LATEST NEWS
ಹಾಡು ಹಗಲೇ ಪೊಲೀಸ್ ಠಾಣೆಯ ಪಕ್ಕದ ದೇವಸ್ಥಾನದಲ್ಲೇ ದನ ಕಳ್ಳತನ ಮಾಡಿದ ಖದೀಮರು
ಹಾಡು ಹಗಲೇ ಪೊಲೀಸ್ ಠಾಣೆಯ ಪಕ್ಕದ ದೇವಸ್ಥಾನದಲ್ಲೇ ದನ ಕಳ್ಳತನ ಮಾಡಿದ ಖದೀಮರು
ಮಂಗಳೂರು ಜುಲೈ 26:- ದಕ್ಷಿಣಕನ್ನಡ ಜಿಲ್ಲೆಯಲ್ಲಿ ದನ ಕಳ್ಳತನ ಅವ್ಯಾಹತವಗಿ ನಡೆಯುತ್ತಿದ್ದು, ಈ ಬಾರಿ ಮಂಗಳೂರು ಪಾಂಡೇಶ್ವರ ಪೊಲೀಸ್ ಠಾಣೆ ಸಮೀಪವೇ ಇರುವ ಮಹಾಲಿಂಗೇಶ್ವರ ದೇವಸ್ಥಾನದ ಎರಡು ದನ ಮತ್ತು ಕರುವನ್ನು ಗೋ ಕಳ್ಳರು ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಪಾಂಡೇಶ್ವರದ ಮಹಾಲಿಂಗೇಶ್ವರ ದೇವಸ್ಥಾನದ ಪಕ್ಕದಲ್ಲಿ ಪಾಂಡೇಶ್ವರ ಪೊಲೀಸ್ ಠಾಣೆಯಿದ್ದು ಸ್ವಲ್ಪ ದೂರದಲ್ಲಿ ಪೊಲೀಸ್ ಆಯುಕ್ತರ ಮನೆ ಕೂಡ ಇದೆ. ಇಂತಹ ಹೈ ಸೆಕ್ಯುರಿಟಿ ಪ್ರದೇಶದಲ್ಲಿದ್ದ ದೇವಸ್ಥಾನದ ದನಗಳನ್ನೇ ಕಳ್ಳರು ಕದ್ದೊಯ್ದಿದ್ದಾರೆ. ಇದು ಮಂಗಳೂರಿನಲ್ಲಿ ಗೋಕಳ್ಳರಿಗೆ ಪೊಲೀಸ್ ಭಯ ಇಲ್ಲದಿರುವುದಕ್ಕೆ ಸೂಕ್ತ ಉದಾಹರಣೆಯಾಗಿದೆ.
ಈ ಪ್ರಕರಣ ನಡೆದಿದ್ದು ಇದೇ ತಿಂಗಳ 5 ರಂದು, ಪಾಂಡೇಶ್ವರ ಮಹಾಲಿಂಗೇಶ್ವರ ದೇವಸ್ಥಾನದ ಸಿಬ್ಬಂದಿಯೊಬ್ಬರು ಪ್ರತಿ ದಿನ ದೇವಸ್ಥಾನದ ಎರಡು ದನ ಹಾಗೂ ಒಂದು ದನವನ್ನು ಮೇಯಲು ಬಿಡುತ್ತಿದ್ದರು. ಜುಲೈ 5 ರಂದು ಇದೇ ರೀತಿ ದನಗಳನ್ನು ಮೇಯಲು ಬೀಡಲಾಗಿತ್ತು.
ಸಂಜೆ ಆದರೂ ದನಗಳು ದೇವಸ್ಥಾನಕ್ಕೆ ವಾಪಾಸ್ ಬರದೇ ಇರುವುದನ್ನು ಮನಗಂಡ ದೇವಸ್ಥಾನದ ಸಿಬ್ಬಂದಿ , ಹುಡುಕಾಟ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಗೂಡ್ ಶೆಟ್ ರೈಲ್ವೆ ಟ್ರ್ಯಾಕ್ ಬಳಿ ಅಪರಿಚಿತರು ಮೇಯುತ್ತಿದ್ದ ದನ ಹಾಗೂ ಕರುವನ್ನು ಹಿಡಿದು ಕಾರಿನಲ್ಲಿ ತುಂಬಿಸುತ್ತಿದ್ದರು.
ಇದನ್ನು ನೋಡಿದ ದೇವಸ್ಥಾನದ ಸಿಬ್ಬಂದಿ ಬೊಬ್ಬೆ ಹಾಕಿದ್ದಾರೆ. ಆ ಕೂಡಲೇ ಕಾರಿನಲ್ಲಿ ಬಂದ ಅಪರಿಚಿತರು ದೇವಸ್ಥಾನದ ಸಿಬ್ಬಂದಿಯನ್ನು ಬೆದರಿಸಿ ಬಲತ್ಕಾರವಾಗಿ ದನ ಮತ್ತು ಕರುಗಳನ್ನು ತುಂಬಿಸಿ ಹೊಯಿಗೆ ಬಜಾರ ಕಡೆ ತೆರಳಿದ್ದಾರೆ ಎಂದು ಹೇಳಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.