Connect with us

BELTHANGADI

ಧಾರಾಕಾರ ಮಳೆಗೆ ಪಲ್ಟಿಯಾದ ಟೆಂಪೋ ರಸ್ತೆ ತುಂಬೆಲ್ಲಾ ಕೋಳಿಮೊಟ್ಟೆ…!!

ಧಾರಾಕಾರ ಮಳೆಗೆ ಪಲ್ಟಿಯಾದ ಟೆಂಪೋ ರಸ್ತೆ ತುಂಬೆಲ್ಲಾ ಕೋಳಿಮೊಟ್ಟೆ…!!

ಬೆಳ್ತಂಗಡಿ: ನಿಸರ್ಗ ಚಂಡಮಾರುತ ಹಿನ್ನಲೆ ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಭಾರಿ ಮಳೆಯಿಂದಾಗಿ ಚಾರ್ಮಾಡಿ ಘಾಟಿಯಲ್ಲಿ ಟೆಂಪೋವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಚಾರ್ಮಾಡಿ ಘಾಟಿಯ ಮೂರನೇ ತಿರುವಿನಲ್ಲಿ ಸಂಭವಿಸಿದೆ.

ಚಾರ್ಮಾಡಿ ಘಾಟಿಯಲ್ಲಿ ಭಾರಿ ಮಳೆಯಾಗುತ್ತಿದ್ದು, ಕೋಳಿ ಮೊಟ್ಟೆಗಳನ್ನು ಹೊತ್ತ ಟೆಂಪೋ ಚಾಲಕನಿಗೆ ರಸ್ತೆ ಕಾಣಿಸದೆ ನಿಯಂತ್ರಣ ಕಳೆದುಕೊಂಡು ರಸ್ತೆಯ ಬಲಭಾಗಕ್ಕೆ ಪಲ್ಟಿಯಾಗಿ ಬಿದ್ದಿದೆ. ಪರಿಣಾಮ ಟೆಂಪೋದಲ್ಲಿದ್ದ ಮೊಟ್ಟೆಗಳು ರಸ್ತೆ ತುಂಬಾ ಚೆಲ್ಲಾಪಿಲ್ಲಿಯಾಗಿ ಬಿದ್ದಿತು.


ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ, ಟೆಂಪೋದಲ್ಲಿದ್ದ ಸಾವಿರಾರು ಮೊಟ್ಟೆಗಳು ನಾಶವಾಗಿದೆ. ಚಾರ್ಮಾಡಿಯ ಹಸನಬ್ಬ ಅಂಡ್ ಟೀನಿಂದ ರಕ್ಷಣಾ ಕಾರ್ಯ ನಡೆಸಲಾಯಿತು.

Facebook Comments

comments