BANTWAL
ಮೇರಿ ಮೂರ್ತಿ ಆರಾಧನಾ ಜಾಗದಲ್ಲಿ ಕೊರಗಜ್ಜ ದೈವ
ಮೇರಿ ಮೂರ್ತಿ ಆರಾಧನಾ ಜಾಗದಲ್ಲಿ ಕೊರಗಜ್ಜ ದೈವ
ಬಂಟ್ವಾಳ ಸೆಪ್ಟೆಂಬರ್ 28: ಮೇರಿಯ ಮೂರ್ತಿಯನ್ನಿಟ್ಟು ಆರಾಧನೆ ಮಾಡುತ್ತಿದ್ದ ಸ್ಥಳಕ್ಕಿ ಹಿಂದೂ ಸಂಘಟನೆಯ ಕಾರ್ಯಕರ್ತರು ದಾಳಿ ಮಾಡಿ ಕೊರಗಜ್ಜ ದೈವದ ಮೂರ್ತಿ ಇರಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುಂಟ್ರಕಳ ಎಂಬಲ್ಲಿ ನಡೆದಿದೆ.
ಕಳೆದ 45 ವರ್ಷಗಳಿಂದ ಕ್ರಿಶ್ಚಿಯನ್ನರು ಮೇರಿ ಮೂರ್ತಿ ಯನ್ನಿಟ್ಟು ಆರಾಧನೆ ಮಾಡುತ್ತಿದ್ದು ಸರ್ಕಾರಿ ಜಾಗದಲ್ಲಿ ಆರಾಧನೆ ಬಗ್ಗೆ ಹಿಂದೂ ಸಂಘಟನೆಯ ಕಾರ್ಯಕರ್ತರು ಆಕ್ಷೇಪ ಎತ್ತಿದ್ದು ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಗುಡಿಕಟ್ಟಿ ಆರಾಧನೆ ಮಾಡುತ್ತಿರುವುದನ್ನು ವಿರೋಧ ವ್ಯಕ್ತಪಡಿಸಿದ್ದರು.
ಈ ನಿನ್ನೆ ಮಧ್ಯರಾತ್ರಿ ಮೇರಿ ಮೂರ್ತಿ ಇದ್ದ ಪ್ರದೇಶದಲ್ಲಿ ಕೊರಗಜ್ಜ ದೈವದ ಮೂರ್ತಿ ಇರಿಸಿ ಸುತ್ತಲೂ ಕೇಸರಿ ಬಂಟಿಗ್ಸ್ ಕಟ್ಟಿದ್ದಾರೆ. ವಿಷಯ ಬಹಿರಂಗವಾಗುತ್ತಿದ್ದಂತೆಯೇ ಎರಡೂ ಸಮುದಾಯದ ಯುವಕರ ಗುಂಪು ಸ್ಥಳದಲ್ಲಿ ಜಮಾಯಿಸಿದ್ದು, ಬಿಗುವಿನ ವಾತವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವೀಕಾಂತೇ ಗೌಡ ಗುಂಪು ಚದುರಿಸಿದ್ದಾರೆ. ಬಂಟ್ವಾಳ ತಹಶಿಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.