋಹಿತರ ವಿರುದ್ಧ ಬಿಎನ್‌ಎಸ್‌ನ ಸೆಕ್ಷನ್ 189 (2), 190, 191 (2), ಮತ್ತು 121 (2) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಯುನಿಫೈಡ್ ಹೋಲಿ ಮಾಸ್ ವಿರೋಧಿಸಿ ಹಾಗೂ ಅಪೋಸ್ಟೋಲಿಕ್ ಆಡಳಿತಾಧಿಕಾರಿ ನೀಡಿದ ಕೆಲವು ದಾಖಲೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಉಪವಾಸ ನಡೆಸುತ್ತಿದ್ದ ಹಲವಾರು ಪಾದ್ರಿಗಳನ್ನು ಪೊಲೀಸರು ಶನಿವಾರ ಅಲ್ಲಿಂದ ತೆರವುಗೊಳಿಸಿದ ನಂತರ ಬಿಷಪ್ ಹೌಸ್ ಹೊರಗೆ ಹಲವಾರು ಗಂಟೆಗಳ ಕಾಲ ಉದ್ವಿಗ್ನತೆ ಉಂಟಾಗಿತ್ತು. ಈ ವೇಳೆ ಕೆಲವರು ಬಿಷಪ್ ಹೌಸ್ ಒಳಗೆ ನುಗ್ಗಲು ಯತ್ನಿಸಿದ್ದಾರೆ ಈ ವೇಳೆ ಪೊಲೀಸರು ತಡೆದಿದ್ದಾರೆ. ಈ ವೇಳೆ ನೂಕು ನುಗ್ಗಲು ಉಂಟಾಗಿ ಹಲವರಿಗೆ ಗಾಯಗಳಾಗಿದೆ.
ಏತನ್ಮಧ್ಯೆ, ಪ್ರತಿಭಟನೆಯ ಹಿನ್ನೆಲೆಯಲ್ಲಿ ಎರ್ನಾಕುಲಂ-ಅಂಗಮಾಲಿ ಆರ್ಚ್‌ಬಿಷಪ್‌ನ ಮೇಜರ್ ಆರ್ಚ್‌ಬಿಷಪ್‌ನ ವಿಕಾರ್ ಆಗಿ ನೇಮಕಗೊಂಡ ಆರ್ಚ್‌ಬಿಷಪ್ ಮಾರ್ ಜೋಸೆಫ್ ಪಂಪ್ಲಾನಿ ಭಾನುವಾರ ಪ್ರತಿಭಟನಾಕಾರರನ್ನು ಮುಕ್ತ ಸಂವಾದಗಳ ಮೂಲಕ ಸೌಹಾರ್ದಯುತವಾಗಿ ಪರಿಹರಿಸುವಂತೆ ಒತ್ತಾಯಿಸಿದರು.
ಏಕೀಕೃತ ಪವಿತ್ರ ಮಾಸ್ ಕುರಿತು ನಡೆಯುತ್ತಿರುವ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಪಂಪ್ಲಾನಿ, ಪೋಪ್ ಫ್ರಾನ್ಸಿಸ್ ಅವರು ಅನುಮೋದಿಸಿದ ನಿರ್ಧಾರವನ್ನು ಬದಲಾಯಿಸುವುದು ಅಸಾಧ್ಯ ಎಂದು ಮಾಧ್ಯಮಗಳಿಗೆ ತಿಳಿಸಿದರು. ಭಾನುವಾರವೂ ಬಿಷಪ್ ಹೌಸ್‌ನ ಹೊರಭಾಗದಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. “ನಾವು ಪರಿಸ್ಥಿತಿಯನ್ನು ಶಾಂತಿಯುತವಾಗಿ ನಿರ್ವಹಿಸಲು ಪ್ರಯತ್ನಿಸುತ್ತಿದ್ದೇವೆ” ಎಂದು ಎರ್ನಾಕುಲಂ ಎಸಿಪಿ ಸಿ ಜಯಕುಮಾರ್ ಹೇಳಿದ್ದಾರೆ.