DAKSHINA KANNADA
ಚುನಾವಣೆಗೆ ಸ್ಪರ್ಧಿಸದಿರಲು ಅಮರನಾಥ್ ಶೆಟ್ಟಿ ನಿರ್ಧಾರ – ಬಿಜೆಪಿಯಲ್ಲಿ ಅರಳಿದ ಗೆಲುವಿ ಕನಸು
ಚುನಾವಣೆಗೆ ಸ್ಪರ್ಧಿಸದಿರಲು ಅಮರನಾಥ್ ಶೆಟ್ಟಿ ನಿರ್ಧಾರ – ಬಿಜೆಪಿಯಲ್ಲಿ ಅರಳಿದ ಗೆಲುವಿ ಕನಸು
ಮಂಗಳೂರು ಎಪ್ರಿಲ್ 9: ದಕ್ಷಿಣಕನ್ನಡ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆಲವು ಸಾಧಿಸಲು ಸಾಧ್ಯವಾಗದ ಕ್ಷೇತ್ರವಾಗಿರುವ ಮುಲ್ಕಿ ಮೂಡಬಿದಿರೆ ಕ್ಷೇತ್ರ ಈ ಬಾರಿ ಸುಲಭ ತುತ್ತಾಗಲಿದೆ ಎಂದು ಹೇಳಲಾಗಿದೆ. ಸ್ಥಳೀಯ ಜೆಡಿಎಸ್ ಮುಖಂಡ ಮಾಜಿ ಸಚಿವ ಅಮರನಾಥ ಶೆಟ್ಟಿ ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿಕೆ ನೀಡಿರುವುದು ಬಿಜೆಪಿ ಪಾಳಯದಲ್ಲಿ ಸಂತಸ ಮೂಡಿಸಿದೆ.
ಕಳೆದ ಎರಡು ವಿಧಾನಸಭಾ ಚುನಾವಣೆಯಲ್ಲಿ ಗೆಲುವನ್ನು ಕೂದಲೆಳೆಯ ಅಂತರದಲ್ಲಿ ಕಳೆದುಕೊಂಡ ಬಿಜೆಪಿ ಸೋಲಿಗೆ ಪ್ರಮುಖ ಕಾರಣವೇ ಅಮರನಾಥ್ ಶೆಟ್ಟಿ ಅವರ ಸ್ಪರ್ಧೆ. ಪ್ರತಿ ಭಾರಿ ಚುನಾವಣೆಯಲ್ಲಿ ಕಾಂಗ್ರೇಸ್ ಹಾಗೂ ಬಿಜೆಪಿ ನಡುವೆ ಹಣಾಹಣಿಯಲ್ಲಿ ಜೆಡಿಎಸ್ ನ ಅಮರನಾಥ್ ಶೆಟ್ಟಿ ಅವರು ಗಮನಾರ್ಹ ಮತಗಳನ್ನು ಪಡೆಯುತ್ತಿದ್ದರು. ಇದು ಬಿಜೆಪಿ ಸೋಲಿಗೆ ಪ್ರಮುಖ ಕಾರಣವಾಗುತ್ತಿತ್ತು. ಅಮರನಾಥ್ ಶೆಟ್ಟಿ ಅವರ ಸ್ಪರ್ಧೆಯಿಂದ ಸ್ವಲ್ಪಮಟ್ಟಿನ ಬಿಜೆಪಿ ಓಟುಗಳು ವಿಭಜನೆಗೊಳ್ಳುತ್ತಿದ್ದವು, ಇದು ಕಾಂಗ್ರೇಸ್ ಗೆ ವರವಾಗಿ ಪ್ರತಿಭಾರಿಯೂ ಕಾಂಗ್ರೇಸ್ ಇಲ್ಲಿ ಗೆಲುವನ್ನು ಕಾಣುತ್ತಿತ್ತು.
ದಕ್ಷಿಣಕನ್ನಡ ಜಿಲ್ಲೆಯ ಮಟ್ಟಿಗೆ ಜೆಡಿಎಸ್ ಪ್ರಾಬಲ್ಯ ಇರುವ ಕ್ಷೇತ್ರ ಮೂಡಬಿದಿರೆ ವಿಧಾನಸಭಾ ಕ್ಷೇತ್ರ. ಇಲ್ಲಿ ಅತ್ಯಂತ ಪ್ರಭಾವಿ ನಾಯಕರು ಮಾಜಿ ಸಚಿವ ಅಮರನಾಥ ಶೆಟ್ಟಿ. ಕಳೆದ ನಾಲ್ಕು ಚುನಾವಣೆಗಳಲ್ಲಿ ಕಾಂಗ್ರೇಸ್ ಅಭ್ಯರ್ಥಿ ಅಭಯ್ ಚಂದ್ರ ಜೈನ್ ಅವರೇ ಆಯ್ಕೆಯಾಗಿದ್ದರು. ಈ ಗೆಲುವಿನಲ್ಲಿ ಜೆಡಿಎಸ್ ನ ಪಾತ್ರ ಬಹುಮುಖ್ಯವಾಗಿತ್ತು.
