DAKSHINA KANNADA
ರಾಜರಾಂ ಭಟ್ಟರ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ತಾತ್ಕಾಲಿಕ ಬ್ರೇಕ್ : ಗೋಕಳ್ಳರ ಬಂಧನಕ್ಕೆ ಗಡುವು

ರಾಜರಾಂ ಭಟ್ಟರ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ತಾತ್ಕಾಲಿಕ ಬ್ರೇಕ್ : ಗೋಕಳ್ಳರ ಬಂಧನಕ್ಕೆ ಗಡುವು
ಮಂಗಳೂರು, ಏಪ್ರಿಲ್ 09 :ಗೋಕಳ್ಳರ ಬಂಧನಕ್ಕೆ ಆಗ್ರಹಿಸಿ ಕಳೆದ 9 ದಿನಗಳಿಂದ ನಡೆಯುತ್ತಿದ್ದ ಅಮರಣಾಂತ ಉಪವಾಸ ನಿರಶನ ರಾಜಾರಾಂ ಭಟ್ ಅವರು ಕೈಬಿಟ್ಟಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಭರವಸೆಗೆ ನೀಡಿದ ಹಿನ್ನೆಲೆಯಲ್ಲಿ ರಾಜರಾಂ ಭಟ್ ಅವರು ನಿರಶನ ಅಂತ್ಯಗೊಳಿಸಿದರು.

ಕೈರಂಗಳ ಅಮೃತಾಧಾರ ಗೋಶಾಲೆಯಲ್ಲಿ ತಲವಾರು ತೋರಿಸಿ, ಬೆದರಿಸಿ ಗೋವುಗಳನ್ನು ದುಷ್ಕರ್ಮಿಗಳು ಕದ್ದೊಯ್ದಿದ್ದರು.
ಈ ಹಿನ್ನೆಲೆಯಲ್ಲಿ ಗೋಕಳ್ಳರ ಬಂಧನ ನಡೆಸಬೇಕೆಂದು ಕಳೆದ 9 ದಿನಗಳಿಂದ ರಾಜರಾಂ ಭಟ್ ಅವರು ಅನ್ನ- ಆಹಾರ ಸೇವಿಸದೆ ಅಮ್ರತಾಧಾರ ಗೋಶಾಲೆಯಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು.ಶನಿವಾರ ಮಧ್ಯರಾತ್ರಿ ನಿರಶನದಿಂದ ರಾಜರಾಂ ಭಟ್ ಅವರ ಆರೋಗ್ಯ ಹದಗೆಟ್ಟಿದ್ದು ಪೋಲಿಸ್ ಅಧಿಕಾರಿಗಳು ಬಲವಂತವಾಗಿ ಖಾಸಾಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಆದರೆ ಆಸ್ಪತ್ರೆಯಲಲೂ ಭಟ್ ಅವರು ನಿರಶನ ಮುಂದುವರೆಸಿದ್ದು, ಇದು ಪೋಲಿಸರಿಗೆ ತಲೆ ನೋವು ತಂದಿತ್ತು. ಇಂದು ಆಸ್ಪತ್ರೆಗೆ ಭೇಟಿ ನೀಡಿದ ಪೋಲಿಸ್ ಆಯುಕ್ತರು ನಿರಶನ ನಿಲ್ಲಿಸುವಂತೆ ಋಅಜರಾಂ ಭಟ್ ಅವರ ಮನವೊಲಿಸಿದ್ದರು.
ಗೋವು ಕಳ್ಳತನದ ನೈಜ ಅಪರಾಧಿಗಳನ್ನು ಬಂಧಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ರಾಜಾರಾಂ ಭಟ್ ಅವರು ಪೇಜಾವರ ಶ್ರೀಗಳಿಂದ ಹಾಲು ಸ್ವೀಕರಿಸಿ ನಿರಶನ ಅಂತ್ಯಮಾಡಿದ್ದಾರೆ.