2008ರಲ್ಲಿ ಜಗದೀಶ್ ಅಧಿಕಾರಿ 34,841 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದರು ಇದರಲ್ಲಿ ಜೆಡಿಎಸ್ ನ ಅಮರನಾಥ ಶೆಟ್ಟಿ 26083 ಮತಗಳನ್ನು ಪಡೆದಿದ್ದರು ಕಾಂಗ್ರೇಸ್ ನ ಅಭಯ್ ಚಂದ್ರ ಜೈನ್ 44744 ಮತಗಳನ್ನು ಪಡೆದು ಗೆಲವು ಸಾಧಿಸಿದ್ದರು.
2013ರಲ್ಲಿ ಉಮನಾಥ್ ಕೋಟ್ಯಾನ್ 48630 ಮತಗಳನ್ನು ಪಡೆದಿದ್ದರು ಈ ಸಂದರ್ಭದಲ್ಲಿ ಬಿಜೆಪಿ ಗೆಲುವಿಗೆ ಮತ್ತೆ ತೊಡಕಾಗಿದ್ದು ಅದೇ ಜೆಡಿಎಸ್ ಈ ಚುನಾವಣೆಯಲ್ಲಿ ಅಮರನಾಥ್ ಶೆಟ್ಟಿ ಅವರು ಸುಮಾರು 20471 ಮತಗಳನ್ನು ಪಡೆದಿದ್ದರು. ಇಲ್ಲೂ ಕೂಡ ಅಭಯ್ ಚಂದ್ರ ಜೈನ್ 53180 ಮತಗಳನ್ನು ಪಡೆದು ಗೆಲವು ಸಾಧಿಸಿದ್ದರು.
ಈ ಎರಡು ಚುನಾವಣೆಯಲ್ಲೂ ಜೆಡಿಎಸ್ ನ ಅಮರನಾಥ್ ಶೆಟ್ಟಿ ಅವರ ಸ್ಪರ್ಧೆ ಬಿಜೆಪಿಗೆ ಬಾರಿ ಹೊಡೆತವನ್ನೇ ನೀಡಿದೆ. ಈ ಹಿನ್ನಲೆಯಲ್ಲಿ ಈ ಬಾರಿ ಅಮರನಾಥ್ ಶೆಟ್ಟಿ ಅವರ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದು, ಬಿಜೆಪಿಗೆ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಇರುವ ಪ್ರಮುಖ ತೊಡಕು ನಿವಾರಣೆಯಾದಂತಾಗಿದೆ.
ಸತತವಾಗಿ ನಾಲ್ಕು ಬಾರಿ ಕಾಂಗ್ರೇಸ್ ನ್ನೆ ಗೆಲ್ಲಿಸಿರುವ ಮೂಡಬಿದಿರೆ ಸದ್ಯ ಕಾಂಗ್ರೇಸ್ ನ ಭದ್ರ ಕೋಟೆ , ಕಾಂಗ್ರೇಸ್ ನಲ್ಲಿ ಯಾರೂ ಸ್ಪರ್ಧಿಸಿದರೂ ಗೆಲುವು ಸಾಧ್ಯ ಎನ್ನುವ ಪರಿಸ್ಥಿತಿ ಇದೆ. ಈ ನಡುವೆ ಅಭಯ್ ಚಂದ್ರ ಜೈನ್ ಈ ಬಾರಿ ಚುನಾವಣೆಯಿಂದ ಹಿಂದಕ್ಕೆ ಸರಿದಿರುವುದು, ಕಾಂಗ್ರೇಸ್ ನಿಂದ ಯುವಕಾಂಗ್ರೇಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಹಾಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ನಡುವೆ ಚುನಾವಣೆ ಟಿಕೇಟ್ ಗಾಗಿ ಪೈಪೋಟಿ ಎರ್ಪಟ್ಟಿದೆ.
ಕಾಂಗ್ರೇಸ್ ನಿಂದ ಈ ಬಾರಿ ಯಾರೇ ಚುನಾವಣೆಗೆ ನಿಂತರೂ ಜೆಡಿಎಸ್ ನ ಅಮರನಾಥ್ ಶೆಟ್ಟಿ ಅವರು ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿದಿರುವುದು, ಸ್ವಲ್ಪಮಟ್ಟಿಗೆ ಹಿನ್ನಡೆಯಾಗಲಿದೆ ಎಂದು ಹೇಳಲಾಗಿದೆ.
You must be logged in to post a comment Login